ಸಿದ್ದರಾಮಯ್ಯರಿಂದ ಕೊಡಗು ಪರಿಸ್ಥಿತಿ ಪರಾಮರ್ಶ


ಮಡಿಕೇರಿ 23: ಮಳೆ ಮತ್ತು ಭೂಕುಸಿತದಿಂದ ಹಾನಿಗೀಡಾಗಿರುವ ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು  ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶ  ನಡೆಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರೊಂದಿಗೆ ಮಡಿಕೇರಿಗೆ ತೆರಳಿದ  ಸಿದ್ದರಾಮಯ್ಯ ಜಲಪ್ರಳಯದಿಂದ ತತ್ತರಿಸಿ ಹೋಗಿರುವ  ಕೊಡಗು ಜಿಲ್ಲೆಯಲ್ಲಿ ಪ್ರವಾಸ ನಡೆಸಿ ಸಂತ್ರಸ್ತರ ಗೋಳು ಆಲಿಸಿದರು. 

ಕುಶಾಲನಗರ, ಮಡಿಕೇರಿ ಸೇರಿದಂತೆ ವಿವಿಧೆಡೆ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಮಹಿಳೆಯರು, ನೊಂದವರ ಸಂಕಷ್ಟಗಳನ್ನು  ಅರಿತರು. 

ಕಾರು ಬಿಟ್ಟು ಜೀಪ್ನಲ್ಲೇ ತೆರಳಿ ಗುಡ್ಡ ಕುಸಿದ ಸ್ಥಳಗಳು, ಹಾನಿಗೀಡಾದ ರಸ್ತೆಗಳ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ ಸಲಹೆ ನೀಡಿದರು. 

ಸರ್ಕಾರ   ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ಅದರ ವೇಗ ಇನ್ನೂ ಹೆಚ್ಚಾಗಬೇಕು. ಹಾನಿಗೊಳಗಾಗಿರುವ ಕೊಡಗಿನಲ್ಲಿ ಮೂಲಭೂತ ಸೌಕರ್ಯಗಳ ಮರು ನಿಮರ್ಾಣವಾಗಬೇಕು.ಇದಕ್ಕಾಗಿ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಸಮನ್ವಯ ಸಮಿತಿ ಸಭೆಯಲ್ಲೂ ಚಚರ್ೆ ಮಾಡುತ್ತೇನೆ.ಕೊಡಗಿನ ಮರು ನಿಮರ್ಾಣದ ಹೊಣೆ ನಮ್ಮದು.

ಈ ಮಧ್ಯೆ ಪ್ರವಾಹ ಪೀಡಿತ ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಬಿರುಸುಗೊಂಡಿದ್ದು, ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ 12 ಮಂದಿ ಸಾವನ್ನಪ್ಪಿದ್ದು,  ಜಿಲ್ಲೆಯನ್ನು ಮತ್ತೆ ಕಟ್ಟುವ ನಿಟ್ಟಿನಲ್ಲಿ ಪಯತ್ನ ನಡೆಸಲಾಗುತ್ತಿದೆ ಎಂದು ಸಕರ್ಾರ ತಿಳಿಸಿದೆ. 

ಪರಿಹಾರ ಕಾರ್ಯಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ 25 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖಗರ್ೆ ತಿಳಿಸಿದ್ದಾರೆ. ರಸ್ತೆ ಸುಧಾರಣೆ ಕೆಲಸ ವಿಳಂಬವಾಗಲಿದೆ ಆದರೆ ಶೀಘ್ರದಲ್ಲಿಯೇ ಕೊಡಗು ಸಹಜ ಸ್ಥಿತಿಯತ್ತ ಮರಳುವ ನಿಟ್ಟಿನಲ್ಲಿ ಸಕರ್ಾರ ಕಾಯರ್ೊನ್ಮುಖವಾಗಿದೆ ಎಂದರು. 

ಮಳೆಯಿಂದ ಭೂ ಕುಸಿತವಾಗಿದ್ದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಜೋಡುಪಾಳ್ಯದಲ್ಲಿ ರಸ್ತೆ ದುರಸ್ಥಿ ಕಾರ್ಯ ತ್ವರಿತಗತಿಯಲ್ಲಿ ಮುಂದುವರಿದಿದೆ. ಅಗ್ನಿಶಾಮಕ, ಪೊಲೀಸ್  ಹಾಗೂ ಅರಣ್ಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ  ತೊಡಗಿದ್ದಾರೆ. ರಸ್ತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಕೃಷ್ಣಮೂತರ್ಿ ತಿಳಿಸಿದ್ದಾರೆ.