ಮೀಸಲಾತಿ ಸರಿಯಾದ ಬಳಕೆಗೆ ಶಿಕ್ಷಣ ಅಗತ್ಯ: ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ

ಲೋಕದರ್ಶನ ವರದಿ

ಕೊಪ್ಪಳ 09: ಮಹಿಳೆಯರಿಗೆ ಮೀಸಲಿಟ್ಟ ಹುದ್ದೆಗಳನ್ನು ಪಡೆದುಕೊಳ್ಳಬೇಕಾದರೆ ಶಿಕ್ಷಣ ಪಡೆಯುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಾಚೀನ ಕಾಲದಲ್ಲಿ ಮಹಿಳೆಯ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿರಲ್ಲಿಲ್ಲಾ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗಾಗಿ ಉಚಿತ ಶಿಕ್ಷಣ ನೀಡುವುದರೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಶೇಕಾಡಾ 50ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ. ಆದರೆ ಮೀಸಲಿಟ್ಟ ಹುದ್ದೆಗಳನ್ನು ಪಡೆಯಬೇಕಾದರೆ ಶಿಕ್ಷಣ ಪಡೆಯುವ ಅಗತ್ಯವಿದೆ.  ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರು ಎಂಬ ತಾರತಮ್ಯವನ್ನು ಮಾಡಬಾರದು. ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೂ ಕೂಡಾ ಮಹಿಳೆಯರಿಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ. ಸರಕಾರವು ಕೂಡಾ ಇನ್ನೂ ಹೆಚ್ಚಿನ ಕಟ್ಟು ನಿಟ್ಟಿನ ಕನೂನುಗಳನ್ನು ಜಾರಿಗೆ ತರುವುದರ ಮೂಲಕ ಮಹಿಳೆಯ ರಕ್ಷಣೆ ಮಾಡುವುದರ ಜೊತೆಯಲ್ಲಿ ಮಹಿಳೆರಿಗೆ ಇರುವ ಸೌಲಭ್ಯಗಳನ್ನು ಹಾಗೂ ಅವರಿಗೆ ಇರುವ ಕಾನೂನುಗಳ ಕುರಿತು ಜಾಗೃತಿ ಮೂಡಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಕೂಡಾ ಮಾಡಬೇಕು. ಪಾಲಕರು ಕೂಡಾ ಹೆಣ್ಣು ಮಕ್ಕಳ ಶಿಕ್ಷಣದ ಹೆಚ್ಚು ಗಮನವನ್ನು ಹರಿಸಬೇಕು ಎಂದು ಹೇಳಿದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೆ ಅಲ್ಲ ದೇವತೆಗಳು ನೆಲೆಸಿರುತ್ತಾರೆ. ಮಗುವಿನ ಸವರ್ಾಂಗೀಣ ಅಭಿವೃದ್ಧಿಯಲ್ಲಿ ತಾಯಿಯ ಪಾತ್ರ ಹೆಚ್ಚು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಮಹಿಳಾ ಸಾಧಕರಿದ್ದಾರೆ. ಅಂತಹ ಮಹಿಳಾ ಸಾಧಕರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಬಾಲ್ಯ ವಿವಾಹದಂತಹ ಅನೇಕ ಸಾಮಾಜಿಕ ಪಿಡುಗಗಳ ವಿರುದ್ಧ ಇರುವ ಕಾಯ್ದೆಗಳನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು. ಅನೇಕ ಮಹಿಳೆಯರು ಸ್ವ ಉದ್ಯೋಗವನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ವಿಕಲಚೇತನ ನೌಕರರ ಸಂಘದ ಜಿಲ್ಲಾ ಖಜಾಂಚಿ ಕಾಶಿನಾಥ ಸಿರಿಗೇರಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಣ್ಣ ಕರಿಗಾರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಬಿ.ಎಡ್.ಕಾಲೇಜಿನ ಉಪನ್ಯಾಸಕರಾದ ಗಂಗಾಧರ ಸೊಪ್ಪಿನಮಠ, ಶಿಕ್ಷಕರಾದ ಸುನಂದಾಬಾಯಿ, ಶಂಕ್ರಮ್ಮ ಬಂಗಾರ ಶೆಟ್ಟರ್, ಜಯಶ್ರೀ ದೇಸಾಯಿ, ರತ್ನಾ, ಮೋಹಿನಪಾಷಾಬೀ, ದಿವ್ಯ.ಬಿ.ಎಂ.ಗೌಸಿಯಾಬೇಗಂ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು. ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ, ಶ್ರೀನಿವಾಸರಾವ ಕುಲಕರ್ಣಿ  ವಂದಿಸಿದರು.