ಅಧಿವೇಶನದಲ್ಲಿ ಆಕ್ರೋಶಗೊಂಡ ರಾಜು ಕಾಗೆ..!

Raju Kage gets angry during the session..!

ಅಧಿಕಾರಿಯ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಕೈ ಶಾಸಕ..! 

ಬಿಜೆಪಿ ಶಾಸಕರ ಸಾಥ್‌..!! 

ಕಾಗವಾಡ 18: ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಿಯಾರ ತಮ್ಮನ್ನು ಅವಮಾನಿಸಿದ್ದಾರೆಂದು ಕಾಗವಾಡ ಶಾಸಕ ರಾಜು ಕಾಗೆ ಆರೋಪಿಸಿ, ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದರು.  

ಮಂಗಳವಾರ ದಿ. 18 ರಂದು ಅಧಿವೇಶನದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಿಯಾರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಾರ್ಜಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯನಾಗಿ ನನಗೆ ರಾಜೇಂದ್ರ ಕಠಿಯಾರ ಅವಮಾನಿಸಿದ್ದಾರೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾದ ಶಾಸಕ ಸಿ.ಸಿ. ಪಾಟೀಲ ಇದ್ದ ಸಭೆಯಲ್ಲಿ ಹಗುರುವಾಗಿ ಮಾತನಾಡಿರುವ ಅವರು, ನನಗೆ ಮಾತ್ರವಲ್ಲದೇ ಇನ್ನೂ ಅನೇಕ ಶಾಸಕರ ಜೊತೆಗೆ ಸಹ ಇದೇ ರೀತಿಯಾಗಿ ವರ್ತಿಸಿ, ದುರಹಂಕಾರ ತೋರುತ್ತಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕೆಂದು ಸುಮಾರು 60 ಜನ ಶಾಸಕರು ಸಹಿ ಮಾಡಿದ್ದು, ಅವರ ವಿರುದ್ಧದ ಹಕ್ಕುಚ್ಯುತಿಗೆ ಬೆಂಬಲ ಸೂಚಿಸಿದ್ದಾರೆ. ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಅದಕ್ಕೆ ಬಿಜೆಪಿಯ ಶಾಸಕ ಸಿ.ಸಿ. ಪಾಟೀಲ ಕೂಡ ಸಾತ್ ನೀಡಿದ್ದು, ರಾಜೇಂದ್ರ ಕಠಿಯಾರ ಅವರ ವರ್ತನೆ ಅಸಹಜವಾಗಿದ್ದು, ರಾಜು ಕಾಗೆ ಅವರಿಗೆ ಏರು ಧ್ವನಿಯಲ್ಲಿ ಅವಮಾನಿಸಿದ್ದು ತಪ್ಪು. ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಶಾಸಕರು ರಾಜೇಂದ್ರ ಕಠಿಯಾರ ವಿರುದ್ಧ ದೂರು ನೀಡಿದ್ದು, ಅವರ ಹಕ್ಕುಚ್ಯುತಿ ಮಂಡಿಸಲು ನಮ್ಮ ಬೆಂಬಲವಿದೆ ಎಂದು ತಿಳಿಸಿದರು.