ಮದರ್ ತೆರೇಸಾ ಮಹಿಳಾ ಮಂಡಳದಿಂದ ಶಿವಾನಂದ ಇಟಗಿ ಮತ್ತು ಚನ್ನಪ್ಪ ಚನ್ನಳ್ಳಿ ಸನ್ಮಾನ
ಮುಂಡರಗಿ 29: ಸತ್ಯನಾರಾಯಣ ಪೂಜೆ ಹನುಮಾನ್ ಚಾಲೀಸ್ ಮತ್ತು ರೈತರ ದಿನಾಚರಣೆ ಪ್ರಯುಕ್ತ ಮದರ್ ತೆರೇಸಾ ಮಹಿಳಾ ಮಂಡಲದ ಕಛೇರಿಯಲ್ಲಿ ತಾಲೂಕಿನ ರೈತ ಸಾಧಕರಾದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮತ್ತು ಚನ್ನಪ್ಪ ಚನ್ನಳ್ಳಿ ಇವರಿಗೆ ಮದರ್ ತೆರೇಸಾ ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮದರ್ ತೆರೇಸಾ ಮಹಿಳಾ ಮಂಡಲದ ಅಧ್ಯಕ್ಷೆ ಮಂಜುಳಾ ಇಟಗಿ ಮಾತನಾಡಿ, ಈ ದೇಶದ ಬೆನ್ನೆಲುಬು ರೈತ. ಹೀಗಾಗಿ ರೈತನನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರತಿಯೊಬ್ಬ ರೈತ ಕಡುಬಡತದಿಂದ ಸರ್ಕಾರದ ಯಾವದೇ ರಕ್ಷಣೆಯನ್ನು ಪಡೆಯದೇ ಹಗಲಿರುಳು ಹೊಲದಲ್ಲಿ ದುಡಿದು ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದಾನೆ. ಅವರ ಜೀವನ ಪಾವನವಾಗಲಿ ಎಂದು ಹಾರೈಸುತ್ತಾ. ನಮ್ಮ ಮಂಡಳಿಯಿಂದ ಅವರಿಗೆ ಗೌರವ ಸಲ್ಲಿಸಬೇಕೆನ್ನುವ ಆಶಾಭಾವನೆಯೊಂದಿಗೆ ಪ್ರಗತಿಪರ ರೈತರಾದ ಶಿವಾನಂದ ಇಟಗಿ ಹಾಗೂ ಚನ್ನಪ್ಪ ಚನ್ನಳ್ಳಿಯವರಿಗ ಸನ್ಮಾನಿಸುವ ಮೂಲಕ ಈಡೀ ರೈತ ಬಾಂದವರನ್ನು ಗೌರವದಿಂದ ಕಾಣಬೇಕೆನ್ನುವ ಉದ್ದೇಶದಿಂದ ಅವರಿಗೆ ಗೌರವ ಸಮರೆ್ಣ ಮಾಡಲಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹೇಮಗಿರಿಶ ಹಾವಿನಾಳ, ಬಸವರಾಜ್ ಮೇಗಳಮನಿ, ಶಾಂತಾ ಇಮ್ರಾಪುರ, ಮಂಜುನಾಥ ಅಳವಂಡಿ, ಸುಪ್ರಿಯಾ ಇಟಗಿ,. ಶ್ವೇತಾ ಅಳವಂಡಿ, ದಾವಲ್ ಸಾಬ್, ಸುಮಂತ್ ಇಟಗಿ, ನವ್ಯ., ದಿವ್ಯ ಮೇಘಲ್ಮನಿ, ಜಯಶ್ರೀ ನಾರಾಯಣಪ್ಪ ಗುಬ್ಬಿ, ಅನ್ನಪೂರ್ಣೇಶ್ವರಿ ಕುಬಸದ, ಚಂದ್ರಕಲಾ ಅಶೋಕ ಸೌನೂರ್ ಇತರರು ಇದ್ದರು. ಎಚ್29-ಎಂಡಿಪಿ2 : ಮುಂಡರಗಿ ಪಟ್ಟಣದ ಮದರ್ ತೆರೇಸಾ ಮಹಿಳಾ ಮಂಡಲದ ವತಿಯಿಂದ ಮಂಡಲದ ಕಛೇರಿಯಲ್ಲಿ ತಾಲೂಕಿನ ರೈತರಾದ ಶಿವಾನಂದ ಇಟಗಿ ಮತ್ತು ಚನ್ನಪ್ಪ ಚನ್ನಳ್ಳಿ ಇವರಿಗೆ ಸನ್ಮಾನಿಸಲಾಯಿತು.