ಬೆಂಗಳೂರು, ಏ.25,ರಾಜ್ಯದಲ್ಲಿರುವ ಒಟ್ಟು 4212 ಪಶುವೈದ್ಯ ಸಂಸ್ಥೆಗಳು ಕಾರ್ಯನಿವಹಿಸುತ್ತಿದ್ದು ಜಾನುವಾರಗಳಿಗೆ ಬೇಕಾದ ಎಲ್ಲ ಅಗತ್ಯ ಸೇವೆಗಳು ರೈತ ವರ್ಗಕ್ಕೆ ಹಾಗೂ ಜಾನುವಾರ ಸಾಕಾಣಿಕೆದಾರರಿಗೆ ಲಭ್ಯವಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ತುರ್ತು ಸ್ಥಿತಿಗಳಲ್ಲಿ ಅಧಿಕಾರಿಗಳು ಕಾರ್ಯನಿವಹಿಸುತ್ತಿದು, ಕರ್ತವ್ಯಲೋಪ ಕಂಡಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಸದ್ಯ ರಾಜ್ಯದಲ್ಲಿ ಪಶುಸಂಗೋಪನೆಯ ಸುಮಾರು 9000 ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾರೆ. ರಾಜ್ಯದಲ್ಲಿ ಮೇವು ಸಹ ಸಮರ್ಪಕವಾಗಿದ್ದು ಕೊರತೆಯಿದ್ದ ಜಿಲ್ಲೆಗಳಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಹಾಗೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೆ ಮೇವು ಒದಗಿಸಲು "ಕ್ಯಾಟಲ್ ಕ್ಯಾಂಪ್" ತೆರೆದು ಜಾನುವಾರಗಳಿಗೆ ಮೇವು ಒದಗಿಸಲಾಗುತ್ತದೆ ಎಂದರು.
ಜಿಲ್ಲಾವಾರು ಲಭ್ಯವಿರುವ ಮೇವಿನ ಪ್ರಮಾಣ ವಾರಗಳಲ್ಲಿ: ರಾಜ್ಯದಲ್ಲಿ ಒಟ್ಟು 1.4 ಕೋಟಿ ಮೇವು ಅವಲಂಬಿತ ಜಾನುವಾರಗಳಿವೆ, 14782716 ಟನ್ ನಷ್ಟು ಮೇವು ರಾಜ್ಯದಲ್ಲಿ ಲಭ್ಯವಿದೆ.
ಬೆಂಗಳೂರು ನಗರ 19, ಬೆಂಗಳೂರು ನಗರ 26, ರಾಮನಗರ 24, ಕೋಲಾರ 23, ಚಿಕ್ಕಬಳ್ಳಾಪುರ 40, ತುಮಕೂರು 27, ಚಿತ್ರದುರ್ಗ 40, ದಾವಣಗೆರೆ 39, ಶಿವಮೊಗ್ಗ 17, ಮೈಸೂರು 26, ಚಾಮರಾಜನಗರ 13, ಮಂಡ್ಯ 50, ಕೊಡಗು 28, ದಕ್ಷಿಣ ಕನ್ನಡ 33, ಉಡಪಿ 18, ಚಿಕ್ಕಮಗಳೂರು 41, ಹಾಸನ 22, ಬೆಳಗಾವಿ 16, ವಿಜಯಪುರ 52, ಧಾರವಾಡ 24, ಗದಗ 24, ಹಾವೇರಿ 16, ಉತ್ತರಕನ್ನಡ 10, ಬಾಗಲಕೋಟೆ 33, ಕಲಬುರಗಿ 23, ಯಾದಗಿರಿ 33, ಬೀದರ್ 23, ರಾಯಚೂರು 32, ಬಳ್ಳಾರಿ 24 ಹಾಗೂ ಕೊಪ್ಪಳ 48.ಕನಿಷ್ಠ ಪ್ರಮಾಣದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಳೆ ಬಂದಿರುವುದರಿಂದ ಹಸಿ ಮೇವು ಸಹ ಲಭ್ಯವಿದೆ ಎಂದು ತಿಳಿದುಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೇವು ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಬೇಡಿಕೆ ಬಂದರೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸಲು ಸೂಚಿಸಲಾಗಿದೆ. ಅಲ್ಲದೆ ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತಗಳು ಕಟ್ಟಿನಿಟ್ಟಿನ ಕ್ರಮ ಕೈಗೊಂಡಿದ್ದು ನಿಯಮ ಉಲ್ಲಂಘನೆ ಆಗದಂತೆ ಎಚ್ಚರವಹಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.