ಅಂಟಿಗುವಾ, ಆ 17 ಶನಿವಾರದಿಂದ ಕೂಲಿಡ್ಜ್ ಕ್ರಿಕೆಟ್ ಅಂಗಳದಲ್ಲಿ ನಡೆಯುವ ಭಾರತ ವಿರುದ್ಧದ ಮೂರು ದಿನಗಳ ಪಂದ್ಯಕ್ಕೆ 14 ಸದಸ್ಯರ ವೆಸ್ಟ್ ಇಂಡೀಸ್(ಎ) ತಂಡದಲ್ಲಿ ಜಾನ್ ಕ್ಯಾಂಪ್ಬೆಲ್ ಹಾಗೂ ಡೆರೆನ್ ಬ್ರಾವೊ ಅವರನ್ನು ಆಯ್ಕೆ ಮಾಡಲಾಗಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಕಾದಾಟ ಆ.22 ರಿಂದ ಆರಂಭವಾಗಲಿದ್ದು, ವೆಸ್ಟ್ ಇಂಡೀಸ್ ತಂಡದಲ್ಲಿ ಡೆರೆನ್ ಬ್ರಾವೊ ಮತ್ತು ಜಾನ್ ಕ್ಯಾಂಪ್ಬೆಲ್ ಇಬ್ಬರು ಆಡಲಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ವಿಸ್ಡನ್ ಟ್ರೋಫಿ ಟೆಸ್ಟ್ ಸರಣಿ ವೆಸ್ಟ್ ಇಂಡೀಸ್ ಗೆಲ್ಲುವಲ್ಲಿ ಡೆರೆನ್ ಬ್ರಾವೊ ಮತ್ತು ಕ್ಯಾಂಪ್ಬೆಲ್ ಪ್ರಧಾನ ಪಾತ್ರವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರನ್ನು ಭಾರತದ ವಿರುದ್ಧದ ಸರಣಿಯಲ್ಲೂ ಅವರ ಕೊಡುಗೆ ನಿರೀಕ್ಷೆ ಮಾಡಲಾಗಿದ್ದು, ಆದ್ದರಿಂದ ಅವರನ್ನು ಅಭ್ಯಾಸ ಪಂದ್ಯಕ್ಕೆ ಕಳುಹಿಸಲಾಗಿದೆ.
ವೆಸ್ಟ್ ಇಂಡೀಸ್(ಎ) ತಂಡವನ್ನು ಜಹ್ಮಾರ್ ಹ್ಯಾಮಿಲ್ಟನ್ ಮುನ್ನಡೆಸಲಿದ್ದು, ಜೆರೆಮಿ ಸೊಲೊಜನೊ. ಅಕಿಮ್ ಫ್ರಸೆರ್ ಹಾಗೂ ರೊಮೊರಿಯೊ ಶೆಫರ್ಡ್ ಅವರು ಕಳೆದ ಭಾರತ(ಎ) ವಿರುದ್ಧ ಆಡಿದ್ದರು. ಇವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್(ಎ): ಜಹ್ಮಾರ್ ಹ್ಯಾಮಿಲ್ಟನ್(ನಾಯಕ), ಡೆರೆನ್ ಬ್ರಾವೊ, ಜಾನ್ ಕ್ಯಾಂಪ್ಬೆಲ್, ಜೇಸನ್ ಮೊಹಮ್ಮದ್, ಮಾರ್ಕಿನೊ ಮಿಂಡ್ಲಿ, ಕಾವೆಮ್ ಪಿಯರ್ರೆ, ರೋವ್ಮನ್ ಪೊವೆಲ್, ರೊಮ್ಯಾರಿಯೊ ಶೆಫರ್ಡ್, ಜೆರೆಮಿ ಸೊಲೊಜನೊ, ಜೋನಾಥನ್ ಕಾರ್ಟರ್, ಕಿಯಾನ್ ಹಾರ್ಡಿಂಗ್, ಕವೆಮ್ ಹಾಡ್ಜ್ ಹಾಗೂ ಬ್ರಾಂಡನ್ ಕಿಂಗ್.