ಬೆಂಗಳೂರು, ಮೇ 3,ರಾಜ್ಯದಲ್ಲಿ ಭಾನುವಾರ 13 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ, 22 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 614 ತಲುಪಿದೆ. 26 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ, ಒಟ್ಟು 293 ಜನರು ಗುಣಮುಖರಾಗಿದ್ದಾರೆ.ಕಲಬುರಗಿಯ 13 ವರ್ಷದ ಬಾಲಕಿ, 54,41 ವರ್ಷದ ವ್ಯಕ್ತಿಗಳು, 35 ವರ್ದ ಮಹಿಳೆ, 78 ವರ್ಷದ ವೃದ್ಧ, 22 ವರ್ಷದ ಯುವಕ, ಬಾಗಲಕೋಟೆ ಮುಧೋಲದ 68 ವರ್ಷದ ವೃದ್ಧ ಮತ್ತು 60 ವರ್ಷದ ವೃದ್ಧೆ, ಬಾಗಲಕೋಟೆ ಬಾದಾಮಿಯ 23 ವರ್ಷದ ಯುವತಿ, ಬೆಂಗಳೂರು ನಗರ ಪಾದರಾಯನಪುರದ 24 ವರ್ಷದ ಯುವಕ, ಬೆಂಗಳೂರು ನಗರದ 45,24 ಮತ್ತು 45 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.