ಕಿಶೋರಿಯರಿಗೆ ಜೀವನ ಕೌಶಲ್ಯ, ಆರೋಗ್ಯ ಶುಚಿತ್ವದ ಕುರಿತು ತರಬೇತಿ

Training on life skills, health and hygiene for teenagers

ಮುಂಡಗೋಡ 15: ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ “ಕಿಶೋರಿಯರಿಗೆ ಜೀವನ ಕೌಶಲ್ಯ ನಾಯಕತ್ವ ಮತ್ತು ಆರೋಗ್ಯ ಶುಚಿತ್ವದ ಕುರಿತು ತರಭೇತಿ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನದ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.    

ಫಾದರ್ ಮೆಲ್ವಿನ್ ಲೊಬೋ ಲೊಯೋಲ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಮುಂಡಗೋಡ ರವರು ಮಾತನಾಡುತ್ತ ಸ್ವಾಮಿ ವಿವೇಕಾನಂದರ ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಗಳ ಬಗ್ಗೆ ವಿವರಿಸುತ್ತಾ ಕಿಶೋರಿಯರಿಗೆ ಸ್ವಾಮಿ ವಿವೇಕಾನಂದರ ಯುವಜನರಿಗೆ ನೀಡಿದ ಧ್ಯೇಯ ವಾಕ್ಯವನ್ನು ನೆನಪಿಸಿದರು. (ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ). ಅವರ ಧ್ಯೇಯ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಈ ಪ್ರಸ್ತೂತ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿಬಾಳಿ ಎಂಬ ಕರೆಯನ್ನು ನೀಡಿದರು. ವೇದಿಕೆ ಗಣ್ಯರುಗಳು ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ದೀಪ ಬೇಳಗಿಸುವುದರ ಮೂಲಕ ಪುಷ್ಪನಮನವನ್ನು ಸಲ್ಲಿಸಿದರು.   ಲೋಯೋಲ ನಿರ್ದೇಶಕರು  ಫಾಽಽ ಅನಿಲ್ ಡಿ’ಸೋಜಾ   ರವರು ಮಾತನಾಡುತ್ತಾ ಕಿಶೋರಿಯರಿಗೆ ಜೀವನ ಕೌಶಲ್ಯ, ನಾಯಕತ್ವ ,ಮತ್ತು ಆರೋಗ್ಯ ಶುಚಿತ್ವದ ಬಗ್ಗೆ ವಿವಿಧ ವಿಷಯಗಳನ್ನುತಿಳಿದುಕೊಳ್ಳಬೇಕು. ನಮ್ಮ ಆರೋಗ್ಯ ಉತ್ತಮ ರೀತಿಯಲ್ಲಿ ನೋಡಿಕೊಂಡರೆ ನಮ್ಮಲ್ಲಿ ಹೊಸತನದ ಯೋಚನೆಗಳು ಮತ್ತು ಒಳ್ಳೆಯ ಗುಣಗಳು ವೃದ್ಧಿಯಾಗುತ್ತವೆ. ಮತ್ತು ಪ್ರತಿ ನಿತ್ಯ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೋಡಗುತ್ತೆವೆ. ನಕಾರಾತ್ಮಕ ಯೋಚನೆಗಳು ಮಾಡಿದರೆ ನಮ್ಮಿಂದ ಏನು ಸಾಧಿಸಲು ಆಗುವುದಿಲ್ಲ ವಿವಿಧ ರಿತಿಯ ವಿಶೇಷ ಯುವ ತರಬೇತಿ ಪಡೆದುಕೊಂಡರೆ ನಿಮ್ಮ ಹಳ್ಳಿಗಳ ಸಂಘಗಳಲ್ಲಿ ಮತ್ತು ಜನರಲ್ಲಿ ಮಾಹಿತಿಯನ್ನು ನೀಡುವುದರಿಂದಾಗಿ ಮತ್ತು ಸಣ್ಣ ಸಣ್ಣ ಮಟ್ಟದ ಕಾರ್ಯಕ್ರಮ ಹಳ್ಳಿಗಳಲ್ಲಿ ಹಮ್ಮಿಕೊಳ್ಳುವುದರ ಮೂಲಕ ನಿಮಗೆ ನಾಯಕತ್ವ ಗುಣಗಳು ಬರುತ್ತದೆ ಎಂದು ತಿಳಿಸಿದರು.    

