ಗ್ರಾಪಂನಲ್ಲಿ ಕಾಯಕ ಬಂಧುಗಳ ತರಬೇತಿ ಕಾರ್ಯಾಗಾರ ಏಪ್ರಿಲ್ 1ರಿಂದ ಜಾರಿ
ಲಕ್ಷ್ಮೇಶ್ವರ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ 349 ರೂ. ನೀಡಲಾಗುತ್ತಿದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ (ಉಗ್ರಾ) ಕೃಷ್ಣಪ್ಪ ಧರ್ಮರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದು ಉದ್ಯೋಗ ಖಾತ್ರಿ ಯೋಜನೆ ಆದ್ಯ ಗುರಿಯಾಗಿದೆ. ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಪ್ರವೃತ್ತಿ ಅವಲಂಭಿಸಿವೆ. ಇದನ್ನು ಮನಗೊಂಡ ಗ್ರಾಮೀಣಾಭಿವೃದ್ಧಿ ಇಲಾಖೆ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಏಪ್ರಿಲ್ 1ರಿಂದ ಸ್ಥಳೀಯವಾಗಿ ಉದ್ಯೋಗ ಒದಗಿಸಲಾಗುತ್ತದೆ. ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಉದ್ಯೋಗ ಖಾತ್ರಿ ಆಸರೆಯಾಗಲಿದೆ ಎಂದರು.ಕೂಲಿಕಾರರ ಗುಂಪು ರಚಿಸುವುದು ಹಾಗೂ ಅವರಲ್ಲಿಯೇ ಓರ್ವರನ್ನು ಕಾಯಕ ಬಂಧು (ಮೇಟ್)ಆಗಿ ಗುರುತಿಸಿ ಅವರಿಂದ ನಮೂನೆ-6ರಲ್ಲಿ ಬೇಡಿಕೆ ಸ್ವೀಕರಿಸಬೇಕು. ಕೂಲಿಕಾರು ಸಹ ತಮ್ಮ ಗ್ರಾಪಂ ಕಚೇರಿಗೆ ತೆರಲಿ ನಮೂನೆ-6ರನ್ನು ಸಲ್ಲಿಸಬಹುದು. ಏಪ್ರಿಲ್ 1 ರಿಂದ ಕಡ್ಡಾಯವಾಗಿ ಕಾಮಗಾರಿ ಪ್ರಾರಂಭಿಸಿ ಮಾನದಿನ ಸೃಜನೆಯಾಗುವಂತೆ ನೋಡಿಕೊಳ್ಳಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಎನ್‌ಎಂಎಂಎಸ್ನಲ್ಲಿ ಹಾಜರಾತಿ: ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದಿಂದ ಪ್ರಸಕ್ತ ಸಾಲಿನಲ್ಲಿ ನರೇಗಾ ಕೆಲಸ ಸಂದರ್ಭದಲ್ಲಿ ಪ್ರತಿ ದಿನ ಎರಡು ಬಾರಿ ಹಾಜರಾತಿ ಕಡ್ಡಾಯ ಮಾಡಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯು ಬಡವರ ಕಲ್ಯಾಣಕ್ಕಾಗಿ ಇರುವ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ಭಾಗದವರು ಆರ್ಥಿಕವಾಗಿ ಮುಂದೆ ಬರಲು ಪೂರಕವಾಗಿದೆ. ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜತೆಗೆ ನೀರು, ಮಣ್ಣು ಸಂರಕ್ಷಣೆ ಉದ್ದೇಶ ಹೊಂದಿದೆ. ರೈತರ ಜಮೀನಿನಲ್ಲಿ ಫಲವತ್ತತೆ ಹಾಗೂ ಅಂತರ್ಜಲ ವೃದ್ಧಿಗೆ ಅನುಕೂಲ ಕಲ್ಪಸಿದೆ ಎಂದು ತಿಳಿಸಿದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಯಕ ಬಂಧುಗಳ ಕರ್ತವ್ಯ ಮತ್ತು ಜವಾಬ್ದಾರಿಯ ಕುರಿತು ತಾಲೂಕು ಮಟ್ಟದ ನರೇಗಾ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ವಿಸ್ತ್ರತ ಮಾಹಿತಿ ನೀಡುವ ಕೆಲಸವನ್ನು ಈಗಾಗಲೇ ಮಾಡಿದ್ದಾರೆ ಎಂದರು.ನೇರವಾಗಿ ಉಳಿತಾಯ ಖಾತೆಗೆ: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಂದ ಉದ್ಯೋಗ ಬೇಡಿಕೆ ಸಂಗ್ರಹಿಸಿ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿಯೇ ಕೂಲಿ ಪಾವತಿ ಮಾಡಲು ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಕೂಲಿಕಾರರು ತಮ್ಮ ಬ್ಯಾಂಕ್ ಖಾತೆಗೆ ಮತ್ತು ಆಧಾರ್ ಜೋಡಣೆ ಮಾಡಿಕೊಂಡಿರಬೇಕು ಇದರಿಂದ ಅವರ ಕೂಲಿ ಹಣ ನೇರವಾಗಿ ಅವರ ಉಳಿತಾಯ ಖಾತೆಗೆ ಜಮೆಯಾಗಲಿದೆ. ಕೋಟ್ತಾಲೂಕಿನ ಪ್ರತಿ ಗ್ರಾಮದಲ್ಲಿ ಏಪ್ರಿಲ್ 1ರಿಂದ ಕೆಲಸ ಆರಂಭಿಸಲು ಸೂಚಿಸಲಾಗಿದೆ. ಆದ್ದರಿಂದ ತಾಲೂಕಿನ ಗ್ರಾಮೀಣ ಜನರು ತಮ್ಮ ಗ್ರಾಪಂ ಕಚೇರಿಗೆ ನಮೂನೆ-6ರನ್ನು ಸಲ್ಲಿಸಲು ಕಳೆದು ಎರಡು ಮೂರು ದಿನಗಳಿಂದ ಕಾಯಕ ಬಂಧುಗಳ ಸಭೆ ಮಾಡಿ ಕೂಲಿ ಮೊತ್ತ 349 ರೂ., ಆಧಾರ್ ಆಧಾರಿತ ವೇತನ ಪಾವತಿ, ಎನ್‌ಎಂಎಂಎಸ್ ಆ್ಯಪ್ ಆಧಾರಿತ ಹಾಜರಾತಿ ಮುಂತಾದ ಅಂಶಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. - ಕೃಷ್ಣಪ್ಪ ಧರ್ಮರ, ಕಾರ್ಯನಿರ್ವಾಹ ಅಧಿಕಾರಿಗಳು ತಾಲೂಕು ಪಂಚಾಯತಿ ಲಕ್ಷ್ಮೇಶ್ವರಫೋಟೋಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಹಮ್ಮಿಕೊಂಡ ಉದ್ಯೋಗ ಖಾತ್ರಿ ಯೋಜನೆಯ ಕಾಯಕ ಬಂಧುಗಳು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ಕಾರ್ಯಾಗಾರ.