ಶಕ್ತಿ ಯೋಜನೆ, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ !
ಕೊಪ್ಪಳ 29: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ 2023ರಲ್ಲಿ ಜರುಗಿದ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದು ಸರಿ ಅಷ್ಟೇ ಎಲ್ಲ ಗ್ಯಾರಂಟಿಗಳು ಸಮರ್ಕವಾಗಿ ಅನುಷ್ಠಾನ ಗೊಂಡಿದೆ. ಇದರ ಲಾಭ ಕೂಡ ನಾಡಿನ ಜನ ಪಡೆದುಕೊಂಡಿದ್ದಾರೆ. ಈ 5 ಯೋಜನೆ ಗಳಲ್ಲಿ ಶಕ್ತಿ ಯೋಜನೆ, ಹೊರತುಪಡಿಸಿದರೆ ಉಳಿದ 4 ಯೋಜನೆಗಳು ಉತ್ತಮವಾಗಿ ನಡೆದಿದೆ.
ಆದರೆ ಶಕ್ತಿ ಯೋಜನೆ ಮಹಿಳೆಯರಿಗೆ ರಾಜ್ಯದ್ಯಂತ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಒದಗಿಸಿರುವುದು ಸರಿ ಅಷ್ಟೇ ಆದರೆ ಇದರಿಂದ ಪುರುಷರು ಗಳಿಗೆ ಅಲ್ಲದೆ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾನೇ ತೊಂದರೆ ಉಂಟಾಗುತ್ತಿದೆ ಎಲ್ಲಾ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ದಿನನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತುಂಬಾನೇ ತೊಂದರೆ ಆಗುತ್ತಿದೆ ಕಚೇರಿ ಕೆಲಸ ಕಾರ್ಯಗಳಿಗೆ ಬಸ್ಸುಗಳಿಗೆ ಅವಲಂಬಿತಗೊಂಡಿರುವ ಪುರುಷ ವರ್ಗ ಕೂಡ ತೀವ್ರ ಅಸಮಾಧಾನ ಗೊಂಡಿದೆ ವಯಸ್ಸಾದವರು ಬಸ್ಸುಗಳಲ್ಲಿ ನಿಂತುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸದರಿ ಶಕ್ತಿ ಯೋಜನೆ, ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿವೆ ಎಂದು ಕೆಲವರು ನೊಂದ ಮನಸ್ಸಿನಿಂದ ಹೇಳುತ್ತಿದ್ದಾರೆ, ಸದರಿ ಶಕ್ತಿ ಯೋಜನೆ, ನಿಲ್ಲಿಸಿದರೆ ಬಡ ಮಹಿಳೆಯರಆಕ್ರೋಶ ಕೆ ಸರ್ಕಾರ ತುತ್ತಾಗಬಹುದು ಆದರೆ ಕೆಲವು ಮಾರ್ಾಡು ಮಾಡುವದು ಸೂಕ್ತ, ಎಂಬ ಲೆಕ್ಕಾಚಾರ ಕೆಲವರು ಹಾಕುತ್ತಿದ್ದಾರೆ, ಶಕ್ತಿ ಯೋಜನೆ, ಉಚಿತ ಬಸ್ಸು ಪ್ರಯಾಣ ನಿಲ್ಲಿಸಿ ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳ 2000 ತರ ಬದಲು ಮೂರು ಸಾವಿರ ರೂಪಾಯಿ ಕೊಡುವದು ಸೂಕ್ತ ಇದು ಒಳ್ಳೆಯ ಯೋಜನೆ ಇದರಿಂದ ಬಡ ಕುಟುಂಬದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದೆ ಸದರಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳ 2000 ಬದಲು 3000 ರೂಪಾಯಿ ಕೊಡಬೇಕು ಇದರಿಂದ ಇನ್ನಷ್ಟು ಅನುಕೂಲ ಆ ಕುಟುಂಬಕ್ಕೆ ಸಿಗುತ್ತದೆ, ಶಕ್ತಿ ಯೋಜನೆಯ ಸ್ಥಗಿತಗೊಳಿಸಿ, ಗ್ರಹ ಲಕ್ಷ್ಮಿ ಯೋಜನೆ ಸಹಾಯಧನ ಹೆಚ್ಚಳ ಗೊಳಿಸಿ ಜಾರಿಗೊಳಿಸುವುದು ಸೂಕ್ತ ಇದರಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಈ ದಿಶೆಯಲ್ಲಿ ಸರ್ಕಾರ ಚಿಂತನ ಮಂಥನ ನಡೆಸಿ ಕೂಡಲೇ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಶಕ್ತಿ ಯೋಜನೆಯಿಂದ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡುವಂತಹ ಕೆಲಸ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಮಾಡುವುದು ಸೂಕ್ತ ಗ್ರಹಲಕ್ಷ್ಮಿ ಯೋಜನೆ, ಉತ್ತಮ ಮತ್ತು ಮಾದರಿ ಯೋಜನೆಯಾಗಿದೆ ,ಬಡ ಕುಟುಂಬದ ಜೀವನಕ್ಕೆ ಇದು ಬಹಳಷ್ಟು ಅನುಕೂಲವಾಗಿದೆ ಇದರಲ್ಲಿ ಪ್ರತಿ ತಿಂಗಳ 2000 ಸಿಗುತ್ತಿತ್ತು ಅದು ಹೆಚ್ಚಳ ಗೊಳಿಸಿ 3000 ರೂಪಾಯಿ ಪ್ರತಿ ತಿಂಗಳ ಸಿಗುವಂತೆ ಮಾಡುವದು ಒಳ್ಳೆಯದು ಎಂಬ ಅಭಿಪ್ರಾಯ ಪ್ರಜ್ಞಾವಂತ ನಾಗರಿಕರು ವ್ಯಕ್ತಪಡಿಸಿದ್ದಾರೆ.