ಸಿದ್ಧರಾಮೇಶ್ವರ ಸಭಾಭವನದಲ್ಲಿ ಜರುಗಿದ ಡಾಂಗೆ ಎಜ್ಯುಕೇಷನ್ ಸೊಸೈಟಿ ಸಂಸ್ಥೆಯ ಆರನೇ ವರ್ಷದ ವಾರ್ಷಿಕೋತ್ಸವ

ಸಿದ್ಧರಾಮೇಶ್ವರ ಸಭಾಭವನದಲ್ಲಿ ಜರುಗಿದ ಡಾಂಗೆ ಎಜ್ಯುಕೇಷನ್ ಸೊಸೈಟಿ ಸಂಸ್ಥೆಯ ಆರನೇ ವರ್ಷದ ವಾರ್ಷಿಕೋತ್ಸವ The sixth anniversary of Dange Education Society was held at Siddarameshwara Sabha Bhavan

ಲೋಕದರ್ಶನ ವರದಿ 

           ಹಾವೇರಿ 16 : ನರ್ಸಿಂಗ್,ಪ್ಯಾರಾ ಮೆಡಿಕಲ್‌ನಂತಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭದ ಕೆಲಸವಲ್ಲ.ಡಾಂಗೆ ಶಿಕ್ಷಣ ಸಂಸ್ಥೆಯು ಅನೇಕ ಸವಾಲುಗಳನ್ನು ಎದುರಿಸಿ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿ ಮುನ್ನಡಿಯುತ್ತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ರುದ್ರ​‍್ಪ ಲಮಾಣಿ ಹೇಳಿದರು. ನಗರದ  ಸಿದ್ಧರಾಮೇಶ್ವರ ಸಭಾಭವನದಲ್ಲಿ ಜರುಗಿದ ಡಾಂಗೆ ಎಜ್ಯುಕೇಷನ್ ಸೊಸೈಟಿ ಸಂಸ್ಥೆಯ ಆರನೇ ವರ್ಷದ ವಾರ್ಷಿಕೋತ್ಸವ ಸಮಾರಂಭ,2026-27ನೇ ಸಾಲಿನ ದೀಪಧಾರಣೆ ಹಾಗೂ ಪದವಿ ಪ್ರಧಾನ ಸಮಾರಂಭ ಮತ್ತು   ಸಾಂಸ್ಕೃತಿಕ ಕಲಾ ವೈಭವ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

          ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಡಾ.ಸಂಜಯ ಡಾಂಗೆ ನರ್ಸಿಂಗ್ ಹೋಂ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ಉತ್ತಮವಾಗಿ ಕೆಲಸ ಮಾಡುತ್ತಿದೆ. ವಿವಿಧ ಭಾಗಗಳಿಂದ ಬರುವ ಎಲ್ಲ ಬಡ ವರ್ಗದ ಜನರಿಗೆ ಸಹಾಯ, ಸಹಕಾರ ನೀಡುತ್ತಿದೆ. ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿಗಳನ್ನು ಹೊಂದಿದ್ದು,ಡಾಂಗೆ ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಡಾ.ಸಂಜಯ ಡಾಂಗೆ ಕಳೆದ ಆರು ವರ್ಷದಲ್ಲಿ ಉತ್ತಮ ಸಂಸ್ಥೆಯನ್ನು ಕಟ್ಟಿ, ಬೆಳೆಸುವಲ್ಲಿ ಯಶಸ್ವಿಯಾದ್ದಾರೆ. ಸಂಸ್ಥೆಯು ಇನ್ನಷ್ಟು ಆರೋಗ್ಯ ಸೇವೆಯನ್ನು ಒದಗಿಸಲು ಅಗತ್ಯ ಸಹಕಾರ ಕೊಡುತ್ತೇವೆ ಎಂದು ತಿಳಿಸಿದರು. 

         ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಮಾತನಾಡಿ ಕಳೆದ ಆರು ವರ್ಷಗಳಿಂದ ಉತ್ತಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವುದರೊಂದಿಗೆ ಡಾ.ಸಂಜಯ ಡಾಂಗೆ ನೂರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದಾರೆ. ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವಂತಹ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚು ಹೆಚ್ಚು ಆರಂಭವಾಗಬೇಕಿದೆ ಎಂದು ಉಪಸಭಾಧ್ಯಕ್ಷರು ಆಶಯ ವ್ಯಕ್ತಪಡಿಸಿದರು. 

           ಡಾಂಗೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಸಂಜಯ ಡಾಂಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ನರ್ಸಿಂಗ್ ಹೋಂ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್‌ ಆರಂಭಿಸಿ ಜಿಲ್ಲೆಯ ಜನತೆಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆ ಕಟ್ಟಲಾಗಿದೆ.ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ.ಸಂಸ್ಥೆಯು ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದು,ಬೇರೆ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಬಂದಿದ್ದಾರೆ.ಬರುವ ದಿನಗಳಲ್ಲಿ ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳು, ಡೆಂಟಲ್, ಆಯುರ್ವೇದಿಕ್ ಕಾಲೇಜು ಆರಂಭಿಸುವ ಚಿಂತನೆ ಇದೆ.ಇದಕ್ಕೆ ಎಲ್ಲರ ಸಹಾಯ,ಸಹಕಾರ ಅತ್ಯಗತ್ಯವಾಗಿದೆ ಎಂದರು. 

         ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ ಹಿರೇಮಠ,ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಪಿ.ಆರ್ ಹಾವನೂರ,ತಾಲೂಕ ಆರೋಗ್ಯಾಕಾರಿ ಡಾ.ಪ್ರಭಾಕರ ಕುಂದೂರ,ಮುಖಂಡರಾದ ಪಿ.ಡಿ ಶಿರೂರ,ಡಾ.ನರೇಶ ಭಾಟಿ,ವಿನಯ್ ಕುಲಕರ್ಣಿ,ಪ್ರಾಚಾರ್ಯರಾದ ರವಿಕುಮಾರ,ಭರತ ಡಾಂಗೆ,ಸರಸ್ವತಿ ವೈ.ಹೆಚ್,ಪುಟ್ಟಪ್ಪ ಚನ್ನಮ್ಮನವರ,ಪರಶುರಾಮ ಅಡಕಿ,ಜಮೀರ ಜಿಗರಿ,ಕರಬಸಪ್ಪ ಹಲಗಣ್ಣವರ,ವಸಂತ ಹೈದರಾಬಾದ್,ರಬ್ಬಾನಿ ಹುಲಗೇರಿ,ಪ್ರಶಾಂತ ವಾಗ್ಮೋರೆ,ನೂರಅಹ್ಮದ್ ಕರ್ಜಗಿ,ಉಮೇಶ ವಾಘ್,ಉಮೇಶ ತಳವಾರ,ಶಂಕರ ಮೆಹರವಾಡೆ ಸೇರಿದಂತೆ ಗಣ್ಯರು,ಆಡಳಿತ ಮಂಡಳಿಯವರು,ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.