ಸಂಸ್ಕಾರಯುತ ಶಿಕ್ಷಣದಿಂದ ಪ್ರಗತಿ ಸಾಧ್ಯ: ರಾಜ್ಯಪಾಲ ಥಾವರಚಂಧ್ ಗೆಹ್ಲೋಟ್

ಸಂಸ್ಕಾರಯುತ ಶಿಕ್ಷಣದಿಂದ ಪ್ರಗತಿ ಸಾಧ್ಯ: ರಾಜ್ಯಪಾಲ ಥಾವರಚಂಧ್ ಗೆಹ್ಲೋಟ್  Progress is possible through cultured education: Governor Thawar Chand Gehlot

ಲೋಕದರ್ಶನ ವರದಿ 

ಬಾಗಲಕೋಟೆ ವಿವಿಯ ಪ್ರಥಮ ಘಟಿಕೋತ್ಸವಽ 16 ಸ್ನಾತಕೋತ್ತರ ಪದವಿಧರರಿಗೆ ಚಿನ್ನದ ಪದಕ  

ಬಾಗಲಕೋಟೆ 25: ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಪ್ರದಾಯಗಳನ್ನು ಬೆಳೆಸಿಕೊಂಡು, ಆ ಸಂಪ್ರದಾಯಗಳ ಜೊತೆ ಆಧುನಿಕತೆಯಲ್ಲಿ ಮುನ್ನಡೆಯಬೇಕಿದೆ ಎಂದು ರಾಜ್ಯದ ರಾಜ್ಯಪಾಲರಾದ ಥಾವರಚೆಂದ್ ಗೆಹ್ಲೋಟ್ ಹೇಳಿದರು.  

ಜಮಖಂಡಿ ನಗರದ ಬಿಎಲ್ಡಿಇಎ ಸಂಸ್ಥೆಯ ಆವರಣದಲ್ಲಿರುವ ದರ್ಬಾರ್ ಸಭಾಂಗಣದಲ್ಲಿ ಜರುಗಿದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ 16 ಜನ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸಹಿತ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ ನೀವೆಲ್ಲಾ ಬೆಳೆದುಕೊಂಡು ಹೋಗಬೇಕಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಗವಹಿಸಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.  

ಉನ್ನತ ಮಟ್ಟದ ಶಿಕ್ಷಣದಲ್ಲಿ ಸಾಧಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನಿಮ್ಮ ದೇಶದಲ್ಲಿ ನೀವು ಯಶಸ್ವಿಯಾಗಿರಿ. ನಿಮ್ಮ ಸಾಧನೆಗೆ ಕಠಿಣ ಶ್ರಮ ಪಟ್ಟಿದ್ದೀರಿ. ಜೀವನದ ಯಶಸ್ವಿಗೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಉತ್ತಮ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ತಿಳಿಸಿದರು. ಜೀವನದ ಬದಲಾವಣೆ ಮತ್ತು ಬೆಳೆವಣಿಗೆಯಲ್ಲಿ ನಿರಂತರ ಕಲಿಕೆ, ಚಿಂತನೆ ಮತ್ತು ದೈವಿಕ ಜ್ಞಾನದ ತಿಳುವಳಿಕೆ ಅಗತ್ಯ. ಆದ್ದರಿಂದ ನೀವು ನಿರಂತರವಾಗಿ ಕಲಿಯುವದನ್ನು ಮುಂದುವರಿಸಬೇಕು ಎಂದರು   

ಮುಖ್ಯ ಅತಿಥಿ ಹಾಗೂ ಘಟಿಕೋತ್ಸವದ ಭಾಷಣಕಾರರಾಗಿ ಆಗಮಿಸಿದ್ದ ಮಹಾರಾಷ್ಟ್ರ ನಾಗಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ನ ನಿರ್ದೇಶಕ ಡಾ.ಭೀಮರಾಯ ಮೇತ್ರಿ ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದಿರಿ. ಏಕೆಂದರೆ ನೀವು ಡಿಜಿಟಲ್ ಜಗತ್ತಿನ ಜನಿಸಿದ್ದೀರಿ. ಇಂದು ದೇಶ ಚಲನೆಯಲ್ಲಿದ್ದು, ಭಾರತ ಜಾಗತಿ ಬ್ರ್ಯಂಡ್ ಆಗಿದೆ. 2027-28ರಲ್ಲಿ ಭಾರತವು 3ನೇ ಅತೀದೊಡ್ಡ ಜೆಡಿಪಿಯೊಂದಿಗೆ ಆರ್ಥಿಕವಾಗಿ ಮುಂದೆ ಬರಲಿದೆ. ಭಾರತ ಇಂದು ಆತ್ಮ ನಿರ್ಭರ ಭಾರತ ಮತ್ತು ವೀಕ್ಷಿತ ಭಾರತದೊಂದಿಗೆ ಉತ್ತಮ ವೇಗದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.  

