ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ ಗುಂಪು ವಿಮೆ ಪಾಲಿಸಿ ಹಾಗು ಬ್ಯಾಗ ವಿತರಣಾ ಕಾರ್ಯಕ್ರಮ

Group insurance policy and bag distribution program at Government Higher Primary School No. 10

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ  ಗುಂಪು ವಿಮೆ ಪಾಲಿಸಿ ಹಾಗು ಬ್ಯಾಗ ವಿತರಣಾ ಕಾರ್ಯಕ್ರಮ 

ವಿಜಯಪುರ-ಮಾ 17,;  ಇಂದು ರಂದು  ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ ಗುಂಪು ವಿಮೆ ಪಾಲಿಸಿ ಮತ್ತು ಬ್ಯಾಗ ವಿತರಣಾ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೇರವೇರಿತು.  

ಈ ಶಾಲೆಯ ಮುಖ್ಯಾಧ್ಯಾಪಕರಾದ ಮಹೇಶ.ನಾಡಗೇರಿಯವರು ಮುಖ್ಯ ಆತಿಥಿಗಳಾಗಿ ಆಗಮಿಸಿದಂತಹ ಮಹೇಶ ಒಡೆಯರ್ ಸರ್ ಬಿಜೆಪಿಯ ಧುರೀಣರು ಮತ್ತು ಬಿಜೆಪಿಯ ನಗರ ಘಟಕದ ಅಧ್ಯಕ್ಷರಾದ ಶಂಕರ ಹೂಗಾರ ಇವರಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿದರು ಮತ್ತು ಪರಿಚಿಯಿಸಿದರು. ಶಾಲಾ ಮಕ್ಕಳಿಗೆ ಮತ್ತು ಪಾಲಕರಿಗೆ ಮುಂದೆ ಬರುವ ಬೇಸಿಗೆಯ ರಜೆ ಕಾಲದಲ್ಲಿ ಮಕ್ಕಳಿಗೆ ಹೋಮ್ ವರ್ಕ ಕೊಡಲಾಗುವದು ಅದನ್ನು ತಪ್ಪದೆ ಪಾಲಕರು ಮನೆಯಲ್ಲಿ ವಿದ್ಯಾಬ್ಯಾಸ ಮಾಡಿಸಿ ಮುಂದಿನ ವರ್ಗಕ್ಕೆ ಅನುಕೂಲವಾಗುತ್ತದೆಂದು ಪಾಲಕರಲ್ಲಿ ವಿನಂತಿಸಿಕೊಂಡರು. ಮತ್ತು ಎಲ್ಲ ಪಾಲಕರು ಆಗಮಿಸಿದ್ದಕ್ಕೆ ತುಂಬಾ ಹೃದಯಪೂರ್ವಕವಾಗಿ ಧನ್ಯವಾದಗಳು ತಿಳಿಸಿದರು. 

ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಬಿಜೆಪಿಯ ಕಾರ್ಯಕರ್ತರಾದ ಮಹೇಶ ಒಡೆಯರ್ ಸರ್‌ರವರು  ಎಲ್ಲ  ಮಕ್ಕಳಿಗೆ ಶಾಲೆಯ ಬಗ್ಗೆ ಒಂದು ಮಾತು ಹೇಳಿದರು. ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದೇವೆಂದು  ಬೇಜಾರ ಮಾಡಿಕೊಳ್ಳಬೇಡಿ. ಈ ಕನ್ನಡ ಶಾಲೆಯಲ್ಲಿಯೇ ಕಲಿತಂತಹ ವಿದ್ಯಾರ್ಥಿಗಳು ಡಾಕ್ಟರ್, ಇಂಜೀನೀಯರ್, ಐಎಎಸ್ ಅಧಿಕಾರಿಗಳು ಪೈಲ್‌ಟಗಳು ಆಗಿದ್ದಾರೆ  ಇನ್ನೂ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರು ಕನ್ನಡ ಶಾಲೆಯಲ್ಲಿಯೆ ಕಲಿತ ವಿದ್ಯಾರ್ಥಿಗಳು ತಾವು  ಮುಂದೆ ಒಂದು ಒಳ್ಳೆಯ ಹುದ್ದೆಯಲ್ಲಿ ಹೋಗುತ್ತಿರಿ ಅದಕ್ಕೆ ತಾವು ಸರಿಯಾಗಿ ಶಿಸ್ತಿನಿಂದ ಅಭ್ಯಾಸದ ಕಡೆ ಗಮನ ಕೊಡಬೇಕು ಎಂದು ಹೇಳಿದರು. ಶಾಲೆಯ ಏನೇ ಅನಾನುಕೂಲತೆ ಇದ್ದರೆ ಹೇಳಿ ಅದನ್ನು ನಾನು ಕೆಲಸ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಮನಸಾಪೂರ್ವಕವಾಗಿ ಹೇಳಿದರು. 

