ಸಂಭ್ರಮದ ತ್ಯಾಗವೀರ ಸಿರಸಂಗಿ ಲಿಂಗರಾಜ 158 ಜಯಂತಿ ಉತ್ಸವ

ಲೋಕದರ್ಶನ ವರದಿ

ಬೆಳಗಾವಿ 10: ಸಮಾಜಕ್ಕೆ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಸಿರಸಂಗಿ ಲಿಂಗರಾಜರು ಶರಣರ ದಾಸೋಹ ತತ್ವಕ್ಕೆ ಅನ್ವರ್ಥವೆನಿಸಿದವರು. ಶರಣರ ಕಾಯಕ-ದಾಸೋಹ ಸಿದ್ಧಾಂತಗಳನ್ನು ನಿಜಅರ್ಥದಲ್ಲಿ ಅನುಕರಣೆಗೆ ತರುವ ಮೂಲಕ ಸಮಾಜದ ಅರ್ಥಸಂಪತ್ತನ್ನು ಹೆಚ್ಚಿಸಿದರೆಂದು ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ ಹೇಳಿದರು.

ಅವರು ಬೆಳಗಾವಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ದಿನಾಂಕ 10.1.2019 ರಂದು ಜರುಗಿದ ತ್ಯಾಗವೀರ ಸಿರಸಂಗಿ ಲಿಂಗರಾಜರ 158 ಜಯಂತಿ ಉತ್ಸವದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.

ಲಿಂಗರಾಜರು ನಾಡಿನಲ್ಲಿ ತಮ್ಮ ತ್ಯಾಗದಿಂದ ಅಮರವಾಗಿ ಉಳಿದಿದ್ದಾರೆ. ಬದುಕಿನಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸಿದರೂ ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಸಮಾಜಮುಖಿಯಾಗಿ ಬಾಳಿದರು. ಅವರು ಬದುಕಿದ್ದು ಕೇವಲ 40 ವರ್ಷ, ಆದರೆ ಅವರ ಸಾಮಾಜಿಕ ಕಳಕಳಿ ಕಾಳಜಿಗಳು ಅವರನ್ನು ಅಮರರನ್ನಾಗಿಸಿದೆ. ಕೃಷಿಚಿಂತಕರಾಗಿ ಅವರ ಮಾಡಿರುವ ಕೆಲಸಗಳು ಇಂದಿಗೂ ಮಾರ್ಗದಶರ್ಿಯೆನಿಸಿವೆ. 

ಶಿಕ್ಷಣ, ವ್ಯಾಪಾರ, ಧಾಮರ್ಿಕ ಕಾರ್ಯಗಳನ್ನು ಮೊದಲ್ಗೊಂಡು, ಕೆರೆ ಭಾವಿಗಳನ್ನು ಕಟ್ಟಿಸಿದ ಅವರ ಸೇವಾಭಾವ ಇಂದಿಗೂ ಹಸಿರಾಗಿದೆ. ನೂರಾರು ಕಷ್ಟಗಳನ್ನು ಎದುರಿಸಿದ ಲಿಂಗರಾಜರು ಕ್ಷಯರೋಗಕ್ಕೆ ತುತ್ತಾದಾಗ ತಮ್ಮ ಸಮಸ್ತ ಚಿರಸ್ಥಿರಾಸ್ತಿಯನ್ನು ಸಮಾಜದ ಬಡ ಮಕ್ಕಳಿಗೆ ಮುಡುಪಾಗಿಟ್ಟರು. ಅವರು ಬರೆದ ಇಚ್ಛಾಪತ್ರ, ಇಂದಿಗೂ ಅಮರಪತ್ರವಾಗಿದೆ. ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಶಿರಸಂಗಿ ನವಲಗುಂದ ಏಜ್ಯುಕೇಶನ್ ಟ್ರಸ್ಟ್ ಸಾವಿರಾರು ಮಕ್ಕಳಿಗೆ ಧನಸಹಾಯವನ್ನು ನೀಡಿರುವುದೇ ಇದಕ್ಕೆ ಸಾಕ್ಷಿ. ಅಂತೆಯೆ ಲಿಂಗರಾಜರ ನೆನಪು ಸುಖಸಮುದ್ರ. ಕೆಎಲ್ಇ ಸಂಸ್ಥೆಯು ತನ್ನೆಲ್ಲ ಅಂಗಸಂಸ್ಥೆಗಳಲ್ಲಿ ಲಿಂಗರಾಜರ ಜಯಂತಿ ಉತ್ಸವವನ್ನು ಆಚರಿಸುತ್ತಾ ಇಂದಿನ ಯುವಜನಾಂಗಕ್ಕೆ ಈ ಪುಣ್ಯಪುರುಷರನ್ನು ಪರಿಚಯಿಸುತ್ತಿರುವುದು ಸ್ತುತ್ಯಾರ್ಹವೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಕೌಜಲಗಿಯವರು ಮಾತನಾಡುತ್ತಾ, ಸಿರಸಂಗಿ ಲಿಂಗರಾಜರು ಪ್ರಾರ್ಥಸ್ಮರಣೀಯರು. ಅವರು ಅಲ್ಪಾಯುಷಿಗಳಾದರೂ ತಮ್ಮ ಸೇವೆಯಿಂದ ಜೀವಂತವಾಗಿ ಉಳಿದಿದ್ದಾರೆ. ವ್ಯಕ್ತಿಗಿಂತಲೂ ಸಮಾಜ ಮುಖ್ಯವೆಂಬುದನ್ನು ಸಾಬೀತು ಪಡಿಸಿದ ಅವರ ನಡೆನುಡಿ ಇಂದಿಗೂ ಅನುಕರಣೀಯವೆನಿಸಿದೆ. ಅವರು ಸ್ಥಾಪಿಸಿದ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಧನಸಹಾಯ ಪಡೆದ ಡಾ.ನಂದೀಮಠ, ಡಾ.ಡಿ.ಸಿ.ಪಾವಟೆ, ಡಾ.ಆರ್.ಸಿ.ಹಿರೇಮಠ, ಹೇಮಣ್ಣ ಕೌಜಲಗಿಯಂತಹ ಹಲವಾರು ಜನರು ಸಮಾಜಕಟ್ಟುವಲ್ಲಿ ಮಹತ್ವ ಪಾತ್ರವಹಿಸಿದರು. ಇಂತಹ ಪುಣ್ಯಪುರುಷರಿಂದ ಪ್ರಭಾವಿತರಾದ ಕೆಎಲ್ಇ ಸಂಸ್ಥೆಯ ಏಳ ಜನ ಶಿಕ್ಷಕರು, ಲಿಂಗರಾಜ ಹೆಸರನ್ನು ಪ್ರಥಮ ಕಾಲೇಜಿಗೆ ನಾಮಕರಣ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದರು. ಕೆಎಲ್ಇ ಅಂಗಳದಲ್ಲಿ ಲಿಂಗರಾಜರು ಸ್ಥಾಯಿಯಾಗಿ, ಜೀವಂತವಾಗಿ ನೆಲೆಸಿದ್ದಾರೆಂದು ನುಡಿದರು. 