ಸಾಧನೆ, ಶ್ರೇಷ್ಟತೆ ಮನ್ನಣೆಗೆ ಕಾರಣವಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಮನ್ನಣೆ ಗೌರಕ್ಕೆ ಕಾರಣವಾದರೆ, ಗೌರವವು ಅಧಿಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಂಸ್ಥೆ, ರಾಷ್ಟ್ರವನ್ನು ಹೆಮ್ಮೆಪಡಿಸಲು ಒಂದೇ ಒಂದು ಮಾರ್ಗವೆಂದರೆ ಕಾರ್ಯಕ್ಷಮತೆಯಾಗಿದೆ. ದಿನನಿತ್ಯದ ಜೀವನದಲ್ಲಿ ಶ್ರಷ್ಟತೆಯನ್ನು ಅಬ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಮಾತ್ರ ಇದನ್ನು ಸಾಧಿಸಬಹುದಾಗಿದೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದರು. ನೀವು ಮಾಡುವ ಯಾವುದೇ ಕೆಲಸದಲ್ಲಿ ಜಾಗತಿಕ ಅತ್ಯುತ್ತಮವಾದುದನ್ನು ಮಾನದಂಡವಾಗಿ ಇರಿಸಿ, ನಿಮ್ಮ ಮುಂದಿನ ಹೆಜ್ಜೆ ಸಮಾಜದಲ್ಲಿ ನಾಯಕನಾಗುವ ಗುರಿಯನ್ನು ಹೊಂದಬೇಕು ಎಂದರು.  

ಈ ಸಂದರ್ಭದಲ್ಲಿ ಮೂರು ಜನರಿಗೆ ಡಾಕ್ಟರೇಟ ಹಾಗೂ 16 ಜನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಜೊತೆಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಾಗಲಕೋಟೆ ವಿವಿಯ ಕುಲಪತಿ ಪ್ರೊ.ಆನಂದ ಶರದ್ ದೇಶಪಾಂಡೆ, ಕುಲಸಚಿವ ಸೋಮಲಿಂಗ ಗೆಣ್ಣೂರ, ಮೌಲ್ಯಮಾಪನ ವಿಭಾಗದ ಕುಲಸಚಿವೆ ಪ್ರೊ.ಲತಾ ಕೆ.ಜಿ, ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ ಸೇರಿದಂತೆ ಸಿಂಡಿಕೇಟ ಸದಸ್ಯರು, ವಿದ್ಯಾವಿಷಯಕ್ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.  

ಗೌರವ ಡಾಕ್ಟರೇಟ್ ಪ್ರಧಾನ  

ಪದ್ಮಭೂಷಣ ಪ್ರಶಸ್ತಿ ್ದ್ಘ್ಠ್ಲೃೂೃಿ  ಮತ್ತು ಪ್ರಸಿದ್ದ ಬಾಹ್ಯಾಕಾಶ ವಿಜ್ಞಾನಿ ಎಸ್‌.ನಂಬಿ ನಾರಾಯಣನ್ ಭಾರತಿಯ ಬಾಹ್ಯಕಾಶ ಕಾರ್ಯಕ್ರಮಕ್ಕೆ ಅವರ ಕೋಡುಗೆ ಮತ್ತು ದ್ರವ ಪ್ರೋಪಲ್ಷನ್ ತಂತ್ರಜ್ಞಾನದಲ್ಲಿ ಅವರ ಪ್ರವರ್ತಕ ಕಾರ್ಯ ಗುರುತಿಸಿ ಹಾಗೂ ಟೆಕ್ ಉದ್ಯಮಿಯಾದ ಮಹೇಶ ಬೆಲ್ಲದ ಅವರ ಲೋಕೋಪಕಾರಿ ತಂತ್ರಜ್ಞಾನ ಉದ್ಯಮಿ ಮತ್ತು ಅವರು ಕಟ್ಟಿದ ಶಿಕ್ಷಣಸಂಸ್ಥೆ ಹಾಗು ಸಮಾಜಕ್ಕೆ ನೀಡಿದ ಕೋಡುಗೆಗಳನ್ನು ಗುರುತಿಸಿ ಈ ಇಬ್ಬರಿಗೆ  ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು  ಬಾಗಲಕೋಟೆ ವಿವಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.  

16 ಜನ ಸ್ನಾತಕೋತ್ತರ ಪದವೀಧರರಿಗೆ ಚಿನ್ನದ ಪದಕ ಪ್ರಧಾನ  

ಉತ್ತಮ ಸಾಧನೆ ಮಾಡಿದ 16 ಜನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರಧಾನ ಮಾಡಿದರು. ಆಯಿಷಾ ಅಲಾಸ್, ಪ್ರಿಯಾಂಕ ಹಡಪದ, ಭಾಗ್ಯಶ್ರೀ ಗವಾಲಿ, ಅನೀಲ ತೆಗ್ಗಿ, ಗಾಯತ್ರಿ ಲಲಕಿ, ಜ್ಯೋತಿ ದಂಡಿನ, ವಜ್ರಕುಮಾರ ಕುಸಾನಲ್, ಗುರುರಾಜ ಗೌಡರ, ಸುಷ್ಮಾ ತಂಬಕು, ರಾಜಕುಮಾರ ಅರಳಗುಂಡಿ, ನಿಶ್ಮಿತಾ ಚೂರಿ, ಸಾತ್ವಿಕಾ, ಐಶ್ವರ್ಯ ಕೊಡಗ, ರಾಜೇಶ್ವರಿ ಹಿರೇದೇಸಾಯಿ, ಸುಜಾತಾ ಲವಟೆ, ಸನ್ಮತಿ ಕುರ​‍್ೆ ಅವರು ಚಿನ್ನದ ಪದಕ ಪಡೆದುಕೊಂಡರು.