9ನೇ ವಾರ್ಡಿನಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ

ವರದಿ; ಪಂಡಿತ ಯಂಪೂರೆ 

ಸಿಂದಗಿ, 24:  ಪಟ್ಟಣದಲ್ಲಿ 23 ವಾರ್ಡುಗಳಿಗೆ ಸಂಭಂಧ ಪಟ್ಟಂತೆ ಮತದಾರರು ಯಾವೋದೋ ವಾರ್ಡಿನಲ್ಲಿ ವಾಸವಾಗಿದ್ದು ಯಾವುದೋ ವಾರ್ಡಿನಲ್ಲಿ ಮತದಾನ ಮಾಡುತ್ತಾರೆ ಅವರ ಬಗ್ಗೆ ಸರಿಯಾದ ಮಾಹಿತಿ ಪಡೆದು ಯಾವ ವಿಳಾಸದಲ್ಲಿದ್ದನ್ನು ಖಚಿತ ಪಡಿಸಿಕೊಂಡು ಪರಿಷ್ಕರಣೆ ಮಾಡಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು. 

ಪಟ್ಟಣದ 9ನೇ ವಾರ್ಡಿನಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರೀಶೀಲಿಸಿ ಮಾತನಾಡಿ, ಕೆಲವೊಬ್ಬರು ಊರಲ್ಲಿ ಇರುವುದಿಲ್ಲ ಇನ್ನೂ ಕೆಲವರು ಮೃತಪಟ್ಟಿರುತ್ತಾರೆ ಮತ್ತು ಸರಿಯಾದ ವಿಳಾಸ ದೊರಕುತ್ತಿಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾನ ಮಾಡುತ್ತಾರೆ ಅದಕ್ಕೆ ಆಯಾ ವಾರ್ಡುಗಳಲ್ಲಿ ಇರದಿದ್ದರೆ ಬೇರೆ ಕಡೆ ವಾಸವಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ನಮೂದು ಮಾಡಿ, ಇಲ್ಲದಿದ್ದರೆ ಆ ವಾರ್ಡನಲ್ಲಿಯಾದರು ಸೇರೆ​‍್ಡ ಮಾಡಿ, ಇನ್ನೂ ಕೆಲವರ ವಯಸ್ಸು ಕೂಡಾ ಸರಿಯಾಗಿ ನಮೂದು ಆಗಿರುವುದಿಲ್ಲ. 27 ವಯಸ್ಸು ಇದ್ದವರಿಗೆ 77 ವಯಸ್ಸು ನಮೂದು ಆಗಿರುವ ಉದಾಹರಣೆಗಳಿವೆ. ಅಂತವರು ಪಾರ್ಮ ನಂ 8ನ್ನು ಪಡೆದು ತಿದ್ದುಪಡೆ ಮಾಡಿಕೊಳ್ಳಬೇಕು. ಕೆಲವರು ಗ್ರಾಮೀಣ ಬಾಗದ ಮತದಾರರ ಪಟ್ಟಿಯಲ್ಲಿ ಇರುತ್ತಾರೆ ಅಂತವರ ಹೆಸರನ್ನು ಪಟ್ಟಣದ ಮತದಾರರ ಪಟ್ಟಿಯಲ್ಲಿವೆ ಎನ್ನುವ ಮಾಹಿತಿಗಳು ಕೂಡಾ ಇವೆ ಅಂತವುಗಳನ್ನು ಬಗ್ಗೆ ಖಚಿತ ಮಾಹಿತಿ ಪಡೆದು ತೆಗೆದು ಹಾಕಿ ಒಟ್ಟಾರೆ ಯಾರು ಮತದಾನದಿಂದ ವಂಚಿತರಾಗಬಾರದು ಎನ್ನುವುದು ಚುನಾವಣಾ ಆಯೋಗದ ನಿರ್ದೇಶನವಿದ್ದು ಅದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವವರು ಸರಿಯಾದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷ ಆಯ್‌.ಎಂ.ಮಕಾನದಾರ, ಗ್ರಾಮ ಲೆಕ್ಕಾಧಿಕಾರಿ ನೀಕೀಲ ಖಾನಾಪುರ, ಬಿಎಲ್‌ಓಗಳಾದ ಶರಣಮ್ಮ ಹಿರೇಮಠ, ಆದಿಷೇಶ ನಾಯಕ ಇದ್ದರು.