  ಇದೆ ಸಂದರ್ಭದಲ್ಲಿ ಬಿಜೆಪಿಯ ನಗರ ಘಟಕದ  ಅಧ್ಯಕ್ಷರು ಶಂಕರ ಹೂಗಾರ ಸರ್‌ರವರು ಮಕ್ಕಳಿಗೆ  ಬ್ಯಾಗ್ ವಿತರಣೆ ಬಗ್ಗೆ ವಿವರವಾಗಿ ಹೇಳಿದರು.  ನಾನು ಸಹ ಈ ಶಾಲೆಯಲ್ಲಿಯೇ ಕಲಿತಂತಹ ವಿದ್ಯಾರ್ಥಿ ಎಂದು ತಿಳಿಸಿದರು. ಈ ಶಾಲೆಗೆ ಈ  ಮುಂದಿನ ದಿನಗಳಲ್ಲಿ ನೋಟ ಬುಕ್ ಪೆನ್ ಕೊಡಲಾಗುವುದೆಂದು ಹೇಳಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೊದಲು ಶಿಸ್ತನ್ನು ಕಲಿಯಬೇಕು ಬ್ಯಾಗ ಏತಕ್ಕೆ ಕೊಡವುದೆಂದರೆ   ನೋಟಬುಕ್ ಪಠ್ಯಪುಸ್ತಕ ಪೆನ್ನು ಆ ಕಡೆ ಈ ಕಡೆ ಒಗೆಯಬಾರದು ಶಿಸ್ತಿನಿಂದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಆಬ್ಯಾಸ ಮಾಡಿರಿ. ಮೊದಲು ಬೆಳಿಗ್ಗೆ ಬೇಗನೆ ಎದ್ದು  ಸ್ನಾನ, ಊಟ ಇನ್ನಿತರೆ ಕೆಲಸಗಳು ಸಮಯನುಸಾರವಾಗಿ ಮೊದಲು ಶಿಸ್ತು ಕಲಿಯಿರಿ ಎಂದು ಒತ್ತಿ ಹೇಳಿದರು. ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ಕೊಡುತ್ತೇನೆ ಎಂದು ಮನದಾಳದಿಂದ ನುಡಿದರು. 

ಇದೆ  ವೇಳೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಪರಶುರಾಮ. ನಾವಿಯವರು  ಎಲ್ಲ ಪಾಲಕರಿಗೆ ಒಂದು ಮಾತು ಹೇಳಿದರು. ಬ್ಯಾಗ ಕೊಡುತ್ತಾರೆ ಎಂದು ತಾವೇಲ್ಲರು ಆಗಮಿಸಿದ್ದಕ್ಕೆ  ತುಂಬಾ ಧನ್ಯವಾದಗಳು ತಿಳಿಸಿದರು ಮತ್ತು ಮಹೇಶ ಒಡೆಯರ್ ಸರ್‌ರವರು ಶಾಲೆಯ ಏನೇ ಅನಾನುಕುಲತೆ ಇದ್ದರೆ ಹೇಳಿ ಎಂದಿದ್ದರು ಇದೆ ಸಮಯದಲ್ಲಿ ಅವರಿಗೆ ಅನಾನುಕೂಲತೆ ಬಗ್ಗೆ ಪತ್ರವೂ ಮಹೇಶ ಒಡೆಯ ಸರ್ ಅವರಿಗೆ ಕೊಡಲಾಯಿತು.   ಒಂದು ಪಿಲ್ಟರ್  ನೀರು ಮಾಡುವ  ಮಶಿನ್ ಕೂಡಿಸಲು ಕೇಳಿಕೊಂಡರು. ಎಲ್ಲರೂ ಹೀಗೆ ಮುಂದೆ ಸಭೆ ಕರೆದಾಗ ತಾವೇಲ್ಲರೂ ಈ ರೀತಿ ಬಂದರೆ ಶಾಲೆಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕೊನೆಗೆ ಎಲ್ಲರಿಗೂ ಅಭಿನಂದನೆಗಳು ಧನ್ಯವಾದಗಳು ತಿಳಿಸಿದರು. 

ಈ ಬ್ಯಾಗ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರು ಎಮ್‌.ಸಿ.ನಾಡಗೇರಿ,  ಶ್ರೀಮತಿ ಎಮ್‌. ಎನ್‌.ಮುಂಜಣ್ಣಿ, ಶ್ರೀಮತಿ ಝಡ್‌.ಎಸ್‌.ಆಸ್ಕಿ, ಶ್ರೀಮತಿ ಎ.ಐ. ಮಾಗಿ, ಶಬಾನ ಬೇಗಂ ಕೋತ್ವಾಲ್, ಪಿ.ಕೆ.ಖರಾತ ಸರ್,ಮತ್ತು ಸಚಿನ ನಾಶಿ ಶಿಕ್ಷಕರು, ಮಲ್ಲಮ್ಮ ಮೆಡಮ್  ಶಿಕ್ಷಕಿಯರು ಮತ್ತು ಮುಖ್ಯ ಅತಿಥಿಗಳಾಗಿ ಮಹೇಶ ಒಡೆಯರ್ ಸರ್, ಬಿಜೆಪಿಯ ಶಂಕರ ಹೂಗಾರ ಸರ್‌ರವರು, ಶಾಲಾ ಸಿಬ್ಬಂದಿಯವರು ಎಸ್‌ಡಿಎಂಸಿ ಅಧ್ಯಕ್ಷರಾದ ಪರಶುರಾಮ. ನಾವಿ, ಶಿವಾನಂದ. ಅಫಜಲಪೂರ, ಎಸ್‌ಡಿಎಂಸಿ ಸದಸ್ಯರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಪಾಲಕರು, ತಾಯಂದಿರರು,  ಇನ್ನೀತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.