ಜೈಪುರ್, ಏ.28, ರಾಜಸ್ಥಾನದಲ್ಲಿ ಕೊರೊನಾ ಪೀಡಿತದಿಂದ ಸಾವನ್ನಪ್ಪಿದವರ ಸಂಖ್ಯೆ ಐವತ್ತನ್ನು ದಾಟಿದೆ. ಕೋಟಾದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದರಿಂದ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿದೆ. ಜೈಪುರ್ ನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಜೋಧಪುರ್, ಕೋಟಾದಲ್ಲಿ ತಲಾ ಆರು, ಭರತಪೂರ್, ಭಿಲವಾಡ್ ತಲಾ ಎರಡು, ಅಲವರ್, ಬಿಕಾನೆರ್, ನಾಗೌರ್ ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ 66 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೀಡಿತರ ಸಂಖ್ಯೆ 2,328ಕ್ಕೆ ಏರಿದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 88 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ವೈದ್ಯಕೀಯ ಸಚಿವ ಡಾ.ರಘು ಶರ್ಮಾ ಹೇಳಿದ್ದಾರೆ. ಈವರೆಗೆ ರಾಜ್ಯದಲ್ಲಿ 766 ರೋಗಿಗಳನ್ನು ಗುಣಪಡಿಸಲಾಗಿದ್ದು, 584 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜೈಪುರದಲ್ಲಿ ಅತಿ ಹೆಚ್ಚು 850, ಜೋಧ್‌ಪುರ 388, ಕೋಟಾ 184, ಅಜ್ಮೀರ್ 135, ಟೋಂಕ್ 126, ನಾಗೌರ್ 116 ಮತ್ತು ಭರತ್‌ಪುರ 110 ಪ್ರಕರಣಗಳು ದಾಖಲಾಗಿವೆ. 244 ರೋಗಿಗಳ ಚೇತರಿಕೆಯೊಂದಿಗೆ, ಈಗ 584 ರೋಗಿಗಳು ಜೈಪುರದಲ್ಲಿ ಉಳಿದಿದ್ದಾರೆ.