ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ
Protest over NEET exam question paper leak
ಲೋಕದರ್ಶನ ವರದಿ
ವಿಜಯಪುರ 16: ನೀಟ್ ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಆರೋಪಗಳನ್ನು ತೀವ್ರವಾಗಿ ಖಂಡಿಸಿ ಭೀಮ್ ರಾಜ್ಯ ದಲಿತ್ ಸೇವಾ ಸಮೀತಿ (ರಿ )ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಭೀಮ್ ರಾಜ್ಯ ದಲಿತ್ ಸೇವಾ ಸಮೀತಿ (ರಿ )ವಿಜಯಪುರ ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸುವಂತೆ ವಿನಂತಿಸಿದರು. ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ಅವರು ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ “ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವಂತಹ ಈ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಭೀಮ್ ರಾಜ್ಯ ದಲಿತ ಸೇವಾ ಸಮೀತಿ (ರಿ )ತೀವ್ರವಾಗಿ ಖಂಡಿಸುತ್ತದೆ.
ಇದು ಕೇವಲ ಒಂದು ಪರೀಕ್ಷೆಯ ಸೋರಿಕೆಯಲ್ಲ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲಿನ ದೊಡ್ಡ ದಾಳಿಯಾಗಿದೆ" ಎಂದು ಆರೋಪಿಸಿದರು. "23 ಲಕ್ಷ ವಿದ್ಯಾರ್ಥಿಗಳು ಇದೇ ಮೇ 03 ರಂದು ಬರೆದಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಇವರೆಲ್ಲ ಮುಂದೆ ವೈದ್ಯರಾಗುವ ಅಪಾರ ಕನಸಿನೊಂದಿಗೆ ಹಗಲುರಾತ್ರಿ ಓದಿ ನೀಟ್ ಪರೀಕ್ಷೆ ಬರೆದಿದ್ದವರು. ಈ ಮಕ್ಕಳ ಜೊತೆಗೆ ಅವರ ಪೋಷಕರೂ ಕೂಡ ಸಮಯ, ಹಣ, ತನು-ಮನ, ನೆಮ್ಮದಿ ಎಲ್ಲವನೂ ತಮ್ಮ ಮಕ್ಕಳ ಈ ಪರೀಕ್ಷೆಗೆ ತೊಡಗಿಸಿದ್ದರು. ಆದರೆ, ಯಾವುದೇ ಅಕ್ರಮಗಳಿಲ್ಲದೆ ಒಂದು ಸರಳ ಪರೀಕ್ಷೆಯನ್ನು ಮಾಡಲಾಗದಷ್ಟು ನಮ್ಮ ವ್ಯವಸ್ಥೆ ಅಪರಾಧಿಗಳ ಮೈದಾನವಾಗಿದೆ" ಎಂದು ನಾಗರಾಜ ಕಬಾಡೆ ಆಕ್ರೋಶ ವ್ಯಕ್ತಪಡಿಸಿದರು.
"ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ, ನೇಮಕಾತಿಗಳಲ್ಲಿ ಅಕ್ರಮ, ಕರ್ತವ್ಯದಲ್ಲಿ ಅಕ್ರಮ. ಏನೇ ಅಕ್ರಮ ಮಾಡಿದರೂ ದಕ್ಕಿಸಿಕೊಳ್ಳಬಹುದು ಎನ್ನುವ ಧೈರ್ಯ. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳೂ ಇವೆ. ಇತ್ತೀಚೆಗಂತೂ ದೊಡ್ಡ ದೊಡ್ಡ ಅಕ್ರಮ ಮಾಡಿದವರು ಈಗಿನ ನವದೇಶಭಕ್ತರು ತಯಾರಿಸಿರುವ ಕೇಸರಿ ಬಣ್ಣದ ವಾಷಿಂಗ್ ಮೆಷಿನನಲ್ಲಿ ಹೋಗಿಬಂದರೆ ಅವರ ಎಲ್ಲಾ ಅಕ್ರಮ, ವಂಚನೆ, ಕಳ್ಳತನ, ಕೊಲೆ, ಕೊಳೆ, ಕಲೆ ಎಲ್ಲವೂ ಮಾಯ, ಶುಭ್ರ, ಸ್ವಚ್ಛ" ಎಂದು ಕೇಂದ್ರ ಸರ್ಕಾರವನ್ನು ಕಾಲೆಳೆದರು."ಭಾರತ್ ಮಾತಾ ಕಿ ಜೈ" ಎಂದು ಕೂಗಿ, "ಜೈ ಶ್ರೀರಾಮ್" ಎಂದರಂತೂ ನಾಳೆ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಸಹ ಆಗಬಹುದು.ಎಲ್ಲಿವರೆಗೆ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಶಿಕ್ಷೆ ಆಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಅಪಾಯದ ಹಾದಿಯಲ್ಲಿ ಸಾಗುತ್ತಲೇ ಇರುತ್ತದೆ.
