ಮುಗ್ಧ ಜನರ ಶೋಷಣೆ ಖಂಡಿಸಲು ಸರ್ವರೂ ಜಾಗೃತರಾಗಿ: ಡೊಂಗರೆ
ಬೆಳಗಾವಿ 31: ವಿಶ್ವಾಸ ವಿರಲಿ, ಅಂಧ ವಿಶ್ವಾಸ ಬೇಡ. ಶ್ರದ್ಧೆ ಇರಲಿ, ಅಂಧ ಶ್ರದ್ಧೆ ಬೇಡ. ನಾವು ಯಾವುದೇ ಧಾರ್ಮಿಕ ಆಚಾರ ವಿಚಾರಗಳ ಕುರಿತು ಸೈದ್ಧಾಂತಿಕ ಮತ್ತು ವೈಜ್ಞಾನಿಕ ಅಧ್ಯಯನ ಮಾಡಿ ನಂಬಿ ಆಚರಿಸಬೇಕು. ಬಸವಾದಿ ಶಿವ ಶರಣರ ವಚನಗಳು ನಮಗೆ ನಿತ್ಯ ಮಾರ್ಗದರ್ಶನ ಮಾಡುತ್ತವೆ. ನಾವು ವಚನಗಳನ್ನು ಓದಬೇಕು. ತಿಳಿಯಲಿಲ್ಲವೆಂದು ಮರುಗದೇ ಮತ್ತೆ ಮತ್ತೆ ಓದಿ ಅರ್ಥ ಮಾಡಿಕೊಂಡು ಆಚರಣೆಗೆ ತಂದಲ್ಲಿ ಸಮಾಜ ಒಪ್ಪುವ ನಿಜ ಜೀವನದ ಸುಖ ಅನುಭವಿಸಬಹುದು ಎಂದು ಯಕ್ಸಂಬಾ ಸಿ ಕೆ.ಹಾಯಸ್ಕೂಲಿನ ನಿವೃತ್ತ ಮುಖ್ಯ ಶಿಕ್ಷಕ ಎಸ್ ಆರ್. ಡೊಂಗರೆಯವರು ಹೇಳಿದರು.
ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದವರು ಶನಿವಾರ ದಿ. 29ರಂದು ಏರಿ್ಡಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಮೂಢನಂಬಿಕೆ ಮತ್ತು ಪವಾಡ ಬಯಲು ಎಂಬ ವಿಷಯವಾಗಿ ಉಪನ್ಯಾಸ ನೀಡಿ, ಪವಾಡ -ಬಯಲು ಕಾರ್ಯಕ್ರಮ ಮಾಡಿ ಅವರು ಮಾತನಾಡಿದರು.
ಕಂಡುದದನು ಕಂಡು ಗುರುಪಾದವ ಹಿಡಿದಲ್ಲಿ, ಕಾಣದದನು ಕಾಣಬಹುದು... ಎಂಬ ಅಲ್ಲಮ ಪ್ರಭುದೇವರ ವಚನವನ್ನು ಉಲ್ಲೇಖಿಸಿ, ಧಾರ್ಮಿಕ ಆಚರಣೆಗಳಲ್ಲಿಯ ಮೂಢ ನಂಬಿಕೆ, ಕಂದಾಚಾರಗಳನ್ನು ತಿಳಿಸಿ, ಮುಗ್ಧ ಜನರನ್ನು ಶೋಷಣೆ ಮಾಡುವದನ್ನು ಖಂಡಿಸಲು ಸರ್ವರೂ ಜಾಗೃತರಾಗಬೇಕೆಂದು ಕರೆ ನೀಡಿದ ಅವರು ಜನರಿಗೆ ಮನಮುಟ್ಟುವಂತೆ ಪವಾಡ ಬಯಲು ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ರೊಟ್ಟಿ ನ್ಯಾಯವಾದಿಗಳು ಇತ್ತೀಚೆಗೆ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ದಾಳಿ ಮಾಡುತ್ತಿದ್ದು, ಶರಣರ ಕುರಿತು ಇಲ್ಲ ಸಲ್ಲದ ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವೀಣಾ ಬನ್ನಂಜೆ ಅವರು ಅನುಭವ ಮಂಟಪ ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂಬ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಅದನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶಿವಬಸವ ದೇವರು ಸೋಲಾಪೂರ ಅವರು ಮೂಢ ನಂಬಿಕೆ, ಕಂದಾಚಾರಗಳ ನಿರ್ಮೂಲನೆಯ ಜನ ಜಾಗೃತಿಗಾಗಿ ಶರಣರು ಶ್ರಮಿಸಿದರು ಎಂದು ಆಶೀರ್ವಚನದಲ್ಲಿ ಹೇಳಿದರು. ರೇಷ್ಮೆ ಇಲಾಖೆಯ ಅಧೀಕ್ಷಕ ಶರಣೆ ಭಾಗ್ಯಶ್ರಿ ಬೆಣಚಿನಮರ್ಡಿ ಅವರು ಇಂದಿನ ಪ್ರಸಾದ ದಾಸೋಹ ನೀಡಿ, ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಜಾಗತಿಕ ಲಿಂಗಾಯತ ಮಹಾ ಸಭಾದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಕುಂತಲಾ ನರಸನ್ನವರ ಅವರು ಸ್ವಾಗತಿಸಿದರು. ಪ್ರೀತಿ ಮಠದ ಶರಣು ಸಮರೆ್ಣ ಮಾಡಿದರು. ಶ್ರೀದೇವಿ ನರಗುಂದ ಅವರು ನಿರೂಪಣೆ ಮಾಡಿದರು.
ಅಶೋಕ ಮಳಗಲಿ, ಚಂದ್ರ್ಪ ಬೂದಿಹಾಳ, ಎಸ್ ಜಿ ಸಿದ್ನಾಳ, ಮುರಿಗೆಪ್ಪ ಬಾಳಿ, ಅರವಿಂದ ಪರುಶೆಟ್ಟಿ, ಮಹಾನಂದಾ ಪರುಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಅನ್ನಪೂರ್ಣ ಮಳಗಲಿ, ಶಂಕರ ಗುಡಗನಟ್ಟಿ, ಸುಲೋಚನಾ ವಸ್ತ್ರದ, ಮೋಹನ ಗುಂಡ್ಲೂರ, ಬಸವರಾಜ ಮಿಂಡೊಳ್ಳಿ ನೇತ್ರಾವತಿ ರಾಮಾಪೂರಿ, ಕೆಂಪಣ್ಣ ರಾಮಾಪೂರಿ, ಬಸವರಾಜ ಸುಲ್ತಾನಪೂರಿ, ಹನಮಂತ ದುಂಡಿ, ಮಹಾಂತೇಶ ತೋರಣಗಟ್ಟಿ ಅಲ್ಲದೇ ವಿವಿಧ ಬಡಾವಣೆಯ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.