ಬಡವರೊಟ್ಟಿಗೆ ರಂಜಾನ್ ಆಚರಿಸುವುದೇ ನಿಜವಾದ ಹಬ್ಬ: ಅಯ್ಯುಬ ಮನಿಯಾರ್ ತಾಳಿಕೋಟಿಯಲ್ಲಿ 100 ಕುಟುಂಬಗಳಿಗೆ ಈದ್ ಕಿಟ್ ವಿತರಣೆ ಽ 28 ವರ್ಷಗಳಿಂದ ನಿರಂತರ ಸಮಾಜ ಸೇವೆ
Celebrating Ramadan with the poor is the real festival: Ayyuba Maniyar Distributing Eid kits to 100
ತಾಳಿಕೋಟೆ 17 : ಹಬ್ಬಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿರದೆ ಸಮಾಜದ ಬಡವರು ಹಾಗೂ ಅಗತ್ಯವಿರುವವರೊಟ್ಟಿಗೆ ಹಂಚಿಕೊಂಡಾಗಲೇ ಅದರ ನಿಜವಾದ ಅರ್ಥ ಸಾರ್ಥಕವಾಗುತ್ತದೆ ಎಂದು ಮುದ್ದೇಬಿಹಾಳದ ಖ್ಯಾತ ಉದ್ಯಮಿದಾರ ಹಾಗೂ ಸಮಾಜಸೇವಕರಾದ ಅಯ್ಯುಬ ಮನಿಯಾರ್ ಅವರು ತಾವು ಹುಟ್ಟಿದ ನಾಲತವಾಡ ಪಟ್ಟಣದ ಜಾಮಿಯಾ ಮಸೀದಿ ಹಾಗೂ ತಾಳಿಕೋಟೆ ಪಟ್ಟಣದ ಮಜ್ಜಿದ್ ಆಲಾದಲ್ಲಿ ದಿನಸಿ ಕಿಟ್ ಗಳನ್ನು ವಿತರಿಸಿ ಹಬ್ಬದ ಸಂತಸ ಹಂಚಿಕೊಂಡು ಮಾತನಾಡಿದ ಅಯ್ಯುಬ್ ಮನಿಯಾರ ಅವರು ನನ್ನ ಅಗಲಿದ ತಂದೆ ಮದನಸಾಬ ಹಾಗೂ ತಾಯಿ ಅಮೀನಬಿ ಅವರ ಸ್ಮರಣಾರ್ಥಪ್ರತಿ ವರ್ಷ ಈ ದಿನಸಿ ಕಿಟ್ ನೀಡುತ್ತೇನೆ.
ಈ ಕಿಟ್ ನೀಡುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನೆಲ್ಲಾ ಭೇಟಿ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಒಬ್ಬ ಅಣ್ಣ ತನ್ನ ತಂಗಿಯನ್ನು ಒಬ್ಬ ಮಗ ತನ್ನ ತಾಯಿಯನ್ನು ನೋಡಲು ಬರುವಂತೆ ನಾನು ಪ್ರತಿ ವರ್ಷ ನಿಮ್ಮನ್ನು ಕಾಣಲು ಬರುತ್ತೇನೆ ಈ ಕಿಟ್ ಬೆಲೆ ನಿಮ್ಮ ಪ್ರೀತಿ ವಾಸ್ತಲ್ಯಕ್ಕೆ ಸಮವಲ್ಲ ನನ್ನ ಪೋಷಕರಿಗೆ ಸ್ವರ್ಗ ಪ್ರಾಪ್ತಿ ಯಾಗಲಿ ಎಂದು ತಾವು ಪ್ರಾರ್ಥಿಸಿ ಎಂದು ಭಾವುಕರಾಗಿ ಕೇಳಿಕೊಂಡರು.ನಗರದ ಮಸ್ಜಿದೆ-ಆಲಾ ಸಭಾಂಗಣದಲ್ಲಿ ನಡೆದ ಈದ್ ಕಿಟ್ ವಿತರಣಾ ರಂಜಾನ್ ತಿಂಗಳು ತ್ಯಾಗ, ಬಲಿದಾನ ಮತ್ತು ಹಬ್ಬ ಆಚರಿಸಿದ ಸಂತೋಷ ಸಿಗುತ್ತದೆ. ಆದ್ದರಿಂದ ಬಡವರೊಟ್ಟಿಗೆ ರಂಜಾನ್ ಹಬ್ಬವನ್ನು ಆಚರಿಸುವುದೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರಾದ ಮೊಹಮ್ಮದ್ ಖಾಸಿಂ ನಮಾಜಕಟ್ಟಿ, ಅಯ್ಯುಬ ಮನಿಯಾರ್ ಅವರು ಕಳೆದ 28 ವರ್ಷಗಳಿಂದ ನಿರಂತರವಾಗಿ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು. 1998ರಲ್ಲಿ ಕೇವಲ 14 ಕಿಟ್ಗಳಿಂದ ಆರಂಭವಾದ ಈ ಸೇವೆ ಇಂದು ಸುಮಾರು 800ಕ್ಕೂ ಹೆಚ್ಚು ಕುಟುಂಬಗಳಿಗೆ ತಲುಪಿದೆ. ತಾಳಿಕೋಟಿ, ನಾಲತವಾಡ, ಮುದ್ದೇಬಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನೊಳಗೊಂಡ ಈದ್ ಕಿಟ್ಗಳನ್ನು ವಿತರಿಸುವ ಮೂಲಕ ಅವರು ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದಲ್ಲದೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ವಿಧವೆಯರಿಗೆ ಮಾಸಿಕ ಪಿಂಚಣಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಇಂಜಿನಿಯರ್ ಮುರ್ತುಜಾ ಮ್ಹೇತ್ರಿ, ಇಬ್ರಾಹಿಮ್ ಸಾಬ ಆರ್ಬೋಳ, ಹಬೀಬಸಾಬ ಮಾನ್ವಿ, ಖುತ್ಬುದ್ದಿನ್ ಮೋಮಿನ್, ಮಹಿಬೂಬ ಯಕೀನ, ಪತ್ರಕರ್ತ ರಾಜೇಶ್ ಇನಾಮದಾರ, ಎಲ್.ಎಚ್. ಮಮದಾಪೂರ, ಆಫ್ತಾಬ ಮನಿಯಾರ್, ಬಾಬಾ ಯಕೀನ ಸೇರಿದಂತೆ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.ಶಿಕ್ಷಕರಾದ ಇರ್ಫಾನ್ ಕಾಜಿ ಕುರ್‌ಆನ್ ಪಠಿಸಿದರು. ಇಲಿಯಾಸ್ ಚೌದ್ರಿ ಕಾರ್ಯಕ್ರಮ ನಿರೂಪಿಸಿದರು. ಮುಜಾಹಿದ್ ನಮಾಜಕಟ್ಟಿ ವಂದಿಸಿದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 