ಕಷ್ಟ, ನಷ್ಟ, ನೋವು, ಸಾಲುಗಳನ್ನು ಅನುಭವಿಸತ್ತಲೇ ಇರುತ್ತದೆ. ಇಲ್ಲಿ "ದೇಶ" ಎಂದರೆ "ದೇಶದ ಜನ" ಎಂಬ ಅರಿವುಗೇಡಿಗಳಿಗೆ ಇಲ್ಲ" ಎಂದು ನಾಗರಾಜ ಕಬಾಡೆ ಹೇಳಿದರು."ಇಂದು ರದ್ದಾಗಿರುವ ಪರೀಕ್ಷೆಯಿಂದ ನೊಂದಿರುವ ವಿದ್ಯಾರ್ಥಿಗಳ ಪೋಷಕರು ಇಂದಿನ ಈ ಸ್ಥಿತಿಗೆ ತಾವೆಷ್ಟು ಕಾರಣರು ಎಂದು ಯೋಚಿಸಿದರೆ ಬಹುಶಃ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಬಹುದು. ಕೇಂದ್ರ ಸರ್ಕಾರವು ತಪ್ಪಿತಸ್ಥರ ಮೇಲೆ ಅಃಋ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪಾರದರ್ಶಕ ಪುನರ್ ಪರೀಕ್ಷೆ ನಡೆಸುವುದು ಮತ್ತು ಅವರ ಮಾನಸಿಕ ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳುವುದು ಅತ್ಯಗತ್ಯ" ಎಂದು ಅವರು ಸರ್ಕಾರಕ್ಕೆ ಆಗ್ರಹ ಮಾಡಿದರು.
ಭೀಮ್ ರಾಜ್ಯ ದಲಿತ್ ಸೇವಾ ಸಮೀತಿ (ರಿ )ಸರ್ಕಾರಕ್ಕೆ ಆಗ್ರಹಿಸುವುದೇನೆಂದರೆ - ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅಃಋ ತನಿಖೆಯನ್ನು ವೇಗಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ.- ಎನ್.ಟಿ.ಎ ಅಧಿಕಾರಿಗಳ ಜವಾಬ್ದಾರಿ ನಿರ್ಧರಿಸಿ ಕ್ರಮ.- ಪಾರದರ್ಶಕವಾದ ಪುನರ್ ಪರೀಕ್ಷೆಯನ್ನು ಶೀಘ್ರವಾಗಿ ನಡೆಸುವುದು. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಂತೆ ಖಚಿತಪಡಿಸುವುದು. ಈ ಸಂದರ್ಭದಲ್ಲಿ ಭೀಮ್ ರಾಜ್ಯ ದಲಿತ್ ಸೇವಾ ಸಮೀತಿ (ರಿ )ಜಿಲ್ಲಾಧ್ಯಕ್ಷರಾದ ನಾಗರಾಜ ಕಬಾಡೆ, ಸಂಸ್ಥಾಪಕ ಅಧ್ಯಕ್ಷರಾದ ಅಪ್ಪುರಾಜ್ ನಿಮಾದಾರ, ನೀಲಾಂಬಿಕ ಕಟ್ಟಿಮನಿ, ಸೋಮಶೇಖರ ಕಬಾಡೆ, ರವಿ ರಾಠೋಡ, ವಿಜಯಕುಮಾರ ನಿಮಾದಾರ, ಚಂದ್ರಶೇಖರ ಕಟ್ಟಿಮನಿ, ಪ್ರಿಯಾಂಕಾ ನಿಮಾದಾರ, ಕವಿತಾ ಹೊಸಮನಿ, ಗೀರೀಶ ಕುಲಕರ್ಣಿ, ಅಬ್ದುಲ್ ಹಕ್ ಇನಾಮದಾರ, ಹುಸೇನ ಭಾಷಾ ಹಿಪ್ಪರಗಿ, ಆನಂದ ಕಾಂಬಳೆ, ರಾಘವೇಂದ್ರ ಹೊನ್ನಕಾಂಬಳೆ ಅವರು ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 