ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಭೀಕರ ಅಪಘಾತ ಓರ್ವನ ಕಾಲಿಗೆ ತೀವ್ರ ಗಾಯ

Fatal accident near Bendigeri petrol station leaves one seriously injured in the leg

ಮುಂಡಗೋಡ 17: ಪಟ್ಟಣದ ಸಿರ್ಸಿ ಹುಬ್ಬಳ್ಳಿ ರಸ್ತೆಯಲ್ಲಿ ಇರುವ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಎಕ್ಸೆಲ್ ಬೈಕ್‌ಗೆ ಡಿಕ್ಕಿಯಾಗಿ ಭೀಕರ ಅಪಘಾತವಾಗಿದೆ. ಪೆಟ್ರೊಲ್ ತುಂಬಿಸಿಕೊಂಡು ಬರುತ್ತಿದ್ದ. ಎಕ್ಸೆಲ್ ಬೈಕ ಸವಾರನ ಬಲಗಾಲು ಕಟ್ ಆಗಿದ್ದು ಗಂಭೀರ ಗಾಯವಾಗಿದೆ.   ಮುಂಡಗೋಡ ತಾಲೂಕಿನ ಚೌಡಳ್ಳಿಯ ಗ್ರಾಮದ ಸಹದೇವ್ ಮಾಯಣ್ಣವರ (65) ಎಂಬುವವರೇ ಅಪಘಾತಕ್ಕೀಡಾಗಿದ್ದಾರೆ.  

ಸದ್ಯ ತಾಲೂಕಾಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.