ಅತ್ಯಾಚಾರ, ಪೋಕ್ಸೊ ಪ್ರಕರಣ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು

ಲೋಕದರ್ಶನ ವರದಿ

ಕೊಪ್ಪಳ 18: ದೇಶದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೆಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹೆಚ್ಚಾಗಿ ಅತ್ಯಾಚಾರ, ಪೋಕ್ಸೊ ಪ್ರಕರಣಗಳು ದಾಖಲಾಗುತ್ತಿದ್ದು, ಮಕ್ಕಳ ಹಿತದೃಷ್ಠಿಯಿಂದ ಮತ್ತು ಮಗುವಿನ ಸುರಕ್ಷತೆ, ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು  ಸಾಮಾಜಿಕ ಅಭಿವೃದ್ದಿಗೆ ಅನುವು ಮಾಡಿಕೊಡುವ ಸಲುವಾಗಿ ಗೌರವಾನ್ವಿತ ಸವರ್ೋಚ್ಚ ನ್ಯಾಯಾಲಯವು 'ಸು ಮೋಟೋ ರಿಟ್ ಪಿಟೀಷನ್ ನನ್ನು ದಾಖಲಿಸಿಕೊಂಡು ಪ್ರತಿ ಜಿಲ್ಲಾಮಟ್ಟದಲ್ಲಿ ಅತ್ಯಾಚಾರ,ಪೋಕ್ಸೊ ಪ್ರಕರಣಗಳನ್ನು ಶೀಘ್ರ ವಿಲೇವಾರಿಗಾಗಿ ಒಂದು ವಿಶೇಷ ತ್ವರಿತಗತಿ ನ್ಯಾಯಾಲಯವನ್ನು ಪ್ರಾರಂಭಿಸಲಾಗಿದೆ.

ಇದರಿಂದ ಮಕ್ಕಳ ಹಿತದೃಷ್ಠಿಯನ್ನು ಕಾಪಾಡಲು ಹಾಗೂ ಬಾದಿತರಿಗೆ ತ್ವರಿತವಾಗಿ ನ್ಯಾಯವನ್ನು ಒದಗಿಸಲು ಸಹಕಾರಿಯಾಗುತ್ತದೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಅತ್ಯಾಚಾರ,ಪೋಕ್ಸೊ ಪ್ರಕರಣಗಳು ವಿಲೇವಾರಿಗಾಗಿ ಬಾಕಿ ಇದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮಾನ್ಯ ಉಚ್ಚ ನ್ಯಾಯಾಲಯವು ಒಬ್ಬ ಜಿಲ್ಲಾ ನ್ಯಾಯಾಧೀಶೆಯನ್ನು ನೇಮಿಸಿದ್ದು, ಅವರು ಇಂದಿನಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಅತ್ಯಾಚಾರ,ಪೋಕ್ಸೊ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಸಿ.ಆರ್. ರಾಜಾಸೋಮಶೇಖರ ಹೇಳಿದರು. 

ಅವರು ಬುಧವಾರ ಕೊಪ್ಪಳದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ತ್ವರಿತಗತಿ ವಿಶೇಷ ನ್ಯಾಯಾಲಯದ (ಫೋಕ್ಸೋ ನ್ಯಾಯಾಲಯ) ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹನುಮೇಶ ಎಚ್.ಮುರಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,  ಬಹಳ ದಿನಗಳಿಂದ ನಮ್ಮ ಜಿಲ್ಲೆಗೆ ತ್ವರಿತಗತಿ ವಿಶೇಷ ನ್ಯಾಯಾಲಯದ ಅವಶ್ಯಕತೆ ಇತ್ತು. ಇದನ್ನು ನ್ಯಾಯಾಂಗ ಇಲಾಖೆಯು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಕಾರದೊಂದಿಗೆ ಇಂದು ಪ್ರಾರಂಭವಾಗಿರುವುದು ನಮ್ಮ ಜಿಲ್ಲೆಯ ಕಕ್ಷಿದಾರರಿಗೆ ತ್ವರಿತಗತಿ  ನ್ಯಾಯವನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ನ್ಯಾಯಾಂಗ ಇಲಾಖೆಯು ಜಿಲ್ಲಾ ಹೆಚ್ಚುವರಿ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಿರುವುದು ಸಂತಸದ ಸಂಗತಿ ಎಂದರು. 

ತ್ವರಿತಗತಿ ವಿಶೇಷ ನ್ಯಾಯಾಲಯದ  ನ್ಯಾಯಾಧೀಶರಾದ ರೇಣುಕಾ ಗಂಗಾಧರ ಕುಲಕಣರ್ಿ, ಕೊಪ್ಪಳ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಜಿ.ಸಿ.ಹಮ್ಮಿಗಿ, ಕಾರ್ಯದಶರ್ಿಯಾದ ಬಿ.ವಿ.ಸಜ್ಜನ, ಜಂಟಿ, ಖಜಾಂಚಿ ಎಸ್.ಎಚ್.ಬಂಡಿ, ಜಿಲ್ಲಾ ಸರಕಾರಿ ವಕೀಲರಾದ ರಾಜಶೇಖರ ಗಣವಾರಿ, ಸರಕಾರಿ ಅಭಿಯೋಜಕರಾದ ಟಿ.ಅಂಬಣ್ಣ, ಹಿರಿಯ ನ್ಯಾಯವಾದಿಗಳಾದ ಆಸಿಫ್ ಅಲಿ, ಸಂದ್ಯಾ ಮಾದಿನೂರ, ವಿ.ಎಂ.ಭೂಸನೂರಮಠ, ರಾಘವೇಂದ್ರ ಬಿ. ಪಾನಘಂಟಿ, ಪಿ.ಆರ್.ಹೊಸಳ್ಳಿ, ಎ.ವಿ.ಕಣವಿ, ಫೋಕ್ಸೋದ ವಿಶೇಷ ಅಭಿಯೋಜಕರಾದ ಗೌರಮ್ಮ ಎಲ್.ದೇಸಾಯಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿಯಾದ ಎಸ್.ಬಿ.ಪಾಟೀಲ ನಿರೂಪಿಸಿ, ವಂದಿಸಿದರು.