57 ನೇ ವಾರ್ಷಿಕಕ್ರೀಡಾ ಹಾಗೂ ಸಾಂಸ್ಕೃತಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭ

57th Annual Sports and Cultural Day Celebration and Prize Distribution Ceremony


57 ನೇ ವಾರ್ಷಿಕಕ್ರೀಡಾ ಹಾಗೂ ಸಾಂಸ್ಕೃತಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭ


ಕಾಗವಾಡ 15: ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ಸಧೃಡವಾದ ದೇಹದಲ್ಲಿ ಸಧೃಡವಾದ ಮನಸ್ಸನ್ನು ಹೊಂದುತ್ತಾರೆ ಹಾಗೂ ಓದುವುದರ ಕಡೆಗೆ ಗಮನ ಹರಿಸಬೇಕೆಂದು ಹಾರೂಗೇರಿ ಎಸ್‌ವ್ಹಿಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ. ಚಂದ್ರಶೇಖರ ಗುಡಸಿ ಹೇಳಿದರು. 


ಅವರು, ಮಂಗಳವಾರ ದಿ. 14 ರಂದು ಹಮ್ಮಿಕೊಂಡ ವಾರ್ಷೀಕ ಕ್ರೀಡಾ ಹಾಗೂ ಸಾಂಸ್ಕೃತಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾತನಾಡುತ್ತಿದ್ದರು. 


ಕಾಗವಾಡ ಗುರುದೇವಾಶ್ರಮದ ಪ.ಪೂ ಯತೀಶ್ವರಾನಂದ ಸ್ವಾಮೀಜಿ, ಹಂಚಿನಾಳ ಭಕ್ತಿಯೋಗಾಶ್ರಮದ ಪಪೂ ಮಹೇಶಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎ.ಪಾಟೀಲ, ಆಡಳಿತಾಧಿಕಾರಿ ವ್ಹಿ.ಎಸ್‌. ತುಗಶೆಟ್ಟಿ, ಪ.ಪೂ. ವಿಜ್ಞಾನ ವಿಭಾಗದ ಆಡಳಿತಾಧಿಕಾರಿ ಎಂ. ವ್ಹಿ. ಮಲಕಣ್ಣವರ ಉಪಸ್ಥಿತರಿದ್ದರು. ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಬಿ. ನಂದಾಳೆ ವಾರ್ಷಿಕ ವರದಿ ಓದಿದರು. ಪ್ರಾಚಾರ್ಯ ಡಾ. ಎಸ್‌.ಎ. ಕರ್ಕಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  


ಅತಿಥಿಗಳು ವಿದ್ಯಾರ್ಥಿಗಳಿಗೆ ಕ್ರೀಡಾ, ಸಾಂಸ್ಕೃತಿಕ, ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು. ದೈಹಿಕ ನಿರ್ದೇಶಕ ಅಮರ ಕೋರವಿ ಕ್ರೀಡಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಸುವರ್ಣ ಪದಕ ಪಡೆದ ವಿದ್ಯಾರ್ಥಿಗಳಾದ ಅಮಿತ ಖಿಚಡೆ, ಪೂಜಾ ಬಜಂತ್ರಿ, ಐಶ್ವರ್ಯಾ ಕೇರೂರೆ, ಯಲ್ಲಕ್ಕಾ ಬಜಂತ್ರಿ ಇವರಿಗೆ ಸುವರ್ಣ ಪದಕ ಹಾಗೂ ಪ್ರಮಾಣ ಪತ್ರಗಳನ್ನು ಕೊಟ್ಟು ಗೌರವಿಸಲಾಯಿತು.