ಕಾಗದರಹಿತ ಇ-ಸೆಷನ್ ನಡೆಸಲು ಚಿಂತನೆ: ಸುರೇಶ್ ಕುಮಾರ್

ಬೆಂಗಳೂರು,‌ ಮಾ. 23, ಬೇರೆ ಬೇರೆ ರಾಜ್ಯಗಳಲ್ಲಿರುವಂತೆ ರಾಜ್ಯದ ವಿಧಾನಮಂಡಲ  ಕಾರ್ಯಕಲಾಪವನ್ನು ಕಾಗದರಹಿತ ಅಧಿವೇಶನ(ಇ-ಸೆಷನ್) ನಡೆಸಲು ಸರ್ಕಾರ ಗಂಭೀರ ಚಿಂತನೆ  ನಡೆಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೇಲ್ಮನೆಗೆ ತಿಳಿಸಿದ್ದಾರೆ.ರಾಜಸ್ತಾನ  ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು ಆರು ವರ್ಷಗಳ  ಹಿಂದೆಯೇ ಕಾಗದರಹಿತ ಅಧಿವೇಶನ ನಡೆಸಬೇಕೆಂಬ ಚಿಂತನೆಯಿತ್ತು ಎಂದರು‌. ಕಾಂಗ್ರೆಸ್‌ನ ಪಿ.ಆರ್‌. ರಮೇಶ್ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಬೆಂಗಳೂರಿನಲ್ಲಿರುವ ಕಾರ್ಖಾನೆ  ಸಂಬಂಧ ಕೇಳಿದ ಪ್ರಶ್ನೆಗೆ ಸಚಿವರು ಸದಸ್ಯರಿಷ್ಟೆ ಉತ್ತರ ನೀಡಿದ್ದರು. ಇದಕ್ಕೆ  ಪ್ರತಿಪಕ್ಷದ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಉತ್ತರದಲ್ಲಿ ಅನುಬಂಧ 1ರಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ ಎಂದಿದ್ದೀರಿ. ಪ್ರಶ್ನೆ ಕೇಳಿದವರಿಗಷ್ಟೆ ಉತ್ತರ ಕೊಡಬೇಕೇ ಎಂದು ಮುಗಿಬಿದ್ದರು.ಆಗ  ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ಎಲ್ಲರಿಗೂ  ಒದಗಿಸುವುದು ಸದನದ ಹಕ್ಕು. ಈಗ ಒಬ್ಬರಿಗೆ ಮಾತ್ರ ಉತ್ತರ ನೀಡಿ ಹೊಸ ಸಂಪ್ರದಾಯ  ಹುಟ್ಟುಹಾಕಿದ್ದೀರಾ? ಎಂದು ಪ್ರಶ್ನಿಸಿದಾಗ ಸುರೇಶ್ ಕುಮಾರ್ ಮಾತನಾಡಿ, ಇದು ಸರ್ಕಾರದ  ಬೊಕ್ಕಸಕ್ಕೆ ಹೊರೆ‌. ಎಲ್ಲಾ ಪ್ರತಿಗಳನ್ನು ಮುದ್ರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ  ಹೊರೆಯಾಗುತ್ತದೆ‌. ಬೇರೆ ರಾಜ್ಯಗಳಲ್ಲಿ ಸಿಡಿ ನೀಡುವ ರೂಢಿಯಿದೆ. ಅದರಂತೆ ನಮ್ಮಲ್ಲಿಯೂ ಇ ವ್ಯವಸ್ಥೆ ಸಿಡಿ ಜಾರಿಗೊಳಿಸಲಾಗುವುದು ಎಂದರು.