ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ Five criminals arrested, 416 grams of gold ornaments worth Rs 67.93 lakh seized: Malamaruti police p

ಬೆಳಗಾವಿ : ನಗರದ ವಿವಿಧ ಬಡಾವಣೆಗಳಲ್ಲಿ ಯಾರಿಲ್ಲದ ಮನೆಗಳನ್ನು ಟಾರ್ಗೆಟ್ ‌ಮಾಡಿ ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದ ಐವರು ಮನೆಗಳ್ಳರನ್ನು ಬಂಧಿಸಿರುವ ಮಾಳಮಾರುತಿ ಪೊಲೀಸರು ಬಂಧಿತರಿಂದ 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದು ನಗರ ಪೊಲೀಸ ಆಯುಕ್ತ ಭೂಷಣ ಭೋರಸೆ ಅವರು ಹೇಳಿದರು. 

   ನಗರದಲ್ಲಿ ಶುಕ್ರವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ‌ಈ ವಿಷಯ ತಿಳಿಸಿದ ಅವರು, ಈ ಕಳ್ಳತನ ಪ್ರಕರಣಗಳಲ್ಲಿ ರಿಹಾನ ಮೈನುದ್ದೀನ ಧಫೇದಾರ @ ಪಠಾಣ (18) ಸಾ: ವೈಭವ ನಗರ ಬೆಳಗಾವಿ) ಹಾಗೂ ಮಲೀಕ ಖಲೀಲ ಹುಬ್ಬಳ್ಳಿ (26), ಸಾ: ವೀರಭದ್ರ ನಗರ 1 ನೇ ಕ್ರಾಸ್ ಬೆಳಗಾವಿ), ಅರಮಾನ ಅಕ್ಷರ ಶೇಖ(18) (ಸಾ: ಜುಗಾಯಿ ನಗರ ಮಾಸಾಬ ಕುಡಚಿ ತಾ: ರಾಯಬಾಗ ಹಾಲಿ: ವೀರಭದ್ರ ನಗರ ಬೆಳಗಾವಿ) ಹಾಗೂ ಸದರಿ ಕಳ್ಳತನದ ಮಾಡಿದ ಚಿನ್ನ ಹಾಗೂ ಬೆಳ್ಳಿಯಆಭರಣಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪಿತರಾದ ಖಲೀಲ ಇಸ್ಮಾಯಿಲ್ ಹುಬ್ಬಳ್ಳಿ (57) (ಸಾ: ವೀರಭದ್ರ ನಗರ ಬೆಳಗಾವಿ) ಶಾನವಾಜ ಸಿರಾಜುದ್ದೀನ ಪಠಾಣ (23) (ಸಾ: ವೀರಭದ್ರ ನಗರ ಬೆಳಗಾವಿ) ಇವರನ್ನು  ವಶಕ್ಕೆ ಪಡೆಯಲಾಗಿದೆ ಎಂದರು. 

    ಇವರ ಬಳಿಯಲ್ಲಿದ್ದ ಸುಮಾರು 64,47,690 ರೂ. ಮೌಲ್ಯದ 415.98 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂಸುಮಾರು 3,45,735 ರೂ ಮೌಲ್ಯದ 1329.75 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 67,93,425 ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

   ಬೆಳಗಾವಿಯ ಅಮನ ನಗರ, ಉಜ್ವಲ ನಗರ, ಮಾರುತಿ ನಗರ, ಶಾಹೂ ನಗರ, ಹಾಗೂ ವೀರಭದ್ರ ನಗರಗಳಲ್ಲಿ ಮನೆಗಳ ಬೀಗವನ್ನು ಮುರಿದು ಮನೆಯಲ್ಲಿ ಇರುತ್ತಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಈ ಖದೀಮರು ಕಳ್ಳತನ ಮಾಡುತ್ತಿದ್ದರು ಎಂದರು. ನಗರ ಪೊಲೀಸ್ ಆಯುಕ್ತರು ಹಾಗೂ ಉಪ-ಪೊಲೀಸ್ ಆಯುಕ್ತರು (ಕಾ&ಸು), ಮತ್ತು ಉಪ-ಪೊಲೀಸ್ ಆಯುಕ್ತರು (ಅ&ಸಂ) ಹಾಗೂ ಎ.ಸಿ.ಪಿ. ಮಾರ್ಕೇಟ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ಈ ಪ್ರಕರಣ ವನ್ನು‌ ಮಾಳಮಾರುತಿ ಪೊಲೀಸರು ಭೇದಿಸಿದರು. 

     ಈ ಕಳ್ಳತನ ಭೇದಿಸುವ  ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಬಿ.ಆರ್.ಗಡ್ಡೆಕರ, ಪಿಎಸ್ ಐ ಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ್ ಹುಳಗೇರಿ, ಉದಯ ಪಾಟೀಲ, ಪಿ.ಎಮ್.ಮೋಹಿತೆ ಹಾಗೂ ಮಾಳಮಾರುತಿ ಪೊಲೀಸ್ ಠಾಣೆ ಸಿಬ್ಬಂದಿ ಜನರಾದ  ಬಿ.ಎಸ್.ಬಸ್ತವಾಡ, ಅರುಣ ಕಾಂಬಳೆ, ಎಮ್.ಜಿ.ಕುರೇರ, ಜಗನ್ನಾಥ, ಭೋಸಲೆ, ಬಿ.ಎಮ್.ಕಲ್ಲಪ್ಪನವರ, ಸಿ.ಜೆ.ಚಿನ್ನಪ್ಪಗೋಳ, ಕೆ.ಬಿ.ಗೌರಾಣಿ, ಸಿ.ಐ.ಚಿಗರಿ, ಮಹೇಶ ಒಡೆಯರ,ಮಲ್ಲಿಕಾರ್ಜುನ ಗಾಡವಿ, ದೇವರಡ್ಡಿ ಹೆಬ್ಬಾಳ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಜನರಾದ ರಮೇಶ ಅಕ್ಕಿ, ಮಹಾದೇವ ಕಾಸೀದ, ಹಾಗೂ ಬೆರಳು ಮುದ್ರೆ ವಿಭಾಗದ ಇನ್ಸಪೆಕ್ಟರ ಆನಂದ ಮೇತ್ರಿ, ಬಾಹುಬಲಿ ಅನಗಾಲೆ, ವಿಶ್ವನಾಥ ಮಠಪತಿ, ಸೋಮಶೇಖರ, ಸಂತೋಷ ಇವರು ಪ್ರಶಂಸನಿಯ ಕೆಲಸ ಮಾಡಿದ್ದು ಇರುತ್ತದೆ. ಇವರ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.