ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದ 2 ದಿನಗಳ ಅಂತರ ಮಹಾ ವಿದ್ಯಾಲಯಗಳ ಖೋಖೋ ಪಂದ್ಯಾವಳಿಗೆ ಚಾಲನೆ
Koppal University level 2-day inter-college Khokho tournament kicks off
ಗಂಗಾವತಿ 17 : ಕೊಪ್ಪಳ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ಎರಡು ದಿನಗಳ ಖೋ ಖೋ (ಪುರುಷ ಹಾಗೂ ಮಹಿಳಾ) ಪಂದ್ಯಾವಳಿಗಳು ಹಾಗೂ ಕೊಪ್ಪಳ ವಿಶ್ವವಿದ್ಯಾಲಯ ತಂಡದ ಆಯ್ಕೆಗೆ ಗಂಗಾವತಿಯ ಎಸ್.ಕೆ.ಎನ್.ಜಿ ಮಹಾವಿದ್ಯಾಲಯದಲ್ಲಿ ಇಂದು ಚಾಲನೆ ನೀಡಲಾಯಿತು. ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಕೊಪ್ಪಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಈ ಅಂತರ್ ಮಹಾವಿದ್ಯಾಲಯಗಳ ಈ ಖೋ ಖೋ ಪಂದ್ಯಾವಳಿಗೆ ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ವೀರೇಶ ಬಲಕುಂದಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರಿಕೇಟ್ ಹಾವಳಿಯಿಂದಾಗಿ ದೇಶೀ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖೋ ಖೋ ಪಂದ್ಯಾವಳಿಗಳಿಗೆ ಕೊಪ್ಪಳ ವಿಶ್ವವಿದ್ಯಾಲಯ ಬೆಂಬಲ ನೀಡುತ್ತಿರುವುದು,ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಖೋ ಖೋ ಕ್ರೀಡೆಗಳು ಓಲಂಪಿಕ್ ಕ್ರೀಡಾ ಕೂಟಗಳಲ್ಲಿ ಸೇರೆ್ಡಗೊಂಡು, ದೇಶೀ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತಾಗಬೇಕೆಂದರು.
ನಂತರ ಮಾತನಾಡಿದ ಮುಖ್ಯ ಅತಿಥಿಗಳಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಕೆ.ರಮೇಶ ಅವರು ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಆರೋಗ್ಯ ಸಾಧ್ಯ. ಆರೋಗ್ಯವಂತ ವ್ಯಕ್ತಿಯಿಂದ ಶೈಕ್ಷಣಿಕ ಸಾಧನೆ ಸಾದ್ಯ. ಹೀಗಾಗಿ ಸದೃಢ ಆರೋಗ್ಯಕ್ಕೆ ಕಾರಣವಾಗುವ ಕ್ರೀಡೆಯ ಜೊತೆಗೆ ಶಿಕ್ಷಣ, ಸಂಶೋಧನೆಗೂ ಕೊಪ್ಪಳ ವಿಶ್ವವಿದ್ಯಾಲಯ ಆದ್ಯತೆ ನೀಡುತ್ತದೆ ಎಂದರಲ್ಲದೇ ಕ್ರೀಡೆಗಳಲ್ಲಿ ಗಿಂದಲ ತಪ್ಪಿಸಲು ತಂತ್ರಜ್ಞಾನದ ಬಳಕೆ ಸಹ ಆಗಬೇಕು ಎಂದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿದ್ದ ವಿಶ್ವವಿದ್ಯಾಲಯದಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿಯವರು, ಸಿಡಿಸಿ ಸದಸ್ಯರಾದ ಸೋಮಶೇಖರ್ ಕಂಪ್ಲಿಯವರು, ಮಾಜಿ ನಗರಸಭಾ ಸದಸ್ಯ ಹಾಗೂ ಶಿಕ್ಷಣ ಪ್ರೇಮಿ ಮನೋಹರಗೌಡ ಈ ವೇಳೆ ಮಾತನಾಡಿ ಕ್ರೀಡೆಗಳು ಹಾಗೂ ಸ್ಪರ್ಧಾತ್ಮಕ ಮನೋಭಾವದ ಮಹತ್ವದ ಬಗ್ಗೆ ತಿಳಿಸಿದರಲ್ಲದೇ ಸೋಲು ಸಹ ಗೆಲುವಿನ ಸೋಪಾನವಾಗಲಿದೆ, ಸ್ಪರ್ಧಾ ಮನೋಭಾವದಿಂದ ಆಟವಾಡಲು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿ ಸಿಡಿಸಿ ಸದಸ್ಯರಾದ ರವಿ ಯಲಬುರ್ತಿ, ದೀಪಕ್ ಬಾಂಟ್ಯಾ,ಮಂಜುನಾಥ ಕೆ.ಎಚ್ ಉಪಸ್ಥಿತರಿದ್ದರು. ಕ್ರೋಡಾ ವಿಭಾಗದ ನಿರ್ದೇಶಕರಾದ ಶೋಭಾ ಕೆ, ಅನೀಲಕುಮಾರ ಎಡ್ವರ್ಡ, ಪ್ರಾದ್ಯಾಪಕರುಗಳಾದ ಅಣ್ಣೋಜಿರೆಡ್ಡಿ, ದೊರೆಬಾಬು, ಅಶೋಕ, ಡಾ.ಬಸವರಾಜ ಗಡಾದ ಇನ್ನಿತರರು ಉಪಸ್ಥತರಿದ್ದರು.
ಈ ವೇಳೆ ಜಿಲ್ಲೆಯ ವಿವಿಧ ಕಾಲೇಜುಗಳ ಕ್ರೀಡಾ ನಿರ್ದೇಶಕರು, ಶಿಕ್ಷಕರುಗಳ ಮಾರ್ಗದರ್ಶನದಲ್ಲಿ ವಿವಿಧ ಕಾಲೇಜುಗಳ ಕ್ರೀಡುಪಟುಗಳ ಖೋ ಖೋ ಪಂದ್ಯಾವಳಿಗಳು ನಡೆದವು. ಸುಮಾರು 25ಕ್ಕೂ ಅಧಿಕ ತಂಡಗಳು ಈ ವೇಳೆ ಪಾಲ್ಗೊಂಡಿದ್ದವು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 