ಸಂಚಾರಿ ನಿಯಮ ಪಾಲನೆ ನಮ್ಮೆಲ್ಲರ ಕರ್ತವ್ಯ : ಎಸ್ಪಿ

ಬಳ್ಳಾರಿ.16: ಸಂಚಾರಿ ನಿಯಮಗಳ ಪಾಲನೆ ಮತ್ತು ನಿರ್ವಹಣೆ ಮಾಡುವುದು ಕೇವಲ ಪೊಲೀಸ್ ಇಲಾಖೆಯ ಮಾತ್ರ ಸೀಮಿತ ಅಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಬ್ದಾರಿಯಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ಹೇಳಿದರು. 

ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಸೆಂಟನರಿ ಹಾಲ್ನಲ್ಲಿ ಮಂಗಳವಾರ ಸಂಜೆ ಬಳ್ಳಾರಿ ಸಂಚಾರಿ ಪೊಲೀಸ್ ಮತ್ತು ಸಾರಿಗೆ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2020 ಗೆ ಚಾಲನೆ ನೀಡಿ ಮಾತನಾಡಿದರು. 

ರಾತ್ರಿ ವೇಳೆ ಸಂಚಾರ ಮಾಡುವ ಪ್ರಯಾಣಿಕರಿಗೆ ಹೆಚ್ಚಿನ ದರ ವಿಧಿಸುವುದು ಸರಿಯಲ್ಲ,   ಮಾನವೀತೆಯ ದೃಷ್ಠಿಯಿಂದ ಪ್ರಯಾಣಿಕರೊಂದಿಗೆ ವತರ್ಿಸುವಂತೆ ಆಟೋ ಡ್ರೈವರ್ಗಳಿಗೆ ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್ ಅವರು ಮಾತನಾಡಿ, ಮೂಲ ದಾಖಲಾತಿಗಳಿಲ್ಲಿದೆ, ಪರವಾನಿಗೆ ಇಲ್ಲದೆ ಆಟೋ ಚಲಾಯಿಸುವುದು ಅಪರಾಧ. ಪರವಾನಿಗೆ ಇಲ್ಲದ ಚಾಲಕರು ಕಡ್ಡಾಯವಾಗಿ ಪರವಾನಿಗೆಯನ್ನು ಮಾಡಿಕೊಳ್ಳಬೇಕು ಎಂದರು. ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನೊಂದಾಯಿತ ಆಟೋ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಸಲಾಯಿತು.  

ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ರಾಮರಾವ್, ಎ.ಆರ್.ಟಿ.ಒ ಶ್ರೀನಿವಾಸ್. ಸನ್ಮಾರ್ಗ ಗೆಳೆಯರ ಬಳಗದ ಲಕ್ಷ್ಮೀಕಾಂತ್ರೆಡ್ಡಿ, ವಿಮ್ಸ್ನ ಜಿಲ್ಲಾ ನೇತ್ರಾ ಸಂಚಾರಿ ವೈದ್ಯರಾದ ಡಾ. ಅಂಜಿನೇಯ ಪ್ರಸಾದ್ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.