ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ

ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ Mother and son fall into river: Boy found after four days: Operation continues for 4 consecutive day

ಸಂಕೇಶ್ವರ : ಕಳೆದ ನಾಲ್ಕು ದಿನಗಳ ಹಿಂದೆ ತಾಯಿ, ಮಗ ಹಿರಣ್ಯಕೇಶಿ ನದಿ ನೀರಿಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನ ಶವವು ನಾಲ್ಕು ದಿನಗಳ ಬಳಿಕ ಬಿದ್ದ ಸ್ಥಳಬಿಟ್ಟು ಸುಮಾರು 1.5 ಕಿಲೋಮೀಟರ್ ದೂರದಲ್ಲಿ ಶುಕ್ರವಾರ ಪತ್ತೆಯಾಗಿದೆ. 

    ಕಳೆದ ನಾಲ್ಕು ದಿನಗಳ ಹಿಂದೆ ಸಂಕೇಶ್ವರದ ಹನುಮಾನ ನಗರದ  ತಾಯಿ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಮಗ ಸುಪ್ರೀತ ಸುಧಾಕರ ಕುಟೋಳಿ(9) ಇವರಿಬ್ಬರು ಸಂಕೇಶ್ವರದ ಶಂಕರಲಿಂಗ ಮಠದ ಹಿಂದಿನ ಹಿರಣ್ಯಕೇಶಿ ನದಿಯ ನೀರಿನಲ್ಲಿ ಮುಳಗಿದ್ದರು. 

    ತಾಯಿಯ ಶವವನ್ನು ಅದೇ ದಿನಾ ರಾತ್ರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಿಂದ ಹೊರತೆಗೆದಿದ್ದರು. 

   ಆದರೆ ಮಗನ ಶವವು ಕಳೆದ ನಾಲ್ಕು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್ ಡಿಆರ್ ಎಫ್ ತಂಡವು ಶೋಧ ಕಾರ್ಯ ನಡೆಯುತ್ತಿತ್ತು. 

    ಆದರೆ ಬಾಲಕನ ಶವವು ನದಿಯಲ್ಲಿ ಬಿದ್ದ ಸ್ಥಳವನ್ನು ಬಿಟ್ಟು ಸುಮಾರು 1.5 ಕಿಲೋ ಮೀಟರ್ ವರೆಗೆ ಮುಂದೆ ಹೋಗಿದ್ದು, ಶುಕ್ರವಾರ ಬೆಳಿಗ್ಗೆ ದೊರೆತಿದೆ. ಇದರಿಂದಾಗಿ ತಾಯಿ, ಮಗನ ದುರಂತ ಅಂತ್ಯ ಕಂಡಿದೆ.