ಬಸ್ ಪ್ರಯಾಣದಲ್ಲಿ ಅಸ್ವಸ್ಥಳಾದ 8 ವರ್ಷದ ಬಾಲಕಿ ಸಾವು
ಕಾರವಾರ 18 : ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುತ್ತಿರುವಾಗಲೇ ದಾರಿ ಮದ್ಯೆ ತೀವ್ರ ಅಸ್ವಸ್ಥಗೊಂಡು ಬಾಲಕಿ ಸಾವನ್ನಪ್ಪಿದ ಘಟನೆ ಅಂಕೋಲಾ ಸಮೀಪ ನಡೆದಿದೆ.ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಸ್ನೇಹಾ ಸಾಗರ ಕೊಠಾರಕರ (8) ಮೃತಪಟ್ಟ ಬಾಲಕಿ.ಸ್ನೇಹಾ ಕೊಠಾರಕರ ಕಳೆದ ಮೂರು ದಿನಗಳಿಂದ ಕಫದ ಸಮಸ್ಯೆಯಿಂದ ಬಳಲುತ್ತಿದ್ದಳು. ಈಕೆಯತಾಯಿ ಮಂಗಲಾ ಕೊಠಾರಕರ , ಮಗಳನ್ನು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.ಅಮದಳ್ಳಿ ಸಮೀಪ ಬಸ್ ಸಂಚರಿಸುತ್ತಿದ್ದಾಗ ಸ್ನೇಹಾಳಿಗೆ ತಲೆನೋವು ಹಾಗೂ ವಾಂತಿ ಶುರುವಾಗಿ ತೀವ್ರವಾಯಿತು. ಹಾಗೂ ಆಕೆ ಅಸ್ವಸ್ಥಗೊಂಡಿದ್ದಾಳೆ.ಕೂಡಲೇ ಸ್ನೇಹಳನ್ನು ಹಟ್ಟಿಕೇರಿ ಪ್ರಾಥಮಿಕ ಕೇಂದ್ರಕ್ಕೆ ಕರೆದೊಯ್ಯಲಾಯಿತು . ಅಲ್ಲಿಂದ ಅಂಕೋಲಾ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಂಕೋಲಾಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.ಘಟನೆಯ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.