ಚಂದೌಲಿ, ಜ 29 : ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದಲ್ಲಿ ಬುಧವಾರ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಪಿಎಸಿ ವಾಹನಕ್ಕೆ ನುಗ್ಗಿ ಏಳು ಮಂದಿ ಗಾಯಗೊಂಡಿದ್ದಾರೆ.
ಘರ್ಷಣೆ ತುಂಬಾ ತೀವ್ರವಾಗಿದ್ದು, ಪಿಎಸಿ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿ ಯೋಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ಜನರು ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಪಿಎಸಿ ಯೋಧರು ತಮ್ಮ ಕರ್ತವ್ಯಕ್ಕಾನವೀನ್ ಮಂಡಿ ಸ್ಥಾಲ್‌ನಲ್ಲಿರುವ ತಮ್ಮ ಶಿಬಿರದಿಂದ ಸುಮಾರು 10 ಗಂಟೆಗೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದರು.
ಅವರ ವಾಹನವು ಫುಟಿಯಾ ಗ್ರಾಮವನ್ನು ಸಮೀಪಿಸಿದ ತಕ್ಷಣ, ರಸ್ತೆ ದಾಟಲು ಹೊರಟಿದ್ದ ವಾಹನವೊಂದು ಇದ್ದಕ್ಕಿದ್ದಂತೆ ತಿರುವು ಪಡೆದುಕೊಂಡಿತು.
ಇದನ್ನು ನೋಡಿದ, ಹಿಂದಿನಿಂದ ಬರುತ್ತಿದ್ದ ವೇಗದ ಟ್ರಕ್‌ನ ಚಾಲಕ, ವಾಹನವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿದಾಗ ಪಿಎಸಿ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.