ಬಸವಾದಿ ಶರಣರ ಜೀವನ ಮತ್ತು ವಚನಗಳು ನಮ್ಮ ಬದುಕಿನ ದಾರೀದೀಪ : ಅರವಿಂದ ಬೆಲ್ಲದ
The life and sayings of Basavadi Sharan are the beacon of light in our lives: Aravind Bellad
ಲೋಕದರ್ಶನ ವರದಿ
ಧಾರವಾಡ 22 : ಅನುಭವ ಮಂಟಪ ಸಂಘ ಮತ್ತು ಬಸವಶಾಂತಿ ಮಿಷನ್ ಟ್ರಸ್ಟ್ ಸಹಯೋಗದೊಂದಿಗೆ ವಿಶ್ವಗುರು ಬಸವಣ್ಣನವರ ಹಾಗೂ ವೈರಾಗ್ಯ ನಿಧಿ ಶಿವಶರಣೆ ಅಕ್ಕಮಹಾದೇವಿ ಅವರ ಜಯಂತ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕರಾದ ಶ್ರೀ ಅರವಿಂದ್ ಬೆಲ್ಲದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ಜೀವನ ತತ್ವಗಳು ಸಂದೇಶಗಳು ಇಂದಿಗೂ ಸ್ಮರಣೀಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ, ಪ್ರತಿಯೊಬ್ಬರೂ ವಚನದ ಪಾಲನೆಯನ್ನು ಮಾಡಬೇಕು. ಶಿವಶರಣೆಯರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರೆಲ್ಲರೂ ದಿವ್ಯ ಸಂದೇಶಗಳನ್ನು ಜಗತ್ತಿಗೆ ಸಾರಿ ಹೋಗಿದ್ದಾರೆ ಎಂದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಪ್ರೊ ಶಂಭುಲಿಂಗ ಹೆಗಡಾಳ, ಪ್ರಾಧ್ಯಾಪಕರು, ಸಿಎಸ್‌ಐ ಮಹಾವಿದ್ಯಾಲಯ ಅವರು ಬಸವಾದಿ ಶರಣರ ಮತ್ತು ಅಕ್ಕ ಮಹಾದೇವಿಯವರ ಜೀವನದ ಕುರಿತು, ಅವರ ವೈಚಾರಿಕತೆ, ವಚನಗಳು ಕುರಿತು ಸುವಿಸ್ತಾರವಾಗಿ ಮಾತನಾಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಅನುಭವ ಮಂಟಪ ಸಂಘದ, ಮಹಿಳಾ ಮಂಟಪದ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಅವರು ಯಾಲಕ್ಕಿ ಶೆಟ್ಟರ್ ಕಾಲೋನಿ, ಶಾರದಾ ಕಾಲೋನಿಯ ಹಾಗೂ ಇಲ್ಲಿ ಸುತ್ತಮುತ್ತಲಿನ ಸಮಸ್ತ ಜನರು ಅತ್ಯಂತ ಪ್ರೀತಿಯಿಂದ ಇಂದು ವಿಶ್ವಗುರು ಬಸವೇಶ್ವರ ಮತ್ತು ಶಿವಶರಣೆ ಅಕ್ಕ ಮಹಾದೇವಿಯ ಜಯಂತಿಯನ್ನು ಆಚರಣೆ ಮಾಡಲು ಎಲ್ಲರೂ ಒಂದಾಗಿ, ಉತ್ಸಾಹದಿಂದ ಕೂಡಿ, ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ, ಎಲ್ಲರೂ ಕುಟುಂಬ ಸಮೇತ ಭಾಗವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.ಬಸವಣ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಶರಣರ ಹಾದಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿದ್ದೇವೆ.
