ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ 4ರಂದು ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Preparatory meeting for massive protest on 4th to oust MLA Basana Gowda Patil Yatnal

ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ  4ರಂದು ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ 

ವಿಜಯಪುರ 31: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಲ್ಲಿಯ ಕೆಲವು ಕುತಂತ್ರಿಗಳ ಕುಕೃತ್ಯದಿಂದ ಅವರ ಏಳಿಗೆ ಮತ್ತು ಜನಪ್ರಿಯತೆ ಸಹಿಸದೆ ಪಕ್ಷದ ವರಿಷ್ಠರಿಂದ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ವಿಜಯಪುರ ನಗರ ಆಶ್ರಮ ರಸ್ತೆಯ ವೀರರಾಣಿ ಕಿತ್ತೂರ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ "ಉಚ್ಛಾಟನೆ ಕ್ರಮ ರದ್ದುಗೊಳಿಸಿ ಸನ್ಮಾನಿಸಿಕೊಳ್ಳಿ, ಇಲ್ಲವೇ ಉಗ್ರ ಪ್ರತಿಭಟನೆಯನ್ನು ಎದುರಿಸಿ" ಎಂಬ ಘೋಷ ವಾಕ್ಯದೊಂದಿಗೆ, ಬೃಹತ್ ಪ್ರತಿಭಟನಾ ರಾ​‍್ಯಲಿಯ ಪೂರ್ವಭಾವಿ ಸಭೆಯನ್ನು ಶುಕ್ರವಾರ ದಿ. 4ರಂದು ಸಾಯಂಕಾಲ 4ಘಂಟೆಗೆ ವಿಜಯಪುರ ಬಾಗಲಕೋಟ ಜಿಲ್ಲೆಗಳ ಲಿಂಗಾಯತ ಸಮಸ್ತ ಒಳಪಂಗಡಗಳು ಎಲ್ಲ ಹಿಂದೂಪರ ಸಂಘಟನೆಗಳ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರ ಅಭಿಮಾನಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಬೇಕೆಂದು ವಿಜಯಪುರದಲ್ಲಿ ಮಾ. 29ರಂದು ನಡೆದ ಸೊಲ್ಲಾಪುರ ರಸ್ತೆಯ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಸ್‌.ಬಿರಾದಾರ ಅವರ ವಸತಿ ಗೃಹದಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಗಿದೆ.  

ಪೂರ್ವಬಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟದ ರೂಪ ರೇಷೆಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಲು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ವಿನಂತಿಸಿದ್ದಾರೆ. ಸಭೆಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ನಗರ ಘಟಕ ಅಧ್ಯಕ್ಷ ಎಸ್‌. ಆರ್‌. ಬುಕ್ಕಣ್ಣಿ ಪ್ರಥಮ ದರ್ಜೆ ಗುತ್ತಿಗೆದಾರ. ಬಿ.ಎಸ್‌.ಬಿರಾದಾರ. ಕಾರ್ಯದರ್ಶಿ ನಿಂಗನಗೌಡ ಸೊಲ್ಲಾಪುರ, ಪಂಚಸೇನೆ ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ, ತಾಲೂಕಾಧ್ಯಕ್ಷ ಸಂತೋಷ ಮುಂಜಣ್ಣಿ, ನ್ಯಾಯವಾದಿ ದಾನೇಶ ಅವಟಿ, ಯುವ ಘಟಕದ ಅಧ್ಯಕ್ಷ ಸದಾಶಿವ ಅರಳಿಗಿಡದ, ಡಾ. ಜಿ.ಎಸ್‌.ಮಹಿಶಾಳೆ, ಸಿದ್ದು ಕಲ್ಲೂರ, ವಿಜಯಕುಮಾರ ಹಿರೋಳ್ಳಿ, ಚನಬಸಪ್ಪ ಲವಂಗಿ, ಈರಣ್ಣ ಸುರಮಗೊಂಡ, ಎಚ್‌. ಬಿ. ಜಂಗಮಶೆಟ್ಟಿ, ರಾಜಶೇಖರ ಬಂಡಿ, ಸುನೀಲ ಬೈರವಾಡಗಿ, ಶ್ರೀಮತಿ ಶಾಂತಾ ಬಿರಾದಾರ, ಶೋಭಾ ಬಿರಾದಾರ, ಲಕ್ಷ್ಮೀ ಪಾಟೀಲ, ಗೀತಾಂಜಲಿ ಪಾಟೀಲ, ಉಮಾ ಪಾಟೀಲ, ಗೀತಾ ಅಂಗಡಿ, ಸಿದ್ದು ಅವಟಿ, ಆರ.ಡಿ. ದೇಸಾಯಿ, ಸುರೇಶ ಗೆಜ್ಜಿ, ಐ.ಎಸ್‌. ಚಿಮ್ಮಲಗಿ ಇನ್ನು ಅನೇಕರು ಉಪಸ್ಥಿತರಿದ್ದರು ಅಭಿಪ್ರಾಯ ವ್ಯಕ್ತಪಡಿಸಿದರು.