ಬೆಳಗಾವಿ 16 : ಬೆಳಗಾವಿಯ ಅನಗೋಳದಲ್ಲಿರುವ ಭ.ಶ್ರೀ.1008 ಆದಿನಾಥ ದಿಗಂಬರ ಜೈನ ಮಂದಿರ ದೊಡ್ಡ ಬಸದಿಯಲ್ಲಿ ಇದೇ ಫೆ.16 ರಿಂದ 18 ರವರೆಗೆ ಮೂರು ದಿನಗಳ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಮೂರು ದಿನಗಳ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಚಂದ್ರಪ್ರಭು ವಿಧಾನ, ಜ್ವಾಲಾಮಾಲಿನಿ ವಿಧಾನ, ಶ್ರೀ,.ಸರಸ್ವತಿ ವಿಧಾನ, ಹಾಗೂ ಚೌಸಠ ಋದ್ದಿ ವಿಧಾನ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಆಚಾರ್ಯ ಮಹಾಸಾಗರ ಮುನಿಗಳ ವಹಿಸಲಿದ್ದು,. ಈ ಮೂರು ದಿನಗಳ ಧಾಮರ್ಿಕ ಕಾರ್ಯಕ್ರಮಕ್ಕೆ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸವಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.