ತೊಂದರೆ ಇದ್ದವರು ಮಾತ್ರ ಬರುತ್ತಾರೆಂಬ ಅರಿವಿರಲಿ : ಡಾ.ಅಜಿತ ಕನಕರಡ್ಡಿ

Know that only those who have problems will come: Dr. Ajit Kanakaraddi

ತೊಂದರೆ ಇದ್ದವರು ಮಾತ್ರ ಬರುತ್ತಾರೆಂಬ ಅರಿವಿರಲಿ : ಡಾ.ಅಜಿತ ಕನಕರಡ್ಡಿ 

ಮಹಾಲಿಂಗಪುರ 31: ವೈಜ್ಞಾನಿಕ ಕಾರಣ ತಿಳುವಳಿಕೆ, ತಾಂತ್ರಿಕ ಕೌಶಲ್ಯಗಳು, ಮಾನವ ತಿಳುವಳಿಕೆ ಈ ಮೂರು ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮ ದಾದಿಯರಾಗಲು ಸಾಧ್ಯ ಎಂದು ವಿ.ಪಿ.ಕನಕರಡ್ಡಿ ನರ್ಸಿಂಗ್ ಕಾಲೇಜಿನ ಛೇರ‌್ಮನ್ ಡಾ.ಅಜಿತ ಕನಕರಡ್ಡಿ ಹೇಳಿದರು. 

ಸ್ಥಳೀಯ ವಿ.ಪಿ.ಕನಕರಡ್ಡಿ ನರ್ಸಿಂಗ್ ಕಾಲೇಜಿನಲ್ಲಿ ಜರುಗಿದ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೊಂದರೆ ಇದ್ದವರು ಮಾತ್ರ ನಿಮ್ಮ ಬಳಿ ಬರುತ್ತಾರೆಂಬ ಸಾಮಾನ್ಯ ಜ್ಞಾನದ ಜೊತೆ ಶಿಸ್ತು, ಶ್ರದ್ಧೆಯಿಂದ ಸೇವೆ ಮಾಡಿ ಎಂದರು. 

ಆಮಖಂಡಿಯ ಬಿಎಲ್‌ಡಿಇಎ ನರ್ಸಿಂಗ್ ಕಾಲೇಜಿನ ಪಾಂಶುಪಾಲ ವೀರಭದ್ರ​‍್ಪ ಮೆಂಡಗುದ್ಲಿ ಉದ್ಘಾಟಿಸಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಇಡಿ ಜಗತ್ತು ದಾದಿಯರ ಸೇವೆಯನ್ನು ಕೊಂಡಾಡಿತು. ದಾದಿಯರ ವೃತ್ತಿ ಅತೀ ಶ್ರೇಷ್ಠವಾದದ್ದು ಎಂದರು. 

ಹಾರೂಗೇರಿಯ ಸಿದ್ಧಿವಿನಾಯಕ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹಜರತ್ ಅಲಿ ಮಾತನಾಡಿ, ವೈದ್ಯ ಮತ್ತು ರೋಗಿಯ ನಡುವಿನ ಸೇತುವೆಯೇ ದಾದಿಯರು ಈ ಜವಾಬ್ದಾರಿ ಅರಿತು ನಡೆಯಿರಿ ಎಂದರು. 

ವಿದ್ಯಾರ್ಥಿಗಳು ದೀಪಬೆಳಗಿಸಿ ಪ್ರಮಾಣ ವಚನ ಸ್ವೀಕರಿಸಿದರು. ವಿವಿಧ ಪರೀಕ್ಷೆ ಮತ್ತು ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿದರು. ಪ್ರಾಂಶುಪಾಲೆ ಜೂಲಿಯಾ ಜಾಧವ, ಆಡಳಿತಾಧಿಕಾರಿ ಸಚಿನ್ ಪಾಟೀಲ, ಉಪನ್ಯಾಸಕರಾದ ವಿನಾಯಕ ಬದ್ನಿಕಾಯಿ, ಶಿವಾನಂದ ಬ್ಯಾಳಿ, ಆನಂದ ಗೌಡರ ಇತರರಿದ್ದರು.  

ಉಪನ್ಯಾಸಕ ವಿನೋದ ಜೋಡಟ್ಟಿ ಸ್ವಾಗತಿಸಿ, ಪ್ರಮಾಣ ವಚನ ಬೋಧಿಸಿದರು, ಉಪನ್ಯಾಸಕಿ ಸೌಮ್ಯಕೃಷ್ಣ ಗಂದವ್ವಗೋಳ ವರದಿ ವಾಚಿಸಿ, ಮಹೇಶ್ವರಿ, ಸುಶ್ಮಿತಾ ನಿರೂಪಿಸಿ, ಲಕ್ಷ್ಮಿ ವಂದಿಸಿದರು.