ಬೆಂಗಳೂರು,
ಏ.20,ಕೊರೊನಾ ಸೋಂಕಿನಿಂದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ
ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ರಾಷ್ಟ್ರೀಯ ಅರ್ಹತಾ
ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ–ನೀಟ್)ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ
ಮುಂದೂಡಿಕೆಯಾಗಿದ್ದು, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ
ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ತರಬೇತಿ ನೀಡಲು ಮುಂದಾಗಿದೆ.ವಿದ್ಯಾರ್ಥಿಗಳಿಗಾಗಿ ತಂತ್ರಜ್ಞಾನ ಆಧರಿತ ‘ಗೆಟ್‌ಸೆಟ್‌ಗೊ’ ಆ್ಯಪ್ ಬಿಡುಗಡೆಗೊಳಿಸಿದೆ.ಉನ್ನತ
ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಕೊರೊನಾ ವೈರಸ್ ಸೋಂಕಿನಿಂದ ಸಿಇಟಿ ಮತ್ತು
ನೀಟ್ ಪರೀಕ್ಷೆ ಗೆ ತೊಂದರೆ ಆಗಿದೆ. ವಿದ್ಯಾರ್ಥಿಗಳ ನೆರವಿಗಾಗಿ ಸರ್ಕಾರ ಕಾರ್ಯಕ್ರಮ
ರೂಪಿಸಿ, ಆನ್ಲೈನ್ ತರಬೇತಿ ಕೊಡಲು ನಿರ್ಧರಿಸಲಾಗಿದೆ ಎಂದರು.ತಂತ್ರಜ್ಞಾನ
ದಲ್ಲಿ ಕರ್ನಾಟಕ ಮುಂದಿದೆ. ಗೆಟ್ ಸೆಟ್ ಗೋ ಇನ್ ಮೂವ್ ಆ್ಯಪ್ ನಲ್ಲಿ ವಿದ್ಯಾರ್ಥಿಗಳು
ಎಲ್ಲ ರೀತಿಯ ವಿವರ ಪಡೆಯಬಹುದು. ಭಾರತದಲ್ಲಿ ಹೆಚ್ಚು ಸೀಟ್ ಪಡೆಯಲು ಅನುಕೂಲ ಆಗುವ
ರೀತಿಯಲ್ಲಿ ತರಬೇತಿ ನೀಡಲಾಗುವುದು ಎಂದರು.ತರಬೇತಿಗೆ ಸುಮಾರು 20 ಸಾವಿರ
ರೂ.ತರಬೇತಿ ಶುಲ್ಕ ಖರ್ಚಾಗುತ್ತದೆ. ಆದರೆ ಸರ್ಕಾರ ಶುಲ್ಕರಹಿತವಾಗಿ ಉಚಿ ತರಬೇತಿ
ಶಿಕ್ಷಣ ನೀಡುತ್ತಿದೆ. ಇದರಿಂದ 1,91 000 ವಿದ್ಯಾರ್ಥಿಗಳು ಇದರ ಅನುಕೂಲ
ಪಡೆಯುತ್ತಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.ಗೆಟ್‌ಸೆಟ್‌ಗೊ’ ಇದು ಸಿಂಚು
ಇನ್ಫೊಟೆಕ್ ಮತ್ತು ದೀಕ್ಷಾ ಆನ್‌ಲೈನ್ ಪರೀಕ್ಷೆಗೆ ಪೂರಕವಾದ ಎಲ್ಲ ಕಲಿಕಾ
ವಿಷಯಗಳನ್ನು ಒಳಗೊಂಡ ವೆಬ್ ಪೋರ್ಟಲ್ ಮತ್ತು ಆ್ಯಂಡ್ರಾಯ್ಡ್ ಆ್ಯಪ್ ಆಗಿದ್ದು, ವೆಬ್ಪೋರ್ಟಲ್ ಮತ್ತು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆ ಉಚಿತವಾಗಿ ಲಭ್ಯವಾಗಲಿದೆ ಎಂದವರು ತಿಳಿಸಿದರು.