ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾಧ್ಯ

ಮುದ್ದೇಬಿಹಾಳ, 24:  ಚಳಿ,ಗಾಳಿ, ಮಳೆ, ಬಿಸಿಲು ಎನ್ನದೆ, ಎಲ್ಲ ಕಾಲದಲ್ಲಿಯೂ ಸಹ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಂಡಗಿಸಿಕೊಂಡು ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳಾಗಿ ಮಾತ್ರವಲ್ಲದೇ ಸ್ವಚ್ಛತಾ ರೂವಾರಿಗಳು. ಇಡೀ ವಿಶ್ವವೇ ಕರೋನಾದಿಂದ ದೃತಿಗೆಟ್ಟು ಯಾರು ಯಾರನ್ನೂ ಮುಟ್ಟಿಸಿಕೊಳ್ಳಲು ಸಾಧ್ಯವಾಗದೇ ಜೀವ ಕೈಯಲ್ಲಿ ಹಿಡಿದು ತೀವೃ  ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ಪಟ್ಟಣದ ನೈರ್ಮಲೀಕರಣ ಕಾರ್ಯ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಹೇಳಿದರು. 

ಪಟ್ಟಣದ ಪುರಸಭೆ ವತಿಯಿಂದ ಹುಡ್ಕೋ ಬಡಾವಣೆಯಲ್ಲಿರುವ ಡಾ, ಬಿ ಆರ್ ಅಂಬೇಡ್ಕರ ಭವನದಲ್ಲಿ ಏರಿ​‍್ಡಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ, ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಪಟ್ಟಣದ ಸ್ವಚ್ಚಂದವಾಗಿ ಹಚ್ಚು ಹಸಿರಾಗಿ ಸುಂದರವಾಗಿ ಕಾಣುತ್ತಿದೆ ಎಂದರೆ ಪೌರ ಕಾರ್ಮಿಕರ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾದ್ಯ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರನ್ನು ಎಲ್ಲರೂ ಅತ್ಯಂತ ಗೌರವ ಪ್ರೀತಿಯಿಂದ ಕಾಣುವಂತಾಗಬೇಕು, ಪೌರ ಕಾರ್ಮಿಕರು ಸದಾ ಸ್ಮರಣೀಯರು. ಅವರ ಶ್ರೋಯೋಭಿವೃದ್ಧಿಗೆ ಸರಕಾರ ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದರು. 

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ, ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ. ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣದೇ ಗೌರವಿಸುವಂತಾಗಬೇಕು, ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ. 

ದಿನ ನಿತ್ಯದ ಸ್ವಚ್ಛತಾ ಕಾರ್ಯವೋಂದೇ ನಮ್ಮ ಧೈಯ ಎಂದು ತಿಳಿಯದೇ ಸ್ವಚ್ಛತಾ ವೇಳೆ ಸರಕಾರದಿಂದ ನೀಡಿವ ಸುರಕ್ಷತಾ ಸಲಕರಣೆಗಳನ್ನು  ಖಡ್ಡಾಯವಾಗಿ ಬಳಸಿಕೊಳ್ಳುವೂದರೊಂದಿಗೆ ದುಶ್ಚಟಗಳ ದಾಸರಾಗದೇ, ಆರೋಗ್ಯಕ್ಕೆ ಚೈತನ್ಯ ನೀಡುವ ಉತ್ತಮ ಗುಣಮಟ್ಟ ಪೌಷ್ಠಿಕಾಂಶವುಳ್ಳ ಆಹಾರ ಹಾಗೂ ಸೇವನೆ ಮಾಡುವ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಕಡೆ ಗಮನ ಹರಿಸಿಬೇಕು.ಇದರಿಂದ ನಿಮಗಾಗಿ ಕಾಯ್ದು ಕುಳಿತಿರುವ ಕುಟುಂಭದ ಕಡೆಯೂ ಕೂಡ ನಿಗಾವಹಿಸಬೇಕು ಆರೋಗ್ಯ ಚೈತನ್ಯ ನೀಡುವ ಉತ್ತಮ ಗುಣಮಟ್ಟ ಪೌಷ್ಠಿಕಾಂಶವುಳ್ಳ ಆಹಾರ ಹಾಗೂ ಸೇವನೆ ಮಾಡುವ ಆರೋಗ್ಯವಂತರಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 

ಈ ಸಂದರ್ಬದಲ್ಲಿ ಕಾಯಂ ಪೌರ ಕಾರ್ಮಿಕರಿಗೆ ಪ್ರತಿಯೊಬ್ಬರಿಗೆ 7 ಸಾವಿರದಂತೆ ಒಟ್ಟು 51 ಜನ ಪೌರ ಕಾರ್ಮಿಕರಿಗೆ 3.ಲಕ್ಷ 57 ಸಾವಿರ ರೂಗಳ ವಿಶೇಷ ಭತ್ತೆಯ ಚೆಕ್ ನ್ನು ಪುರಸಭೆ ಅದ್ಯಕ್ಷ ಮೈಬೂಬ ಗೊಳಸಂಗಿ,  ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಹಾಗೂ ಸರ್ವಸದಸ್ಯರು ಮತ್ತು ಆಡಳಿತ ವರ್ಗದ ಅಧಿಕಾರಿಗಳು ಒಟ್ಟಾಗಿ ವಿತರಿಸಿದರು. ನಂತರ ಸರ್ವ ದಿನಗೂಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಈ ವೇಳೆ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ,  ರಫೀಕ ದ್ರಾಕ್ಷೀ, ರೀಯಾಜಹ್ಮದ ಢವಳಗಿ, ಶಿವು ಶಿವಪುರಿ, ಹಣಮಂತ ಭೋವಿ, ಅಶೋಕ ಒನಹಳ್ಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಕಂದಾಯ ಅಧಿಕಾರಿ ಎನ್‌.ಎಸ್ ಪಾಟೀಲ, ಆರೋಗ್ಯ ಆಧಿಕಾರಿ ಮಹಾಂತೇಶ ಕಟ್ಟಿಮನಿ, ವಿನೋದ ಝಿಂಗಾಡೆ, ಜಾವಿದ ನಾಯ್ಕೋಡಿ, ಶಮಶುದ್ಧಿನ ಮೂಲಿಮನಿ, ಸಂತೋಷ ಮಠ, ಸೈಪನ ಮಾನ್ಯಾಳ, ಶಿವಾನಂದ ಗಂಜಾಳ, ಶರಣು ಚಲವಾದಿ, ಪ್ರಸನ್ನಕುಮಾರ ಅವಟಿ, ಉಮೇಶ ದೇವರ, ರಾಮಣ್ಣ ಚಲವಾದಿ, ಚನ್ನಪ್ಪ ಮೂಖಿಹಾಳ, ರೇಣುಕಾ ಚಲವಾದಿ, ಲಕ್ಕವ್ವ ಹರಿಜನ, ಶಿವಣ್ಣ ಬೋಳಿ,  ಸೇರಿದಂತೆ ಹಲವರು ಉಪಸ್ಥಿತರಿದ್ದರು.