ಇಂದು ಬಳೂಟಗಿ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವ

Today is the Sharanabasaveshwara Jatra festival in Balutagi village.

ಇಂದು ಬಳೂಟಗಿ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವ 

ಯಲಬುರ್ಗಾ 19: ಕೊಪ್ಪಳ ಜಿಲ್ಲಾ ಯಲಬುರ್ಗಾ ತಾಲೂಕು ಸುಕ್ಷೇತ್ರ ಬಳೂಟಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ, ನೂತನ ರಥೋತ್ಸವ, ಪುರಾಣ ಮಹಾಮಂಗಳೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ.ಸ್ವ.ಜ. ವಿಜಯಮಹಾಂತ ಮಹಾಸ್ವಾಮಿಗಳು, ಸಂಸ್ಥಾನ ಮೈಸೂರ ಮಠ, ಕುದರಿಮೋತಿ, ಶಾಖಾ: ವ, ಬಳೂಟಗಿ, ಘನಾಧ್ಯಕ್ಷತೆ: ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಧರಮುರಡಿ ಹಿರೇಮಠ, ಯಲಬುರ್ಗಾ ಮ.ನಿ.ಪ್ರ. ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಒಪ್ಪತ್ತೇಶ್ವರ ಮಠ, ಗುಳೇದಗುಡ್ಡ, ಡಾ. ಮ.ನಿ.ಪ್ರ. ಮಹಾದೇವ ಮಹಾಸ್ವಾಮಿಗಳು, ಮುಂಡರಗಿ, ಅನ್ನದಾನೇಶ್ವರ ಶಾಖಾಮಠ, ಕುಕನೂರು, ಡಾ. ಷ.ಬ್ರ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಭೂ-ಕೈಲಾಸ ಮೇಲುಗದ್ದುಗೆ ಹಿರೇಮಠ, ಇಟಗಿ-ಚಿಕ್ಕಮ್ಯಾಗೇರಿ ವಹಿಸುವರು. ಪ್ರತಿ ವರ್ಷದಂತೆ ಈ ವರ್ಷವೂ ಮಹಾದಾಸೋಹಿ ಶರಣಬಸವೇಶ್ವರರ ಪುರಾಣವು ಸುಕ್ಷೇತ್ರ ಬಳೂಟಗಿ ಗ್ರಾಮದಲ್ಲಿ ನಿತ್ಯ ಶರಣರ ದಾಸೋಹದೊಂದಿಗೆ ಪ್ರಾರಂಭಗೊಂಡು, ದಿನಾಂಕ: 19.03.2025, ಬುಧವಾರ ಬೆಳಿಗ್ಗೆ 9:00 ಗಂಟೆಗೆ ಉಭಯ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಶರಣಬಸವೇಶ್ವರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಂತರ, ಮಧ್ಯಾಹ್ನ 12:33 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು. ಮಧ್ಯಾಹ್ನ 1:00 ಗಂಟೆಗೆ ಮಹಾ ಗಣರಾಧನೆ ಸಾಯಂಕಾಲ ಪುರಾಣ ಮಹಾ ಮಂಗಳಗೊಳ್ಳುವುದು. ಅವತ್ತಿನ ಬಹುಳ ಚತುರ್ಥಿ ದಿನದಂದು ಸಾಯಂಕಾಲ 5:00 ಗಂಟೆಗೆ ನೂತನ ರಥೋತ್ಸವ ಜರುಗುವುದು. ಈ ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ವೇ.ಮೂ.ಪಂ. ಶಿವರಾಜ ಶಾಸ್ತ್ರೀಗಳು (ರಾಂಪುರ, ತಾವರಗೇರಿ) ಅವರು ಪುರಾಣ ಪ್ರವಚನ ನೆರವೇರಿಸಲಿದ್ದಾರೆ. ಸಂಗೀತ ಕಾರ್ಯಕ್ರಮ: ಗಾನಕೋಗಿಲೆ ಹನಮಂತಕುಮಾರ ಯರೇಹಂಚಿನಾಳ, ಶಿಕ್ಷಕರು, ಕಿತ್ತೂರ ರಾಣಿ ವಸತಿ ಶಾಲೆ, ಬಳೂಟಗಿ, ತಬಲಾ ವಾದಕ ಪಂ.ಎಸ್‌.ಎಸ್‌. ಹಿರೇಮಠ (ಕುಷ್ಟಗಿ), ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ತಬಲಾ ವಾದಕರು ಆದ್ದರಿಂದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ತನು, ಮನ, ಧನದಿಂದ ಭಾಗವಹಿಸಿ, ಪೂಜ್ಯರ ದರ್ಶನಾಶೀರ್ವಾದ ಪಡೆದು, ವಧು-ವರರಿಗೆ ಆಶೀರ್ವದಿಸಬೇಕಾಗಿ ಜಾತ್ರಾ ಮಹೋತ್ಸವ ಆಡಳಿತ ಮಂಡಳಿ ವಿನಂತಿಸಿದೆ.  