ಡಾಽಽ ಸಿಸ್ಟೆರ್ ಗ್ಲಾಂಯಡಿಸ್ ಸ್ತಿರೋಗ ತಜ್ಞರು ಜ್ಯೋತಿ ಆರೋಗ್ಯ ಕೇಂದ್ರ ಮುಂಡಗೋಡ ಇವರು ಮಾತನಾಡುತ್ತ ಇತ್ತಿಚಿನ ದಿನಗಳಲ್ಲಿ  ನಮ್ಮ ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ದಾಖಲಾತಿಗಳ ಸಂಖ್ಯೆ ಏರಿಕೆಯಾಗಿದೆ. 2023 ರಲ್ಲಿ 13,477   ಮತ್ತು  2024 ರಲ್ಲಿ 21,657 ಏರಿಕೆಯಾಗಿರುವ ಮಾಹಿತಿ ದೊರಕಿದೆ ಇದಕ್ಕೆ ಕಾರಣಗಳು ಲವ್ ಮ್ಯಾರೆಜ್, ಬಾಲ್ಯ ವಿವಾಹ ಲವ್ ಇನ್ ರಿಲೆಷನ್ಸಿಪ್, ಲೈಗಿಂಕ ದೌಜರ್ನ್ಯ, ಲೈಗಿಂಕ ತಿಳುವಳಿಕೆಯ ಕೊರತೆ ಜೀವನ ಶೈಲಿ, ತಂದೆ ತಾಯಿಗಳಲ್ಲಿ ಶಿಕ್ಷಣದ ಕೊರತೆ, ಎಚ್‌.ಎಮ್‌.ಪಿ.ವಿ. ವೈರಸ್ ಹರಡುವ ಬಗೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.   ಮಂಗಳಾ ಮೋರೆಯವರು ಮಾತನಾಡುತ್ತ ಜೀವನ ಕೌಶಲ್ಯ ಎಂದರೇನು? ಯಾರಿಗೆ ಜೀವವಿದೆ ಅವರಿಗೆಲ್ಲರಿಗೂ ಜೀವನವಿದೆ. ಯಾರಿಗೆ ಜೀವನ ಇದೆ ಅವರೆಲ್ಲರಿಗೂ  ಜೀವನ ಕೌಶಲ್ಯಗಳಿವೆ. ನಮಗೆ ನಾವು ಶ್ರೇಷ್ಠರೆಂದು ಗೌರವಿಸಿಕೊಳ್ಳಬೇಕು ದೈರ್ಯದಿಂದ ಇರಬೇಕು, ವ್ಯಕತಿತ್ವ ವಿಕಾಸನ ಮಾಡಿಕೊಳ್ಳುವುದು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮಾತನಾಡಲು ಕಲಿಯುವುದು.ಕಷ್ಟಕರ ಸನ್ನಿವೇಷದಲ್ಲಿ ಜೀವನ ಕೌಶಲ್ಯಗಳು ಉಪಯುಕ್ತವಾಗುತ್ತವೆ. 10 ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.    

ಯುವತಿಯರಿಗೆ ಆಟೋಟ ಚಟುವಟಿಕೆಗಳು, ಗುಂಪುಚರ್ಚೆ, ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಿರೂಪಣೆ ಪ್ರವೀಣ ಶೆದೆಯಣ್ಣನವರ,ಸ್ವಾಗತ ತೆಜಸ್ವೀನಿ ಬೆಗೂರ ದನ್ಯವಾದ ಮಂಗಳಾ ಮೋರೆ ನೇರವೇರಿಸಿದರು. ಸಿಬ್ಬಂದಿಗಳಾದ ಹಜರತ್ ಮುಲ್ಲಾ, ನಕ್ಲೂಬಾಯಿ, ಅಂಜನಾ ಬೇಂಡಿಗೇರಿ, ದೀಪಾ ಕೋಳೂರ ಹಾಜರಿದ್ದರು.