ಬೆಂಗಳೂರು, ಏ.27, ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ವಿಜಯ ನಗರದ ನಿರಾಶ್ರಿತ ಕೇಂದ್ರದಲ್ಲಿದ್ದ ಗಾಯತ್ರಿ ನಗರದ 68 ವರ್ಷದ ನಿರಾಶ್ರಿತ ವೃದ್ಧ ಮೃತಪಟ್ಟಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.ಇಂದು ಮೃತರ ಹುಟ್ಟು ಹಬ್ಬ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಮೃತರು, ನಾಳೆ ತಮ್ಮ ಹುಟ್ಟು ಹಬ್ಬವಿರುವುದರಿಂದ ಬೆಳಗ್ಗೆ ತಮಗೆ ಪೂರಿ ಮಾಡಿಕೊಡಬೇಕು ಎಂದು ವಾರ್ಡನ್ ಹತ್ತಿರ ಕೇಳಿಕೊಂಡಿದ್ದರಂತೆ. ಅದಕ್ಕೆ ಪ್ರತಿಯಾಗಿ ಸಂಜೆ ತಾವು ಕೇಕ್ ಕತ್ತರಿಸಿ ಎಲ್ಲರಿಗೂ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷನ ನಿರಾಶ್ರಿತ ಕೇಂದ್ರದ ವಾರ್ಡನ್, ವಿಜಯನಗರ ಪೊಲೀಸ್ , ಬಿಬಿಎಂಪಿ, ಆರೋಗ್ಯ ಇಲಾಖೆ ಎಲ್ಲರಿಗೂ ಮಾಹಿತಿ ನೀಡಿದ್ದರೂ, ಯಾವುದೇ ಅಧಿಕಾರಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ. ಮೃತರು ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ ವೈದ್ಯಕೀಯ ತಪಾಸಣೆ ಬಳಿಕವೇ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ. ಸದ್ಯ ಸ್ಥಳದಲ್ಲಿ 30-40 ಜನ ಕ್ವಾರಂಟೈನ್ ನಲ್ಲಿ ಎಂದು ತಿಳಿದು ಬಂದಿದೆ