ಹಿರಣ್ಯಕೇಶ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಶೀಘ್ರ ತನಿಖೆಗೆ ಒತ್ತಾಯ: ಮಾಜಿ ಸಚಿವ ಶಶಿಕಾಂತ ನಾಯಿಕ

ಎಂ.ಬಿ. ಘಸ್ತಿ 

ಸಂಕೇಶ್ವರ 24:  ಏಶಿಯಾ ಖಂಡದಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಕಬ್ಬು ಪೂರೈಸುವ 15 ದಿನಗಳಲ್ಲಿ ರೈತರಿಗೆ ಒಂದನೇಯ ಬಿಲ್ಲು ಎರಡನೆಯ ಕಂತಿನ ಬಿಲ್ಲು ಗಣೇಶ ಚತುರ್ಥಿಯ ಮುಖಾಂತರ ಮತ್ತು ದೀಪಾವಳಿಗೆ ಹೀಗೆ ಮೂರು ಕಂತುಗಳಲ್ಲಿ ರೈತರ ಬಿಲ್ಲನ್ನು ಹಿಂದಿನ ಆಡಳಿತ ಮಂಡಳಿಯವರು ನೀಡುತ್ತಿದ್ದರು, ಈ ಕಾರ್ಖಾನೆಯ ಹೆಸರು ಏಶಿಯಾ ಖಂಡದಲ್ಲಿ ಹೆಸರುವಾಸಿಯಾಗಿದೆ.

ಈ ಕಳೆದ ದಿನಾಂಕ 23 ರಂದು ಹಿರಣ್ಯಕೇಶಿಯ 68 ನೇಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಖಾಸಗಿ ಒಡೆತನಕ್ಕೆ ಲೀಸ್ ಕೊಡುವುದನ್ನು ರೈತರ ಸರ್ವಾನುಮತದಿಂದ ಗೊತ್ತುವಳಿ ಪಾಸು ಆಯಿತು ಇದಕ್ಕೆ ಮಾಜಿ ಸಚಿವ ಶಶಿಕಾಂತ ನಾಯಿಕ, ಮಹಾರಾಷ್ಟ್ರದ ಸ್ವಾಭಿಮಾನ ರೈತ ಸಂಘದ ಮುಖಂಡ ರಾಜೇಂದ್ರ ಗಡ್ಡೆನ್ನವರ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಅಧ್ಯಕ್ಷ ಮೋಹನ ಕೋಠಿವಾಲೆ, ಎಸ್‌.ಎನ್‌. ಪಾಟೀಲ, ಅಣ್ಣಾಸಾಹೇಬ ಪಾಟೀಲ, ಇವರೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಿದರು, ಈ ಮುಖಂಡರೆಲ್ಲಾ ಸೇರಿ ಅವರು ಕರೆದ ಪತ್ರಿಕಾ ಗೋಷ್ಟಿಯಲ್ಲಿ ಕೇಂದ್ರ ಸರ್ಕಾರವು ಕಾರ್ಖಾನೆಗಳ ಅಭಿವೃದ್ಧಿಗೋಸ್ಕರ ಎನ್‌.ಸಿ.ಡಿ.ಸಿ. 6ಅ ಬಡ್ಡಿ ದರದಲ್ಲಿ ಸಾಲವು ದೊರೆಯುತ್ತದೆ ಮತ್ತು ಕೋಜನರೇಶನ ವಿದ್ಯುತ ಉತ್ಪಾದಿಸುತ್ತದೆ ಈ ವಿದ್ಯುತನ್ನು ರಾಜ್ಯ ಸರ್ಕಾರದವರು 1 ಯುನಿಟ ವಿದ್ಯುತ ಖರೀದಿಸಲು 4 ರೂ ರಂತೆ ತಾವು ಆದೇಶ ನೀಡಿದರು ಪುಣೆ ಮತ್ತು ಮುಂಬಯಿ ಖಾಸಗಿ ಕಂಪನಿಗಳು 1 ಯುನಿಟಗೆ 9 ರೂ. ರಂತೆ ತೆಗೆದುಕೊಳ್ಳುತ್ತೆ ಎಂದು ಮುಂದ ಬಂದವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶಗಳಿಂದ ಸಕ್ಕರೆ ಕಾರ್ಖಾನೆಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿವೆ ಎಂದು ರಮೇಶ ಕತ್ತಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಕಾರ್ಖಾನೆಯವರು ತಾವು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವಾಗಲಿ ರೈತರಿಗೆ ಅನ್ಯಾಯವಾಗುತ್ತದೆ ಎಂದು ತಿಳಿದು ತಾವು ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಬಗ್ಗೆ ತಾವು ನ್ಯಾಯಾಲಯದ ಮೊರೆ ಹೊಕ್ಕಿ ರೈತರ ಪರ ಹೋರಾಟ ಮಾಡಿದರೆ ನ್ಯಾಯಾಲಯದಲ್ಲಿ ಗೆಲವು ನಿಶ್ಚಿತವಾಗುತ್ತಿತ್ತು ಇದರಿಂದ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದಿತ್ತೆಂದು ನಿನ್ನೆ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿದಲ್ಲದೇ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದಿಮದ ಭ್ರಷ್ಟಾಚಾರವಾಗಿದೆ ಇದನ್ನು ಕೇಂದ್ರ ಸರ್ಕಾರದ ಸೆಂಟ್ರಲ್ ರಜಿಸ್ಟರ 83/88 ಕಲಂನ ಅನ್ವಯದಲ್ಲಿ ಶೀಘ್ರವಾಗಿ ತನಿಖೆ ನಡೆಸಲು ತಾವೆಲ್ಲರೂ ಸೇರಿ ದೆಹಲಿಯಲ್ಲಿ ಭೆಟ್ಟಿಯಾಗಿ ಕಾರ್ಖಾನೆಯ ದುರಾಡಾಳಿತ ಬಗ್ಗೆ ವಿವರಣೆ ನೀಡುತ್ತೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದಲ್ಲದೇ ಮುಂದಿನ ಹೋರಾಟವನ್ನು ಸಕ್ಕರೆ ಕಾರ್ಖಾನೆಯವರು ಲೀಸ್ ಮೇಲೆ ತೆಗೆದುಕೊಂಡ ನಿರ್ಣಯವನ್ನು ವಾಪಸ ಪಡೆಯುವವರೆಗೆ ತಮ್ಮ ರೈತ ಸಂಘನೆಯ ಹೋರಾಟ ತೀವ್ರಗೊಳಿಸುತ್ತೇವೆಂದು ಇದೆ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಸ್ವಾಭಿಮಾನಿ ರೈತರ ಸಂಘದ ಮುಖಂಡ ರಾಜೇಂದ್ರ ಗಡ್ಡೆನ್ನವರ, ಶಿವಶಂಕರ ಚೌಗಲಾ, ಅಣ್ಣಾಸಾಹೇಬ ಪಾಟೀಲ, ಇವರೆಲ್ಲರೂ ಪತ್ರಿಕಾ ಗೋಷ್ಟಿಯಲ್ಲಿ ಹಾಜರರಿದ್ದರು.