    1ಕೊಟ್1: ಕಳೆದ ವರ್ಷದಂತೆ ಈ ವರ್ಷವೂ ಬಳೂಟಗಿ ಗ್ರಾಮದ ಆರಾಧ್ಯ ದೈವ ಶರಣಬಸವೇಶ್ವರ ಜಾತ್ರೆಯ ವೈಭವ ವಿಸ್ತಾರಗೊಳ್ಳುತ್ತಿದೆ. ಇಲ್ಲಿ ಭಕ್ತರು ಬೇಡಿದನ್ನು ಕರುಣಿಸುವ ಕಲ್ಪವೃಕ್ಷವಾಗಿ ನೆಲೆನಿಂತ ಶರಣಬಸವೇಶ್ವರರು ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈ ವರ್ಷದ ವಿಶೇಷವೆಂದರೆ, ಬಳೂಟಗಿ ಗ್ರಾಮದ ಸಕಲ ಭಕ್ತಾದಿಗಳ ಸಹಕಾರದೊಂದಿಗೆ ನೂತನ ರಥೋತ್ಸವದ ಲೋಕಾರೆ​‍್ಣ ಜರುಗಲಿದ್ದು, ಇದು ಗ್ರಾಮದ ಭಕ್ತರ ಮನದಲ್ಲಿ ಹರುಷವನ್ನು ಹೆಚ್ಚಿಸಿದೆ. ಡಾ. ಸಂಗಪ್ಪ ಗಾಣಿಗೇರ (ಪ್ರೊಫೆಸರ್ ಮತ್ತು ಮುಖ್ಯಸ್ಥರು)  

    1ಕೊಟ್2: ಗ್ರಾಮದ ಆರಾಧ್ಯ ದೈವ ಶರಣಬಸವೇಶ್ವರ ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗ ಭೇದವಿಲ್ಲದೆ ದೇವರ ದರ್ಶನಕ್ಕೆ ಸರ್ವರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಸಾಮರಸ್ಯದ ಪ್ರತೀಕ ಎನಿಸಿಕೊಂಡಿದೆ. ನಾಗರಿಕ ಸಮಾಜದಲ್ಲಿ ಸಹೋದರತ್ವ, ಸಹಬಾಳ್ವೆ ಮತ್ತು ಭಾಂದವ್ಯ ವೃದ್ಧಿಯಾಗಲು ಇಂತಹ ಜಾತ್ರೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರೊ. ನಿಂಗಪ್ಪ ಪೂಜಾರ ಪ್ರೊಫೆಸರ್, ಗದಗ 1ಪೊಟೊ ಕ್ಯಾಪ್ಷನ್1: ಶರಣಬಸವೇಶ್ವರ ಜಾತ್ರಾ ಮಹೋತ್ಸವದ ನೂತನ ರಥ 1ಪೊಟೊ ಕ್ಯಾಪ್ಷನ್2: ಶರಣಬಸವೇಶ್ವರ ಪೂಜೆಯನ್ನು ಭಕ್ತಿಯಿಂದ ನೇರವೇರಿಸಿದ.