ಧಾರಾಕಾರ ಮಳೆ: ಸರ್ಕಾರದಿಂದ ರೈತರಿಗೆ ಪರಿಹಾರ ಹಣ ನೀಡಿಲ್ಲ

ಸಂತೋಷಕುಮಾರ್ ಕಾಮತ್  

ಮಾಂಜರಿ 24:  ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 24777.93 ಹೆಕ್ಟೇರ ಪ್ರದೇಶದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 41.75 ಕೋಟಿ ರೂ. ಬೆಳೆ ಹಾನಿಯಾಗಿದ್ದು ಸರ್ಕಾರದಿಂದ ರೈತರಿಗೆ ಬಿಡಿಗಾಸಿನ ಪರಿಹಾರ ಹಣ ನೀಡಿಲ್ಲ. 

ಇದರಿಂದಾಗಿ ಸಾಲ ಸೋಲ ಮಾಡಿದ ಅನ್ನದಾತನ ಬದುಕಿನ ಮೇಲೆ ನೆರೆ-ಮಳೆ ಬರೆ ಎಳೆದಂತಾಗಿದೆ. ಪ್ರವಾಹ ಪೀಡಿತ ಬೆಳೆಗಳ ಹಾನಿ ಸಹ ಸಮೀಕ್ಷೆ ಕಾರ್ಯ ಮುಗಿದು ಇದೀಗ ಸರ್ಕಾರಕ್ಕೆ ಕಂದಾಯ-ಕೃಷಿ ಇಲಾಖೆ ಅಧಿಕಾರಿಗಳು ಪ್ರವಾಹದಿಂದ ಹಾನಿಗೇಡಾದ ಬೆಳೆಗಳ  ಸಮೀಕ್ಷಾ ವರದಿಕಳುಹಿಸಿದ್ದಾರೆ 

ಇನ್ನು ಪ್ರವಾಹ ಪೀಡಿತ ಗ್ರಾಮಗಳಿಗೆ ಕೇಂದ್ರ ಅಧ್ಯಯನ ತಂಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನ ಹಾಗೂ ಕಷಿ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಶೀಘ್ರದಲ್ಲೇ ಬೆಳೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಜಿಲ್ಲೆಯ ಅನ್ನದಾತರಿಗೆ ಬೆಳೆ ಪರಿಹಾರ ಇನ್ನು ಗಗನ ಕುಸಮವಾಗಿ ಉಳಿದುಕೊಂಡಿದೆ  

ಚಿಕ್ಕೋಡಿಉಪವಿಭಾಗದಲ್ಲಿಜಲಪ್ರಳಯದಿಂದಾಗಿ 46 ಗ್ರಾಮಗಳು ಜಲಾವೃತವಾಗಿದ್ದವು ಲಕ್ಷಾಂತರ ಹೇಕರ್ ಪ್ರದೇಶದ ಬೆಳೆ ಬಾಳುವ ಬೆಳೆಗಳು ಜಲಪ್ರಳಯದಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಜಿಲ್ಲೆಯಲ್ಲಿ ಭತ್ತ, ಜೋಳ, ಗೋವಿನಜೋಳ, ಸಜ್ಜೆಹೆಸರು, ತೋಗರಿ, ಶೇಂಗಾ, ಸೋಯಾಬೀನ್ ಸೂರ್ಯಕಾಂತಿ, ಕಬ್ಬು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದವು 

ಒಟ್ಟು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 24777.93 ರೈತರಿಗೆ ಒಂದು ಪೈಸೆ ಪರಿಹಾರ ಹಣ ನೀಡಿಲ್ಲ. ಹೆಕ್ಟೇರ್ ಪ್ರದೇಶದ ಬೆಳೆಗಳಲ್ಲಿ ಪ್ರವಾಹದಲ್ಲಿ ನಮ್ಮ ಸರ್ಕಾರ ರೈತರವಾಗಿದೆ ಎಂದು ಮೊಸಳೆ ಕೊಚ್ಚಿಕೊಂಡು ಹೋಗಿದ್ದು ಆದರೆ ಸರ್ಕಾರ ಮಾತ್ರ ಕಣ್ಣಿರು ಸುರಿಸುವ ಸರ್ಕಾರ ರೈತರ ಬೆಳೆಗಳಿಗೆ 

ಕೂಡಲೇ ಪರಿಹಾರ ಹಣ ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದನೆ ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. 

ಮಹಾರಾಷ್ಟ್ರದಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಪಂಚ ನದಿಗಳಾದ ಕೃಷ್ಣಾ, ವೇದಗಂಗಾ, ಧೂದಗಂಗಾ, ಪಂಚಗಂಗಾ, ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಲಕ್ಷಾಂತರ ಹೇಕ್ಟರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಕೃಷಿ-ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿದ್ದಾರೆ. ಆದರೆ ರೈತರಿಗೆ ಇಲ್ಲಿದರಿಗೆ ಸರ್ಕಾರ ಯಾವುದೇ ಪರಿಹಾರ ಹಣ ನೀಡಿಲ್ಲ. ಕಳೆದ ವರ್ಷ ಬರ-ನೆರೆಯಿಂದಾಗಿ ಅನ್ನದಾತ ಕಂಗಾಲಾಗಿದ್ದಾನೆ. ನದಿ ತೀರದ ರೈತರಿಗೆ ನೀರೇ ಮೃತ್ಯುಕೂಪವಾಗುತ್ತಿದೆ. ಸರ್ಕಾರ ಹೆಚ್ಚಿನ ಪರಿಹಾರ ಹಣ ನೀಡಬೇಕು. ್ಖ ಶಂಕರ್ ಕೋರೆ ಅದೇಸಾಯಿ  

ನದಿ ತೀರದ ರೈತ ಮಾಂಜರಿ  

ಚಿಕ್ಕೋಡಿ ಉಪವಿಭಾಗದಲ್ಲಿ ಅಥಣಿ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಬೆಳೆಗಳ ಸಮೀಕ್ಷೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿದ ಕೂಡಲೇ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು. ಬೆಳೆಗಳ ಹಾನಿಯಾದ ಬಗ್ಗೆ ಸಮೀಕ್ಷೆ ಕಾರ್ಯ ಮುಗಿದಿದೆ. 

್ಖ ಸುಭಾಷ ಸಂಪಗಾವಿ ಽ ಉಪವಿಭಾಗಾಧಿಕಾರಿ ಚಿಕ್ಕೋಡಿ.