ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ: ಮುರಘೇಂದ್ರ ಮಹಾಸ್ವಾಮಿಗಳಿಂದ ಉದ್ಘಾಟನೆ
ತಾಂಬಾ 15: ಕೋಟ್ಟಸ್ಟು ಹೆಚ್ಚಾಗುವ ಸಂಪತ್ತು ಎಂದರೆ ಅದು ವಿದ್ಯ ಸಂಪತ್ತು ದಾನ ಮಾಡಿದರೆ ಅಧಿಕವಾಗುತ್ತದೆ. ಅದೆ ತೆರನಾಗಿ ವಿದ್ದೆ ದಾರೆ ಎರಿಯುತ್ತಾ ಹೊದರೆ ಅದು ಮತ್ತಷ್ಟು ವಿಸ್ತಾರವಾಗುತ್ತಾ ಹೊಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ ಹೇಳಿದರು.
ಅಥರ್ಗಾ ಗ್ರಾಮದ ಜ್ಞಾನಭಾರತಿ ವಿದ್ಯಾಮಂದಿರ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿಯ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಕುಡುವಲ್ಲಿ ಶಿಕ್ಷಕರು ಮುತವರ್ಜಿ ವಹಿಸಬೇಕು. ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವದು ಶ್ಲಾಘನಿಯ ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ ಪ್ರೀತು, ದಶವಂತ ಮಾತನಾಡಿ ವಿದ್ದೇಯ ಜೋತೆಗೆ ವಿನಯ ಮೌಲ್ಯಗಳು ವಿದ್ಯಾರ್ಥಿಗಳನ್ನು ಆದರ್ಶವಾಗಿಸುತ್ತದೆ. ಎಷ್ಟೆ ಮೇಲ್ಮಟ್ಟಕ್ಕೆ ಒಬ್ಬ ವ್ಯಕ್ತಿ ಬೆಳೆದರು ವಿನಯ, ಗುರುಭಕ್ತಿ ಶುದ್ದ ಚಾರಿತ್ರ್ಯ ಮುಂತಾದ ನೀತಿಗಳನ್ನು ಕಳೆದು ಕೊಳ್ಳಬಾರದು ಎಂದ ಅವರು ಈ ಶಾಲೆಯ ಮಕ್ಕಳು ವಿವಿಧ ಶಾಲೆಗಳ ಸ್ಪರ್ಥಾತ್ಮಕ ಪರಿಕ್ಷೇಯಲ್ಲಿ ತೆರಗಡೆ ಆಗುತ್ತಿರುವದು ಶಿಕ್ಷಕರ ಕಾರ್ಯಕ್ಕೆ ಮೇಚ್ಚುಗೆ ವ್ಯಕ್ತ ಪಡಿಸಿದರು. ಸಂಸ್ಥಾಪಕ ಅಧ್ಯಕ್ಷ ಆಯ್.ಆರ್.ಕಲ್ಲೂರಮಠ ಮಾತನಾಡಿದರು. ಮುರಘೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಟಿ.ಎಸ್.ಆಲಗೂರ, ಪ್ರಕಾಶ ನಾಯಕ, ಸಂಬಾಜಿ ಕರಾತ, ಲಕ್ಷ್ಮೀ ಕಟ್ಟಿ, ದೇವೆಂದ್ರ ರಾಠೋಡ, ಬಾಳಾರಾಮ ಪವಾರ, ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ ಹೂಗಾರ ವರದಿ ವಾಚಿಸಿದರು. ಅನೀಲ ಕಲ್ಲೂರಮಠ ಸ್ವಾಗತಿಸಿದರು. ಗೀರಿಶ ಹೂಗಾರ ನಿರುಪಿಸಿ ವಂದಿಸಿದರು. ನಂತರ ಮಕ್ಕಳಿಂದ ಮನರಂಜನ ಕಾರ್ಯಕ್ರಮ ಜರುಗಿದವು.