ರಾಜ್ಯದಲ್ಲಿ ದೃಢಪಟ್ಟ ಕೊವಿಡ್-19 ಪ್ರಕರಣಗಳ ಸಂಖ್ಯೆ 598ಕ್ಕೆ ಏರಿಕೆ

ಬೆಂಗಳೂರು, ಮೇ೨,ರಾಜ್ಯದಲ್ಲಿ ಹೊಸದಾಗಿ 9 ಕೊವಿಡ್-19 ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಶನಿವಾರ ಒಟ್ಟು ಪ್ರಕರಣಗಳ ಸಂಖ್ಯೆ 598ಕ್ಕೆ ಏರಿದೆ. ಉಸಿರಾಟದ ತೊಂದರೆಯಿ0ದ ಆಸ್ಪತ್ರೆಗೆ ದಾಖಲಾಗಿ ಸೋಂಕು ದೃಢಪಟ್ಟಿದ್ದ  ಬೀದರ್ ಜಿಲ್ಲೆಯ 82 ವರ್ಷದ ವೃದ್ಧ ಹೊಸ ಪ್ರಕರಣಗಳಲ್ಲಿ ಸೇರಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.  ವಿಜಯಪುರ ಮತ್ತು ತುಮಕೂರಿನಲ್ಲಿ ತಲಾ ಎರಡು ಪ್ರಕರಣಗಳು, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಸೋಂಕಿತ ಸುಮಾರು 255 ಜನರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 25ಕ್ಕೆ ಏರಿದೆ.