ಗದಗ: ವಿದ್ಯಾರ್ಥಿಗಳಿಗೆ ಅಂಕಗಳಿಕೆಯ ವಿದ್ಯಾಬ್ಯಾಸಕ್ಕಿಂತ ಸಮಾಜಕ್ಕೆ ನಾಡಿಗೆ ದೇಶಕ್ಕೆ ಕೊಡುಗೆ ನೀಡುವಂತೆ ಸಾರ್ಥಕ ಜೀವನ ರೂಪಿಸುವ ರೀತಿಯಲ್ಲಿ ಶಿಕ್ಷಕರು ಮುತುವಜರ್ಿವಹಿಸಬೇಕು ಎಂದು ಗಣಿ ಭೂ ವಿಜ್ಞಾನ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ನುಡಿದರು.
ಮುಳಗುಂದದಲ್ಲಿಂದು ರಾಷ್ಟೀಯ ಮಾಧ್ಯಮಿಕ ಶಾಲಾ ಶಿಕ್ಷಣ ಅಭಿಯಾನ ಯೋಜನೆಯಡಿ ನಿಮರ್ಿತ ಸಕರ್ಾರಿ ಪ್ರೌಢ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಎಲ್ಲ ವರ್ಗದ ವಿದ್ಯಾಥರ್ಿಗಳಿಗೆ ಸಕಲ ಸೌಲಭ್ಯಗಳನ್ನು ನೀಡುತ್ತಿದ್ದು ಪಾಲಕರು, ಶಿಕ್ಷಕಕರ ಮೇಲೆ ವಿಶೇಷ ಹೊಣೆಗಾರಿಕೆ ಭವಿಷ್ಯದ ಆಶಾಭಾವನೆ ಇದೆ. ಎಂದು ನುಡಿದ ಸಚಿವ ಸಿ.ಸಿ.ಪಾಟೀಲ ಚುನಾವಣೋತ್ತರ ಕಾಲದಲ್ಲಿ ಜನಪ್ರತಿನಿಧಿಗಳು ಎಲ್ಲ ಜನರನ್ನು ಪ್ರತಿನಿಧಿಸುತ್ತಿದ್ದು ಜಿಲ್ಲೆಯ ಅಭ್ಯವೃದ್ಧಿಯೇ ಪ್ರಥಮಾದ್ಯತೆ ಆಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ ಬಹಳ ವರ್ಷಗಳಿಂದ ಅನೇಕ ಕಾರಣಗಳಿಂದ ಬಾಕಿ ಉಳಿದಿದ್ದ ಸರಕಾರಿ ಪ್ರೌಢಶಾಲೆ ಕಟ್ಟಡ, ಮುಳಗುಂದ ಜನಪ್ರತಿನಿಧಿಗಳ ಗುರು ಹಿರಿಯರ ಗಣ್ಯರ ಮುತುವಜರ್ಿಯಿಂದ ಪೂರ್ಣಗೊಂಡಿದೆ ಎಂದರು. ಗದಗ ಜಿಲ್ಲೆಯ ಕಪ್ಪತಗುಡ್ಡ ಸುರಕ್ಷಿತ ಅರಣ್ಯ ಪ್ರದೇಶವಾಗಿಯೇ ಉಳಿಯಬೇಕು. ಅದು ಇನ್ನೂ ಹೆಚ್ಚು ಹಸುರೀಕರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಸದ್ಯ ಅರಣ್ಯ ಸಚಿವರು ಆಗಿರುವ ಸಿ.ಸಿ.ಪಾಟೀಲರು ಸೂಕ್ತ ಕ್ರಮ ಜರುಗಿಸವರೆಂದು ಭರವಸೆಯನ್ನು ಎಚ್.ಕೆ.ಪಾಟೀಲ ವ್ಯಕ್ತಪಡಿಸಿದರು.
ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠ ಹಾಗೂ ಮುಳಗುಂದದ ಗವಿಮಠದ ಮಲ್ಲಿಕಾಜರ್ುನ ಸ್ವಾಮೀಜಿ ಮಾತನಾಡಿ ಇಂದು ಮಕ್ಕಳಿಗೆ ವಂದಿಸಿ ವಿದ್ಯಾಭ್ಯಾಸ ಮಾಡಿಸುವ ಪರಿಸ್ಥಿತಿಯನ್ನು 12ನೇ ಶತಮಾನದಲ್ಲಿ ಅಲ್ಲಮ ಪ್ರಭುಗಳು ಕಂಡುಕೊಂಡಿದ್ದರೆಂಬುದನ್ನು ವಚನವನ್ನು ಉದ್ಧರಿಸಿ ತಿಳಿಸಿ ಇಂದು ಶಿಕ್ಷಣ ನಾಗರಿಕತೆಯ ಮುಖ್ಯ ಲಕ್ಷಣವಾಗಿದೆ. ಕಲಿಕೆಯ ಎಲ್ಲ ಅವಕಾಶ, ಸೌಲಭ್ಯಗಳಿದ್ದರೂ ವಿದ್ಯಾಭ್ಯಾಸ ಮಾಡುವ ಮನಸ್ಸಿನ ಕೊರತೆ ಇದೆ. ಶಿಕ್ಷಕರು, ಪಾಲಕರು ಈ ನಿಟ್ಟಿನಲ್ಲಿ ತಾವು ಹೊಣೆಗಾರಿಕೆ ನಿಬಾಯಿಸಬೇಕು ಎಂದರು.
ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಎಚ್.ಪಾಟೀಲ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್.ಪಾಟೀಲ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಹತ್ತಿ ನೂಲಿನ ಗಿರಣಿ ಒಕ್ಕೂಟದ ಅಧ್ಯಕ್ಷ ಆರ್.ಎನ್.ದೇಶಪಾಂಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎನ್.ಎಚ್. ನಾಗೂರು, ಡಯಟ್ ಪ್ರಾಚಾರ್ಯ ಎಚ್.ಎಂ. ಖಾನ್, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಎಂ. ಎಚ್. ಕಂಬಳಿ , ತಹಶೀಲ್ದಾರ ಶ್ರೀನಿವಾಸ ಮೂತರ್ಿ ಕುಲಕರ್ಣಿ , ಶಿವಪ್ಪ ನೀಲಗುಂದ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಮತಾ ಬೇಗಂ ಸರಾವರಿ, ಮುಖ್ಯೋಪಾಧ್ಯಾಯ ಸಂಜೀವ ಮಾಳಗಿ, ಮುಳಗುಂದ ಪ.ಪಂ. ನೂತನ ಸದಸ್ಯರುಗಳು ಸರ್ಕಾರಿ ಪ್ರೌಢಶಾಲೆ ಶಿಕ್ಷಕರು, ವಿದ್ಯಾಥರ್ಿಗಳು ಹಾಗೂ ಮುಳಗುಂದದ ಗುರು ಹಿರಿಯರು ಸಮಾರಂಭದಲ್ಲಿದ್ದರು.