ಅಕ್ರಮ ಅಕ್ಕಿ ದಾಸ್ತಾನಿನ ಮೇಲೆ ತಹಶೀಲ್ದಾರ ದಾಳಿ

ಅಕ್ರಮ ಅಕ್ಕಿ ದಾಸ್ತಾನಿನ ಮೇಲೆ ತಹಶೀಲ್ದಾರ ದಾಳಿ Tahsildar raids illegal rice storage

ಲೋಕದರ್ಶನ ವರದಿ 

ಜಮಖಂಡಿ 25: ನಗರದ ಕಡಕೋಳ ರಸ್ತೆಯ ಕತಾಟೆ ಪ್ಲಾಟ್‌ದ ಆಯಿಷ್ ಮೋಹಲ್ಲಾ ಗಲ್ಲಿಯಲ್ಲಿ  ರಾತ್ರಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸರಕಾರದಿಂದ ಹಂಚಿಕೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಸುಮಾರು 3700 ಕೆಜಿಯ 1,28,20 ರೂ.ಗಳ ಬೆಲೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ ಮೇಲೆ ತಹಶೀಲ್ದಾರ ಅನೀಲ ಬಡಿಗೇರ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.  

ನಗರದ ಕತಾಟೆ ಪ್ಲಾಟ್‌ನ ಆಯಿಷ್ ಮೋಹಲ್ಲಾ ಗಲ್ಲಿಯಲ್ಲಿ ಸಾರ್ವಜನಿಕ ರಸ್ತೆ ಪಕ್ಕ ಅಕ್ರಮವಾಗಿ ಸಂಗ್ರಹಿಸಿದ 71 ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದು. ಪ್ರತಿ ಕೆಜಿಗೆ  34,60, ರೂ,ಗಳಂತೆ ಸುಮಾರು 1,28,20 ರೂ,ಗಳ ಬೆಲೆ ಅಕ್ಕಿಯನ್ನು ವಶಪಡಿಸಿಕೊಂಡಿದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿಯ ಕಾಳು ಬಡವರಿಗೆ ಹಂಚಿಕೆಯಾಗಬೇಕಿದ್ದ ಸರ್ಕಾರಿ ಅಕ್ಕಿಯನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. 

ಭರ್ಜರಿ ಕಾರ್ಯಾಚರಣೆಯ ದಾಳಿಯಲ್ಲಿ ತಹಶೀಲ್ದಾರ ಅನೀಲ ಬಡಿಗೇರ. ಆಹಾರ ನೀರೀಕ್ಷ ಸುರೇಶ ಕುರಿ, ಶಿರೆಸ್ತೇದಾರ ಎ.ಆರ್‌. ತಾಳಿಕೋಟಿ, ಜಮಖಂಡಿ ಗ್ರಾಮೀಣ ವಲಯ ಆಹಾರ ಶಿರಸ್ತೇದಾರ ಆನಂದ ರೇವು ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ಕಾರಾಜಣಗಿ, ಹುನ್ನೂರ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ ಸೇಬಣ್ಣಗೋಳ, ಪೊಲೀಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಶಂಕರ ಆಸಂಗಿ, ರಾಜು ಪೂಜಾರಿ, ಶೇಖರ ನಾಯಕ ಸೇರಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟಿದ ಸರಕಾರದಿಂದ ಹಂಚಿಕೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.