ಬೆಲೆ ಏರಿಕೆಯ ರಾಜ್ಯ ಸರ್ಕಾರ ಜನರಿಗೆ ಶಾಪಗ್ರಸ್ಥ
ಸಿಂದಗಿ 04: ಕಾಂಗ್ರಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಿಡಿಕಾರಿದ್ದಾರೆ. ಈ ಕುರಿತಾ ಪತ್ರಿಕಾ ಹೇಳಿಕೆ ನೀಡಿದ ಅವರು, ಅಧಿಕಾರ ನೀಡಿದ ಮತದಾರರಿಗೆ ಈ ಸರಕಾರ ಶಾಪಗ್ರಸ್ಥವಾಗಿದೆ. ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ಆಫಿಡೆವಿಟ್, ಮಾರ್ಟ್‌ಗೇಜ್, ವೃತ್ತಿಪರ ತೆರಿಗೆ, ಬಸ್ ದರ, ನೀರಿನ ಸುಂಕ ಪೆಟ್ರೋಲ್ ಸೇರಿದಂತೆ ಎಲ್ಲವೂ ಏರಿಕೆಯಾಗಿದೆ. ಅಧಿಕಾರ ನೀಡಿದ ಮತದಾರರಿಗೆ ಶಾಪ ನೀಡುವ ಸರಕಾರ ಇದಾಗಿದೆ. ರಾಜ್ಯ ಸರಕಾರ ಈ ದರ ಹೆಚ್ಚಳ ಹಿಂಪಡೆಯಬೇಕು ಎಂದು ಆಗ್ರಹಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.