ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಪವನ ಕತ್ತಿ

ಹುಕ್ಕೇರಿ 05: ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಹೇಳಿದರು.  ಅವರು ಇಂದು ಹುಕ್ಕೇರಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚಾರಣೆಗೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ವಿಶ್ವರಾಜ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಡಾ, ಸರ್ವ ಪಲ್ಲಿ ರಾಧಾಕೃಷ್ಣರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಹಿರಾಶುಗರ ನಿರ್ದೆಶಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ವೇದಿಕೆ ಮೇಲೆ ತಹಸಿಲ್ದಾರ ಡಾ, ಡಿ ಎಚ್ ಹೂಗಾರ, ಇಓ ಉಮೇಶ ಸಿದ್ನಾಳ,  ಪುರಸಭೆ ಅದ್ಯಕ್ಷ ಅಣ್ಣಪ್ಪಾ ಪಾಟೀಲ,ಸರಕಾರಿ ನೌಕರ ಸಂಘದ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ, ಕೃಷಿ ಅಧಿಕಾರಿ ಮಹಾದೇವ ಪಟಗುಂದಿ, ಹೀರಾ ಶುಗರ ನಿರ್ದೆಶಕ ಅಶೋಕ ಪಾಟೀಲ, ಅಕ್ಷರ ದಾಸೋಹ ನಿರ್ದೆಶಕಿ ಸವಿತಾ ಹಲಕಿ, ಬಿ ಆರ್ ಸಿ ಎ ಎಸ್ ಪದ್ಮನ್ನವರ ಉಪಸ್ಥಿತರಿದ್ದರು. 

ಬಿ ಇ ಓ ಮೋಹನ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆ ಗಣ್ಯರಿಗೆ ಸ್ವಾಗತ ಕೋರಿ ಸತ್ಕರಿಸಿದರು. ಹುಕ್ಕೇರಿ ತಾಲೂಕಿನ ನಿವೃತ್ತಿ ಶಿಕ್ಷಕರಿಗೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಕಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪವನ ಕತ್ತಿ ದೇಶದ  ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವ ಪಡೆದಿದೆ, ಯಾವುದೇ ರಂಗ ಎಡವಿದರೂ ಸರಿಪಡಿಸಬಹುದು ಆದರೆ  ಶಿಕ್ಷಣ ಕ್ಷೇತ್ರದಲ್ಲಿ ವ್ಯತ್ಯಾಸ ಆದರೆ ದೇಶಕ್ಕೆ ಮಾರಕವಾಗಬಹುದು. ಕಾರಣ ಇದಕ್ಕೆ ಕಾರಣರಾದ ಶಿಕ್ಷಕರನ್ನು ಸ್ಮರಿಸುವ ಈ ಶುಭದಿನವನ್ನು ಇಡಿ ದೇಶ ಆಚರಿಸುತ್ತದೆ ಎಂದರು.ಕೊನೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಹುಕ್ಕೇರಿ ತಾಲೂಕಿನ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲಾ ಶಿಕ್ಷಕರು ಹಾಜರಿದ್ದರು.