ಸತ್ಯ ಅಹಿಂಸೆ ಪ್ರೇಮದಿಂದ ಏನನ್ನಾದರೂ ಗೆಲ್ಲಬಹುದು: ಸಂಕನೂರು

ಗದಗ: ಸತ್ಯ ಅಹಿಂಸೆ ಪ್ರೇಮದಿಂದ ಏನನ್ನಾದರೂ ಗೆಲ್ಲಬಹುದು ಎಂಬುದೇ ಗಾಂಧೀಜಿಯ ಜೀವನ  ಸಂದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ನುಡಿದರು. 

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತದ  ಮುಖ್ಯ ಸಭಾಂಗಣದಲ್ಲಿಂದು ಏರ್ಪಡಿಸಿದ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ  ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಕಾಯಕ ನಿಷ್ಠಯನ್ನು ಮೆರೆದ  ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಗಾಂಧೀಜಿಯವರ ಕೊಡುಗೆ ದೇಶಕ್ಕೆ ಅಪಾರವಾದದ್ದು,  ಅವರ  ಹೋರಾಟದ ಕನಸುಗಳನ್ನು ನನಸು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪರಿಸರ ಹಾಗೂ ಸ್ವಚ್ಛತೆಗೆ ಹೆಚ್ಚು ಕಾಳಜಿ ವಹಿಸಿದ್ದು. ಸ್ವಚ್ಚತಾ ಅಭಿಯಾನದ ಜೊತೆಗೆ ಈ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಆರಂಭಿಸಿದೆ ಎಂದು  ಸಂಕನೂರು ತಿಳಿಸಿದರು.

       ಸಮಾರಂಭದ ಉಪನ್ಯಾಸ ನೀಡಿದ ಮಂಜುನಾಥ ಬೊಮ್ಮನಕಟ್ಟಿ ಅವರು  ಗಾಂಧೀಜಿಯವರು ಪ್ರಭಾವಿ ಪ್ರಚಾರ ಸಂಪರ್ಕ ವ್ಯವಸ್ಥೆಗಳಿಲ್ಲದೇ ದಾಸ್ಯದ ಕುರಿತು ಅಂದು 35 ಕೋಟಿ ಭಾರತೀಯರ ಸಿಟ್ಟನ್ನು ಸತ್ಯಾಗ್ರಹ  ಅಸ್ತ್ರವಾಗಿಸಿ ದೇಶಕ್ಕೆ ಸ್ವಾತಂತ್ಯ ನೀಡಿದ ಮಹಾನ್  ಶಕ್ತಿ ಎಂದರು. ಹುಟ್ಟು ಕುರುಡರ ಓಣಿಯಲ್ಲಿ ಚಾಳೀಸ್ ಮಾರಿದವರೆಂದು   ಗಾಂಧೀಜಿಯವರ ಕುರಿತು ಉಪಮೆ ಅವರ  ಶ್ರೇಷ್ಠೆತೆಗೆ ಹಿಡಿದ ಕನ್ನಡಿಯಾಗಿದೆ. ಮಾಟರ್ಿನ್ ಲೂಥರ್ ಕಿಂಗ್ಗೆ ಏಸು ಕ್ರಿಸ್ತನ ಜೊತೆಗೆ ಗಾಂಧೀಜಿಯವರು ಓರ್ವ ದೇವರಾಗಿದ್ದರು. ಅಂತಹ ಬದುಕು ಕಲಿಸಿದ  ಮಹಾತ್ಮ ಗಾಂಧೀಜಿಯವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯ ಇದೆ ಎಂದು ಬೊಮ್ಮನಕಟ್ಟಿ ನುಡಿದರು.  

         ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ ಪಾಪು ಬಾಪು ಕಿರು ಪುಸ್ತಕವನ್ನು ಗದಗ ಜಿಲ್ಲಾ ಪಂಚಾಯತ್  ಅಧ್ಯಕ್ಷ ಕುಮಾರ ಸಿದ್ದಲಿಂಗೇಶ್ವರ ಎಚ್. ಪಾಟೀಲ್ ಬಿಡುಗಡೆ ಮಾಡಿದರು. ಇಲಾಖೆಯು ನಿಮರ್ಿಸಿದ ಮಹಾತ್ಮಾ  ಗಾಂಧೀಜಿ ಸಾಕ್ಷ್ಯ ಚಿತ್ರವನ್ನು ಪ್ರದಶರ್ಿಸಲಾಯಿತು.  

        ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಶಾಲೆಯ ಶಿಕ್ಷಕ ಗಡ್ಡದಮಠ ನೇತೃತ್ವದ ವಿದ್ಯಾಥರ್ಿಗಳ ತಂಡದವರು, ಆರಂಭದಲ್ಲಿ  ಪ್ರಾರ್ಥನೆ, ನಾಡಗೀತೆ ಹಾಗೂ   ಗಾಂಧೀಜಿಗೆ ಪ್ರಿಯವಾದ ವೈಷ್ಣವ ಜನತೋ...   ರಘುಪತಿ ರಾಗವ ರಾಜಾರಾಮ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.  ಪಂಡಿತ ಪುಟ್ಟರಾಜ  ಸಂಗೀತ ಶಾಲೆಯ ಶಿಕ್ಷಕ ವೆಂಕಟೇಶ ಅಲ್ಕೋಡ ನೇತೃತ್ವದ ಮೀರಾ  ಭಜನೆಗಳು ಗಮನ ಸೆಳೆದವು.

        ಸಾರ್ವಜನಿಕ ಶಿಕ್ಷಣ ಇಲಾಖೆಯು ಗಾಂಧೀಜಿ ಜನ್ಮ ದಿನಾಚರಣೆಗೆ ಅಂಗವಾಗಿ ಏರ್ಪಡಿಸಿದ್ದ ಭಾಷಣ, ಪ್ರಬಂಧ, ಹಾಗೂ  ರಸ ಪ್ರಶ್ನೆಗಳ ಜಿಲ್ಲಾ ಮಟ್ಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.  

           ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಡಾ. ಆನಂದ ಕೆ,  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರುದ್ರೇಶ,  ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆ ಯರು, ನಸರ್ಿಂಗ್ ಸೇರಿದಂತೆ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು  ಸಮಾಂಭದಲ್ಲಿ  ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಚ್.ನಾಗೂರು ಸ್ವಾಗತಿಸಿದರು. ಎಸ್.ಎಸ್.ಗೌಡರ ಕಾರ್ಯಕ್ರಮ ನಿರೂಪಿಸಿದರು. ಲೋಯಲಾ ಪ್ರೌಢ ಶಾಲೆ ವಿದ್ಯಾರ್ಥಿ ಗಳು ಸರ್ವ ಧರ್ಮ  ಪ್ರಾರ್ಥನೆ ಮಾಡಿದರು.