ಮಾಂಜರಿ ಃ ಲಾರಿಗಳು ಮತ್ತು ಟ್ರ್ಯಾಕ್ಟರಗಳು ಸಾಮಥ್ರ್ಯಕ್ಕಿಂತ ಹೆಚ್ಚು ಕಬ್ಬು ತುಂಬಿಕೊಳ್ಳುವುದಲ್ಲದೆ, ವೇಗವಾಗಿ ಚಲಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುವುದು, ಟ್ರ್ಯಾಕ್ಟರಗಳು ಪಲ್ಟಿಯಾಗಿ ಅನಾಹುತ ಸಂಭವಿಸುವ ಘಟನೆಗಳು ಹೆಚ್ಚಾಗಿದ್ದು, ಕಬ್ಬು ಸಾಗಾಟ ಟ್ರ್ಯಾಕ್ಟರಗಳ ಮೇಲೆ ನಿಗಾ ಬೇಕಾಗಿದೆ.
ಸಾಮಾನ್ಯವಾಗಿ ಟ್ರ್ಯಾಕ್ಟರಕ್ಕೆ 2 ಟ್ರ್ಯಾಲಿ ಇರುತ್ತವೆ ಸಾಮಾನ್ಯವಾಗಿ ಒಂದು ಟ್ರ್ಯಾಲಿಯಲ್ಲಿ 7 ಟನ್ ಕಬ್ಬು ತುಂಬಬಹುದು. ಎರಡು ಟ್ರ್ಯಾಲಿಯಲ್ಲಿ ಒಟ್ಟು 14 ಟನ್ವರಗೆ ಕಬ್ಬು ತುಂಬಿ ಸಾಗಿಸಬಹುದು. ಆದರೆ ಇಂದು ಸರಾಸರಿ 30 ಟನ್ ಕಬ್ಬನ್ನು ತುಂಬಿ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಟ್ರಾಕ್ಟರಗಳು ಹೆಚ್ಚಿನ ಪ್ರಮಾಣದಲ್ಲಿ ಪಲ್ಟಿಯಾಗಿ ಅನಾಹುತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ.
ಚಿಕ್ಕೋಡಿ ತಾಲೂಕಿನ ಹಾಗೂ ಮಹಾರಾಷ್ಟ್ರ ಗಡಿಯ 13ಕ್ಕೂ ಹೆಚ್ಚು ಕಾರಖಾನೆಗಳಿವೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಬ್ಬು ತುಂಬಿಕೊಂಡು ಹೋಗುವ ವಾಹನಗಳ ಮೇಲೆ ವೇಗದ ನಿಯಂತ್ರಣ ನಿರ್ಬಂಧ, ಸಾಮಥ್ರ್ಯವಿದ್ದಷ್ಟು ಕಬ್ಬು ತುಂಬುವ ನಿರ್ಬಂಧ ಮತ್ತು ಟೇಪ್ ರಿಕಾರ್ಡರ್ ಮೇಲೆ ನಿರ್ಬಂಧ ಹಾಕುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರತಿವರ್ಷ ಒತ್ತಾಯಿಸುತ್ತಲೆ ಇದ್ದಾರೆ. ಆದರೆ ಯಾವೂದೆ ಪ್ರಯೋಜನವಾಗುತ್ತಿಲ್ಲಾ ಎಂದು ದ್ವಿಚಕ್ರ ವಾಹನ ಸವಾರರ ಮತ್ತು ಸಾರ್ವಜನಿಕರ ಅಳಲಾಗಿದೆ. ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಗೊಂಡಿದ್ದು, ಮುಗಿಯುವುದಾದರು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ರಸ್ತೆಗಳ ಮೇಲೆ ಕಬ್ಬು ತುಂಬಿದ ಟ್ರ್ಯಾಕ್ಟರಗಳು ರಸ್ತೆ ತಮ್ಮದೆ ಎಂಬಂತೆ ವತರ್ಿಸುತ್ತಿದ್ದು, ವಾಹನ ಚಾಲಕರು ಸರಕಾರ ನಿದರ್ಿಷ್ಟ ಪಡಿಸಿರುವುದಕ್ಕಿಂತ ಹೆಚ್ಚು ಕಬ್ಬನ್ನು ತುಂಬಿ ಸರಕಾರದ ನಿಯಮವನ್ನು ಗಾಳಿಗೆ ತೂರಿ ತಮ್ಮದೇ ಆದ ಶೈಲಿಯಲ್ಲಿ ವಾಹನಗಳನ್ನು ಓಡಾಡಿಸುತ್ತ ಅಪಾಯ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಟ್ರ್ಯಾಕ್ಟರ ಧ್ವನಿ ಕೇಳಿದರೆ, ಕಿವಿ ಕಿವುಡಾಗುವ ಪರಿಸ್ಥಿತಿ, ವೇಗವಾಗಿ ಬರುವ ವಾಹನಗಳನ್ನು ನೋಡಿದರೆ ನಮ್ಮನ್ನು ಹಾಯಿಸಿಕೊಂಡು ಹೋಗುವ ಪರಿಸ್ಥಿತಿ ಇದನ್ನು ಕಂಡರೆ, ಜೀವ ಕೈಯಲ್ಲಿ ಹಿಡಿದು ನಡೆದಾಡುವ ಪ್ರಸಂಗ ಬಂದೊದಿಗಿದೆ ಎಂದು ಕಬ್ಬು ತುಂಬಿಕೊಂಡು ಹೊರಟ ವಾಹನಗಳು ಪಲ್ಟಿಯಾಗಿ ಸಾವನ್ನಪ್ಪಿದ ಉದಾಹರಣೆಗಳು ಸಹ ಗಡಿ ಭಾಗದಲ್ಲಿ ಬಹಳಷ್ಟಿವೆ. ಈ ಹಂಗಾಮಿನಲ್ಲಿ ಎತ್ತಿನ ಗಾಡಿಗಳಿಗಿಂತ ಟ್ರ್ಯಾಕ್ಟರ ಮತ್ತು ಲಾರಿಗಳ ಸಂಖ್ಯೆ ಹೆಚ್ಚಾಗಿದೆ.
ಕಳೆದ ಎಂಟು ದಿನಗಳಿಂದ ರಾಜ್ಯದ ಗಡಿಭಾಗದ ಮಾತ್ರ ಕಬ್ಬು ನುರಿಯುವ ಹಂಗಾಮು ಪ್ರಾರಂಬಿಸಿದ್ದು, ಮಹಾರಾಷ್ಟ್ರದ ಗಡಿಭಾಗದ ಕಾರಖಾನೆಗಳು ಪ್ರಾರಂಭವಾಗಲಿದ್ದು, ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಪ್ರಾರಂಭದಲ್ಲೆ ಟ್ರ್ಯಾಕ್ಟರಗಳು ಕಬ್ಬು ತುಂಬಿಕೊಂಡು ಹೋಗುವ ವಾಹನಗಳ ಮೇಲೆ ನಿರ್ಬಂಧ ಹಾಕದೆ ಹೋದಲ್ಲಿ ಅನಾಹುತಗಳು ಹೆಚ್ಚಾಗಲಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವ ಅಗತ್ಯವಿದೆ ಎಂಬುದು ನಾಗರಿಕರ ಅಗ್ರಹವಾಗಿದೆ.