ಹುಬ್ಬಳ್ಳಿಯಲ್ಲಿ ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಣೆ
Basava Jayanti celebrated meaningfully in Hubballi
ಹುಬ್ಬಳ್ಳಿ 25: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಶ್ರೀ ಬಸವಣ್ಣನವರ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ ಶ್ರೋ. ಬ್ರ. ಲಿಂ. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳವರ ಶ್ರೀ ರಾಜವಿದ್ಯಾಶ್ರಮದಲ್ಲಿ ವಂದನಾ ಫೌಂಢೇಶನ್ ವತಿಯಿಂದ ಆಯೋಜಿಸಿದ್ದ ಸಂಗೀತ ಕಲಾವಿಧರಿಂದ ಹಾಡೋಣ ಬಾ ಕುಣಿಯೋಣ ಬಾ ಕಾರ್ಯಕ್ರಮದಲ್ಲಿ ಶ್ರೋ.ಬ್ರ.ಪೂ. ಭಾರತ ಭೂಷಣ ಶ್ರೀ ಷಡಕ್ಷರಿ ದೇವರು ಹಾಗೂ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ.
ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಮಾಲಾರೆ್ಣ, ಪುಷ್ಾರೆ್ಪಣ ಮಾಡುವ ಮೂಲಕ ಗೌರವ ಅರೆ್ಣ ಮಾಡಿ, ಶ್ರದ್ಧಾ , ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು. ಸೋಹನ ಸುರೇಶ ಹೊರಕೇರಿ ಅವರು ಇದ್ದರು. ಡಾ. ವಂದನಾ ರಮೇಶ ಕರಾಳೆ ಅವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.
ಹಲವಾರು ಗಾಯಕರು ಭಾಗವಹಿಸಿ, ಹಾಡುಗಳನ್ನು ಪ್ರಸ್ತುತಪಡಿಸಿದರು. ಸುಜೇತಾ ಕುಡತಕರ , ಕವಿತಾ ಭೂಸನೂರ , ಮಲ್ಲಿಕಾರ್ಜುನ ಗೋಸಿ, ಕೆ . ಶ್ಯಾವಿ , ರುದ್ರ್ಪ ಹದಲಿ, ಪವನಾ, ಸಾಕ್ಷಿ , ಕೀರ್ತಿ, ಸೃಷ್ಟಿ , ವಿರೂಪಾಕ್ಷ , ದೀಲೀಪ್ , ಪ್ರತಾಪ್ , ಮುಂತಾದವರು ಸೇರಿಕೊಂಡು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ, ಯಶಸ್ವಿಗೊಳಿಸಿದರು. ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಶರಣರ ವಚನಗಳಲ್ಲಿ ಸ್ಪಷ್ಪವಾಗಿ ನುಡಿದಿರುವಂತೆ ಇಷ್ಟಲಿಂಗದ ಜನಕರು, ಬಸವಣ್ಣನವರು. ತನ್ಮೂಲಕವಾಗಿ ಇಷ್ಟಲಿಂಗ ಪ್ರಣೀತ ಲಿಂಗಾಯತ ಧಮ9ದ ಸಂಸ್ಥಾಪಕರು ವಿಶ್ವಗುರು ಬಸವಣ್ಣನವರು. ಅಷ್ಟಾವರಣ, ಪಂಚಾಚಾರ, ಷಟಸ್ಥಲ ತತ್ವದ ಪ್ರತಿಪಾದಕರು ಗುರುಬಸವಣ್ಣನವರೆಂದು ಚೆನ್ನಬಸವಣ್ಣನವರ ವಚನಗಳಲ್ಲಿ ಕಂಡುಬರುತ್ತದೆ.
ಬಸವಣ್ಣನವರೆಂದರೆ ಸಾಕಾರ ವ್ಯಕ್ತಿ ಮಾತ್ರವಾಗಿರದೆ , ಬಸವ ಎಂದರೆ ಶಕ್ತಿ, ಚೈತನ್ಯ, ಮಂತ್ರ ಸ್ವರೂಪ, ಪರಾತ್ಪರ ಮೂಲ ಚೈತನ್ಯ , ಮೂಲ ಚಿತ್ತು ಬಸವ. ಅದರ ಸಾಕಾರರೂಪವಾಗಿ 12ನೇ ಶತಮಾನದಲ್ಲಿ ಅವತರಿಸಿದ ಮಹಾನ್ ದಾಶ9ನಿಕ ಬಸವಣ್ಣನವರು. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡದಿಂದ ಮಾನವರ ಬದುಕು ಡೋಲಾಯಮಾನವಾಗಿದೆ. ಮನುಷ್ಯ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಸಿಲುಕಿ ತೊಂದರೆ ತಾಪತ್ರಯಗಳಿಗೆ ಈಡಾಗಿದ್ದಾನೆ. ಮೊಸ-ವಂಚನೆ, ದ್ವೇಷ-ಅಸೂಹೆ, ಅನೀತಿ-ಅನ್ಯಾಯ, ಸಾವು-ನೋವು, ಮೊದಲಾದವುಗಳು ತುಂಬಿ ತುಳುಕುತ್ತಿರುವ ಇಂದಿನ ಅಂಧಮಯ ದಿನಮಾನದಲ್ಲಿ ಬೆಳಕಾಗಿ ತೋರುತ್ತಿರುವುದು ಶರಣತತ್ವ.
ಮನುಷ್ಯನ ಸಹಜ ಬದುಕಿಗೆ ಕುಂದು ಉಂಟಾಗಿದೆ. ಶರಣರ ವಿಚಾರಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಮನುಷ್ಯ ಧರ್ಮದತ್ತ್ತ ವಾಲುವುದು. 12ನೇ ಶತಮಾನದ ಶರಣರು ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿದರು ಮಾತ್ರವಲ್ಲ ಅವರು ಮಾನಸಿಕ ನೆಮ್ಮದಿಗೆ ಬೇಕಾದ ತನು ಶುಚಿ, ಮನ ಶುಚಿ, ಭಾವ ಶುಚಿ ಮಾರ್ಗಗಳನ್ನು ತೋರಿದರು. ನುಡಿದಂತೆ-ನಡೆದುದು ಶರಣರ ಹೆಗ್ಗಳಿಕೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 