ಲಿಂ. ಮ.ನಿ.ಪ್ರ.ರುದ್ರಮುನಿ ಮಹಾಸ್ವಾಮಿಗಳ 42ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ
42nd Punya Smaranotsavam of the Rev. Dr. Rudramuni Mahaswamy
ಲೋಕದರ್ಶನ ವರದಿ
ಸವಣೂರ 16 : ತಾಲ್ಲೂಕಿನ ಹತ್ತಿಮತ್ತೂರಿನ ವಿರಕ್ತಮಠದಲ್ಲಿ ದಿ,22 ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಲಿಂ. ಮ.ನಿ.ಪ್ರ.ರುದ್ರಮುನಿ ಮಹಾಸ್ವಾಮಿಗಳ 42ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಹತ್ತಿಮತ್ತೂರ ವಿರಕ್ತಮಠದ ಮ.ನಿ.ಪ್ರ.ನಿಜಗುಣ ಶಿವಯೋಗಿಗಳು ಹೇಳಿದರು. ಇಲ್ಲಿನ ಹತ್ತಿಮತ್ತೂರಿನ ವಿರಕ್ತಮಠದಲ್ಲಿ ಸ್ಮರಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು.ಲಿಂ. ಮ.ನಿ.ಪ್ರ ರುದ್ರಮುನಿ ಮಹಾಸ್ವಾಮಿಗಳು ತಮ್ಮದೆಯಾದ ಛಾಪು ಮೂಡಿಸಿ ಭಕ್ತಿ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವಲ್ಲಿ ರುದ್ರಮುನಿ ಮಹಾಸ್ವಾಮಿಗಳು ಪಾತ್ರ ಬಹುಮುಖ್ಯವಾಗಿದೆ.
ಅವರ ಸಂದೇಶಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು,ದಿ,22ರ ಕಾರ್ಯಕ್ರಮಕ್ಕೆ ಹತ್ತಿಮತ್ತೂರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಎಲ್ಲರ ಸಹಾಯ ಸಹಕಾರದೊಂದಿಗೆ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಮುನ್ನಡಿಯೋಣ ಎಂದು ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಹನುಮಂತಗೌಡ್ರ ಉಳ್ಳಾಗಡ್ಡಿ,ಬಸವರಾಜ ಕೋಳಿವಾಡ,ಬಸಲಿಂಗಯ್ಯ ಆರಾಧ್ಯಮಠ, ಗೀರೀಶ ಪಾಟೀಲ,ರಮೇಶ ಅಣ್ಣೆಪ್ಪನವರ,ಯಲ್ಲಪ್ಪ ರೊಡ್ಡಣ್ಣವರ,ಶಿವಯೋಗಿ ಹಾಲಪ್ಪನವರ,ಪ್ರಭು ಮಲ್ಲೂರು,ಅಣ್ಣಪ್ಪ ತುದಿಗಾಲ,ವೀರಣ್ಣ ಪಟ್ಟಣಶೆಟ್ಟಿ,ಅಜ್ಜಯ್ಯ ಕುಲಕರ್ಣಿ ಇನ್ನೂ ಅನೇಕರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 