ವೇದಿಕೆಯ ಮೇಲೆ ಲಿಂಗರಾಜ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ತಟವಟಿ, ಕಾಯರ್ಾಧ್ಯಕ್ಷರಾದ ಡಾ.ಆರ್.ಎಂ.ಪಾಟೀಲ ಉಪಸ್ಥಿತರಿದ್ದರು. ಡಾ.ಗುರುದೇವಿ ಹುಲೆಪ್ಪನವರಮಠ ಅತಿಥಿಗಳನ್ನು ಪರಿಚಯಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕಾರ್ಯದಶರ್ಿಗಳಾದ ಡಾ.ಎಚ್.ಎಂ. ಚನ್ನಪ್ಪಗೋಳ ವಂದಿಸಿದರು. ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾಥರ್ಿಗಳು ವಚನ ಪ್ರಾರ್ಥನೆಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಯಂತಿ ಉತ್ಸವದ ಅಂಗವಾಗಿ ಜರುಗಿದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಶಿವಾನಂದ ಕೌಜಲಗಿಯವರು ಪಾರಿತೋಷಕವನ್ನು ವಿತರಿಸಿದರು.

ಕೆಎಲ್ಇ ಸಂಸ್ಥೆಯ ನಿದರ್ೇಶಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಬಿ.ಆರ್.ಪಾಟೀಲ, ಕಾರ್ಯದಶರ್ಿಗಳಾದ ಡಾ.ಬಿ.ಜಿ.ದೇಸಾಯಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಡಾ.ಎಂ.ಆರ್.ಉಳ್ಳೆಗಡ್ಡಿ, ಪ್ರಾ.ಬಿ.ಎಸ್.ಗವಿಮಠ, ಶ್ರೀಮತಿ ಸುಧಾ ಉಪ್ಪಿನ, ಶ್ರೀಮತಿ ಮಹಾಂತಶೆಟ್ಟಿ, ಮಾಜಿ ಶಾಸಕ ಬುಡ್ಡಾಕಾಯಿ, ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯರು, ಪ್ರಾಚಾರ್ಯರು, ಸಿಬ್ಬಂದಿ ಆಗಮಿಸಿದ್ದರು.

ತ್ಯಾಗವೀರ ಸಿರಸಂಗಿ ಲಿಂಗರಾಜ ಜಯಂತಿ ಉತ್ಸವದ ನಿಮಿತ್ತ ರಕ್ತದಾನ ಶಿಬಿರ:

ಲಿಂಗರಾಜ ಜಯಂತಿ ನಿಮಿತ್ತ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಸಂಯೋಜಕರಾದ ಪ್ರೊ.ಎಸ್.ಎನ್.ಮೂಲಿಮನಿ ಅವರ ನೇತೃತ್ವದಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತಭಂಡಾರಕ್ಕೆ ರಕ್ತದಾನವನ್ನು ಮಾಡಲಾಯಿತು. ಎನ್ಎಸ್ಎಸ್, ಎನ್ಸಿಸಿ ಹಾಗೂ ಪ್ರಾಧ್ಯಾಪಕ ವೃಂದವರು ಸುಮಾರು 80 ಯುನಿಟ್ ರಕ್ತದಾನವನ್ನು ಮಾಡಿದರು. ಶಿವಾನಂದ ಕೌಜಲಗಿ, ಬಸವರಾಜ ತಟವಟಿ, ಪ್ರಾ. ಡಾ.ಆರ್.ಎಂ.ಪಾಟೀಲ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.