ಆಧ್ಯಾತ್ಮದಲ್ಲಿಯೇ ಎಲ್ಲರ ಜೀವನ ಉತ್ತಮವಾಗುವುದು. ದಿನಗಳಲ್ಲಿ ಶಾಲಾ - ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಯುವ ಜನಾಂಗಕ್ಕೆ ವಿವಿಧ ಕಾರ್ಯಕ್ರಮಗಳ ಮೂಲಕ, ಸ್ಪರ್ಧೆಗಳ ಮೂಲಕ ಬಸವಾದಿ ಪ್ರಮುಖರ ಶರಣರ ತತ್ವಗಳನ್ನು, ವಚನಗಳನ್ನು, ಶರಣರ ಜೀವನ ಸಂದೇಶಗಳನ್ನು ಮುಟ್ಟಿಸುವಂತಹ, ಕಾರ್ಯಗತಗೊಳಿಸುವ ಯೋಜನೆ ಇದೆ ಎಂದರು. ಅಣ್ಣ ಬಸವಣ್ಣನವರ ಮತ್ತು ಅಕ್ಕ ಮಹಾದೇವಿಯವರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಬಸವಶಾಂತಿ ಮಿಷನ್ ಟ್ರಸ್ಟ್ ನ ಅಧ್ಯಕ್ಷರಾದ ಮಹಾದೇವ ಹೊರಟ್ಟಿ ಮತ್ತು ಪ್ರೇಮಕ್ಕ ಹೊರಟ್ಟಿ ಅವರು ಉದ್ಘಾಟಿಸಿದರು. ಮಕ್ಕಳು ಬಸವೇಶ್ವರರ ಮತ್ತು ಅಕ್ಕಮಹಾದೇವಿಯವರ ವೇಶಭೂಷಣವನ್ನು ತೊಟ್ಟು ರಥದಲ್ಲಿ ಆಸಿನರಾಗಿದ್ದರು.
ಮೆರವಣಿಗೆಯಲ್ಲಿ ಶರಣರ ವಚನಗಳನ್ನು ಮತ್ತು ಹಾಡುಗಳನ್ನು ಹೇಳುತ್ತಾ, ಕೋಲಾಟ ಮಾಡುತ್ತಾ, ಶರಣರ ಘೋಷಣೆಗಳನ್ನು ಮಾಡುತ್ತಾ ಶರಣೆಯರು ಮೆರವಣಿಗೆಗೆ ಕಳೆ ತಂದರು. ಎಲ್ಲ ಶರಣರು, ಮಕ್ಕಳು ಸಂತೋಷದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ವಿಜಯ ಅಗಡಿ, ಅಧ್ಯಕ್ಷರು ಅನುಭವ ಮಂಟಪ ಸಂಘ ಇವರು ಮಾತನಾಡಿ ಇಂದಿನ ದಿನಗಳಲ್ಲಿ ಮಹಾನ್ ಶರಣರ ಸಂದೇಶಗಳು ಅತ್ಯವಶ್ಯಕವಾಗಿದ್ದು, ಎಲ್ಲಾ ಶರಣರು, ಸಂತರು ನಮಗೆಲ್ಲಾ ನಮ್ಮ ಬಾಳಿನ ಬೆಳಕಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾಟಟ ಮೃತ್ಯುಂಜಯ ಶೆಟ್ಟರ್ ಅಂತರಾಷ್ಟ್ರೀಯ ಗಾಯಕರು ಹಾಗೂ ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಮಹಿಳಾ ದೌರ್ಜನ್ಯ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದಿಂದ ನೇಮಕವಾಗಿರುವ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ವಚನ ಗಾಯನ ತಂಡದ ಸುಧಾ ಸುತಕೋಟಿ, ನೀಲಾಂಬಿಕ ತಾಳಿಕೋಟಿ, ರೇಣುಕಾ ಹೂಗಾರ, ಸುವರ್ಣ ತಡಹಾಳ, ಶಶಿಕಲಾ ಕೊಳಕೂರ ಹಾಗೂ ಸುನೀತಾ ತಪಶೆಟ್ಟಿ ತಂಡದವರು ವಚನ ಗಾಯನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಶ್ರೀಕಾಂತ್ ಯಲಿಗಾರ, ಕೋಶ್ಯಾಧ್ಯಕ್ಷರಾದ ಅನ್ನದಾನಪ್ಪ ಕಾಟ್ರಹಳ್ಳಿ, ಸದಸ್ಯರಾದ ಮಡಿವಾಳಪ್ಪ ಕಮ್ಮಾರ, ರಾಜಶೇಖರ್ ಅಣಗೌಡರ, ಕೊಟ್ರೇಶ್ ಹೂಗಾರ, ಮೋಹನ್ ಮಟ್ಟಿ, ಗೌಡಪ್ಪಗೌಡ ಬಾಳನಗೌಡರ, ಸದಯ್ಯ ಪಾಲಭಾವಿಮಠ, ಹಾಗೂ ಸರ್ವ ಸದಸ್ಯರು ಮತ್ತು ಮಹಿಳಾ ವೇದಿಕೆಯ ಸದಸ್ಯರು ಮತ್ತು ಬಸವಶಾಂತಿ ಮಿಷನ್ ಟ್ರಸ್ಟ್ ಸರ್ವ ಸದಸ್ಯರು, ಯಾಲಕ್ಕಿ ಶೆಟ್ಟರ್ ಕಾಲೋನಿ, ಶಾರದಾ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸರ್ವ ಶರಣ ಬಳಗ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 