ಲೋಕದರ್ಶನ ವರದಿ
ಕಂಪ್ಲಿ 25: ರಾಜ್ಯ ಸಕರ್ಾರ ಸವಿತಾ ಸಮಾಜದ ಕುಲಗುರು ಸವಿತಾ ಮಹಷರ್ಿ ಜಯಂತಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಇಲ್ಲಿನ ಸವಿತಾ ಸಮಾಜದ ಅಧ್ಯಕ್ಷ ಎ.ಹನುಮಂತ ಹೇಳಿದರು.
ತಾಲೂಕಿನ ವೀರ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸವಿತಾ ಸಮಾಜವು ಶಿಕ್ಷಣ, ಉದ್ಯೋಗ ಸೇರಿದಂತೆ ನಾನಾ ರಂಗಗಳಲ್ಲಿ ಹಿಂದುಳಿದಿದೆ. ಸವಿತಾ ಸಮಾಜದ ಕಾಳಜಿಯೊಂದಿಗೆ ಸಕರ್ಾರದಿಂದ ರಥ ಸಪ್ತಮಿಯಂದು ಜಯಂತೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಸವಿತಾ ಮಹಷರ್ಿಗಳ ಜಯಂತ್ಯುತ್ಸವವನ್ನು ಸಕರ್ಾರವೇ ಆಚರಿಸಲು ಮುಂದಾಗಿದ್ದು ಸಂತಸ ತಂದಿದೆ. ಸವಿತಾ ಸಮಾಜದ ಸವರ್ಾಂಗೀಣ ಅಭಿವೃದ್ದಿಗಾಗಿ ಹಾಗೂ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ, ಪ್ರತ್ಯೇಕ ಸವಿತಾ ನಿಗಮ, ಮಂಡಳಿಯನ್ನು ರೂಪಿಸಬೇಕು, ಆರೋಗ್ಯ ಸ್ಮಾಟರ್್ ಕಾಡರ್್, ವೃತ್ತಿ ಪರಿಕರಗಳನ್ನು ಉಚಿತವಾಗಿ ಒದಗಿಸುವ ಮೂಲಕ ಸವಿತಾ ಸಮಾಜದವರ ಕಲ್ಯಾಣಾಭಿವೃದ್ದಿಗೆ ಸಕರ್ಾರ ಮುಂದಾಗಬೇಕು. ಸವಿತಾ ಮಹಷರ್ಿ ಜಯಂತ್ಯುತ್ಸವ ಆಚರಿಸುವಲ್ಲಿ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ ಸೇರಿ ಸಚಿವ ಸಂಪುಟದವರಿಗೆ ಸವಿತಾ ಸಮಾಜದವರು ಕೃತಜ್ಞತೆ ಅಪರ್ಿಸಿದ್ದಾರೆ ಎಂದು ಹೇಳಿದರು. ಈ ಸಭೆಯಲ್ಲಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಎ.ನಾಗರಾಜ, ಗೌರವಾಧ್ಯಕ್ಷ ಎಚ್.ಈರಣ್ಣ, ಉಪಾಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದಶರ್ಿ ಪಿ.ಕೃಷ್ಣ, ಖಜಾಂಚಿ ಕೆ.ಆನಂದ, ಬಿ.ಕಾಶಿವಿಶ್ವನಾಥ, ಎಂ.ಕೆ.ಗಿರಿಸ್ವಾಮಿ, ಕೆ.ವೀರಕುಮಾರ್, ಉಮೇಶ್, ದೊಡ್ಡ ಗಾದಿಲಿಂಗಪ್ಪ, ಸಣ್ಣ ಗಾದಿಲಿಂಗಪ್ಪ, ಎಂ.ವೆಂಕಟೇಶ್, ಎನ್.ಹೇಮಂತ್, ಎಂ.ನಾಗರಾಜ, ಸೂರ್ಯನಾರಾಯಣ, ಹಿರಿಯರಾದ ಪಿ.ಪಾಂಡುರಂಗ, ಎನ್.ತಿಪ್ಪೆಸ್ವಾಮಿ, ಎನ್. ಶ್ರೀನಿವಾಸ್, ಎನ್.ಗೋವಿಂದಪ್ಪ ಸೇರಿ ಸವಿತಾ ಸಮಾಜದವರು ಪಾಲ್ಗೊಂಡಿದ್ದರು.